ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಗೋ ಹತ್ಯಾ ನಿಷೇಧ ಕಾನೂನು ಅಂಗೀಕಾರ ವಿರೋಧಿಸಿ ಮುಂದುವರಿದ ಕಾಂಗ್ರೆಸ್‌ ಗದ್ದಲ

ಬೆಂಗಳೂರು: ವಿಧಾನಪರಿಷತ್‍ನಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ (ಗೋಹತ್ಯೆ ನಿಷೇಧ ಕಾನೂನು) ಅಂಗೀಕಾರದ ವೇಳೆ ಕಾನೂನಿನ ತೊಡಕಾಗಿದೆ ಎಂಬ ಕಾರಣ ಮುಂದಿಟ್ಟು ವಿಧಾನಪರಿಷತ್‍ನಲ್ಲಿ ಮಂಗಳವಾರ ಕೂಡ ಕಾಂಗ್ರೆಸ್ ಸದಸ್ಯರುಧರಣಿ ನಡೆಸಿದರು.
. ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲದ ನಡುವೆ ಸಭಾಪತಿಯವರ ಆಯ್ಕೆಗೆ ಚುನಾವಣೆ ನಡೆದು ಬಸವರಾಜ ಹೊರಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು. ಇದಕ್ಕೂ ಮೊದಲು ನಡೆದ ವಾದ-ವಿವಾದಗಳು ಗೋಹತ್ಯೆ ನಿಷೇಧ ಮಸೂದೆಯ ಕುರಿತಂತೆ ಸಾಕಷ್ಟು ಚರ್ಚೆಗೆ ಗ್ರಾಸವಾದವು.
ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ನಾರಾಯಣಸ್ವಾಮಿ ಸೇರಿದಂತೆ ಅನೇಕರು, ಸೋಮವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿದ್ದಾಗ ಏಕಾಏಕಿ ವಿಧೇಯಕ ಅಂಗೀಕರಿಸಲಾಗಿದೆ. ನಾವು ವಿಭಜಕ ಮತಕ್ಕೆ ಹಾಕುವಂತೆ ಮನವಿ ಮಾಡಿದರೂ ಅ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾತಿ ಪ್ರಾಣೇಶ್ ಧ್ವನಿ ಮತದ ಮೂಲಕ ಮಸೂದೆ ಅಂಗೀಕರಿಸಿದ್ದಾರೆ ಎಂದು ಆಕ್ಷೇಪಿಸಿದರು.
ಆಗ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನಿನ್ನೆ ವಿಧೇಯಕ ಅಂಗೀಕಾರಗೊಳ್ಳುವ ವೇಳೆ ಕಾಂಗ್ರೆಸ್ ಸದಸ್ಯರು ಬಾವಿಯಲ್ಲಿ ನಿಂತು ಧರಣಿ ನಡೆಸುತ್ತಿದ್ದರು. ಯಾರೂ ಕೂಡ ವಿಭಜನೆಯ ಮತ ಕೇಳಲಿಲ್ಲ ಎಂದರು. ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ ಬೊಮ್ಮಾಯಿ ಬೆಂಬಲಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು : ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಿನಲ್ಲಿ ಆತ್ಮಹತ್ಯೆ

ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಅವರು, ವಿಭಜನೆ ಮತಕ್ಕೆ ಭೇಡಿಕೆ ಸಲ್ಲಿಸಲಾಗಿತ್ತೋ ಇಲ್ಲವೋ ಎಂಬುದನ್ನು ದಾಖಲೆಗಳನ್ನು ಪರಿಶೀಲಿಸಿ ನೋಡಿ. ನಂತರ ನಿರ್ಧಾರ ಮಾಡೋಣ, ಸದ್ಯಕ್ಕೆ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಬೇಕಿದೆ. ನೀವು ಧರಣಿ ಕೈ ಬಿಟ್ಟು ನಿಮ್ಮ ಸ್ಥಾನಕ್ಕೆ ತೆರಳಿ, ಅಜೆಂಡಾ ಪ್ರಕಾರ ಕಲಾಪ ನಡೆಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾದ-ಪ್ರತಿವಾದಗಳು ನಡೆದವು.
ನಾವು ವಿಭಜನೆಯ ಮತಕ್ಕೆ ಕೇಳಿರುವುದನ್ನು ಸಿಸಿ ಟಿವಿ ನೋಡಿ ಖಚಿತ ಪಡಿಸಿಕೊಳ್ಳಿ ಎಂದು ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಮನವಿ ಮಾಡಿದರು. ಈ ನಡುವೆಯೇ ಸಭಾಪತಿಯವರ ಆಯ್ಕೆಗೆ ಚುನಾವಣೆ ನಡೆದಿತ್ತು. ನೂತನ ಸಭಾಪತಿಯವರನ್ನು ಅಭಿನಂದಿಸಲಾಯಿತು. ಅದರ ಬಳಿಕ ಕೂಡ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement