ಭಾರತದ ಮಾನವ ಸಹಿತ ಉಪಗ್ರಹ ಉಡಾವಣೆ: ಮೆನು ಸಿದ್ಧ

ಬೆಂಗಳೂರು: ಬಾಹ್ಯಾಕಾಶದಲ್ಲಿ ಭಾರತದಲ್ಲಿ ಮೊದಲ ಮಾನವ ಸಹಿತ ಉಪಗ್ರಹ ಉಡಾವಣೆಯಾದಾಗ ಅಲ್ಲಿ ಗಗನಯಾನಿಗಳಿಗೆ ಬೆಳಗ್ಗೆ ಇಡ್ಲಿ, ಉಪ್ಪಿಟ್‌, ಊಟಕ್ಕೆ ಬಿರಿಯಾನಿ, ಪುಲಾವ್‌ ಹಾಗೂ ರಾತ್ರಿ ಊಟಕ್ಕೆ ಕೂರ್ಮಾ ಹಾಗೂ ಚಪಾತಿ…..ವೈವಿಧ್ಯಮಯ ಮೆನು ಸಿಗಲಿದೆ.
ಭಾರತೀಯ ಸೈನಿಕರಿಗೆ ಆಹಾರೋತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೈಸೂರು ಮೂಲಕ ಡಿಫೆನ್ಸ್‌ ಫುಡ್‌ ರಿಸರ್ಚ್‌ ಲ್ಯಾಬೊರೇಟರಿ ಗಗನಯಾನಿಗಳ ಮೆನುವನ್ನು ಅಂತಿಮಗೊಳಿಸಿದೆ. ಇದಲ್ಲದೇ ಕಡಲೆ ಹಿಟ್ಟಿನ ಹಲ್ವಾ ಅಲ್ಲದೇ ಚಹಾ,ಕಾಫಿ ಬದಲಿಗೆ ಹಣ್ಣಿನ ರಸ ಒಳಗೊಂಡ ಪಾನೀಯ ಶ್ರೇಣಿಯನ್ನು ನೀಡಲಾಗುವುದು.
ಕೋವಿಡ್ -19 ಸಾಂಕ್ರಾಮಿಕದಿಂದ ವಿಳಂಬವಾದ ಗಗನಯಾತ್ರೆ ಮುಂದಿನ ವರ್ಷ ನಡೆಯುವ ಸಾಧ್ಯತೆಯಿದೆ, ಅಂತಿಮ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

ನಿಮ್ಮ ಕಾಮೆಂಟ್ ಬರೆಯಿರಿ

advertisement