ಪುನಃ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಸೇರಲು ಅಮರಿಕ ನಿರ್ಧಾರ

ವಾಷಿಂಗ್ಟನ್‌: ಸುಮಾರು ಮೂರು ವರ್ಷಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ಹಿಂದೆ ಸರಿದಿದ್ದ ನಿರ್ಧಾರವನ್ನು ಈಗಿನ ಅಧ್ಯಕ್ಷ ಬಿಡೆನ್ ಆಡಳಿತವು ರದ್ದುಪಡಿಸಿ ಪುನಃ ಅದನ್ನು ಸೇರಲು ಸಜ್ಜಾಗಿದೆ.
ಹಿಂದಿನ ಟ್ರಂಪ್‌ ಆಡಳಿತದ ಒಂದೊಂದೇ ನಿರ್ಣಯವನ್ನು ಬದಲಿಸುತ್ತಿರುವ ಬಿಡೆನ್‌ ಈಗ ಇದನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದು, ಈ ವಾರವೇ ಈ ನಿರ್ಣಯವನ್ನು ಪ್ರಕಟಿಸುವ ಸಾಧ್ಯತೆಯಿದೆ.
ಇದನ್ನು ಜಿನೀವಾದಲ್ಲಿನ ಅಮೆರಿಕದ ಹಿರಿಯ ರಾಜತಾಂತ್ರಿಕರು ಸೋಮವಾರ ಪ್ರಕಟಿಸಲಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.ಈ ನಿರ್ಧಾರವು ಸಂಪ್ರದಾಯವಾದಿ ಶಾಸಕರು ಮತ್ತು ಇಸ್ರೇಲ್ ಪರ ಸಮುದಾಯದ ಅನೇಕರಿಂದ ಟೀಕೆಗೆ ಗುರಿಯಾಗುವ ಸಾಧ್ಯತೆಯಿದೆ.
ಟ್ರಂಪ್ 2018ರಲ್ಲಿ ವಿಶ್ವ ಸಂಸ್ಥೆ ಪ್ರಮುಖ ಮಾನವ ಹಕ್ಕುಗಳ ಮಂಡಳಿಯಿಂದ ಹೊರಬಂದಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement