ವುಹಾನ್‌ನಲ್ಲಿ ೨೦೧೯ರ ಡಿಸೆಂಬರ್‌ಗಿಂತ ಮೊದಲು ಕೊರೋನಾ ಪುರಾವೆಯಿಲ್ಲ

ಚೀನಾ:  ಚೀನಾದ ವುಹಾನ್‌ನಲ್ಲಿ ೨೦೧೯ರ ಡಿಸೆಂಬರ್‌ಗಿಂತ ಮೊದಲು ಕೊರೊನಾ ಸೋಂಕು ಹರಡಿರುವುದಕ್ಕೆ ಪುರಾವೆಗಳಿಲ್ಲ ಎಂದು ವುಹಾನ್‌ನಲ್ಲಿ ಸಾಂಕ್ರಾಮಿಕ ರೋಗದ ಉಗಮದ ಬಗ್ಗೆ ತನಿಖೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾ ತಜ್ಞರ ಜಂಟಿ ಸಮಿತಿ ತಿಳಿಸಿದೆ.
ಡಿಸೆಂಬರ್ 2019 ರ ಮೊದಲು ಜನಸಂಖ್ಯೆಯಲ್ಲಿ ಸಾರ್ಸ್-ಕೋವ್-2 ಹರಡಿರುವ ಬಗ್ಗೆ ಯಾವುದೇ ಸೂಚನೆಯಿರಲಿಲ್ಲ. ಅದಕ್ಕೂ ಮುಂಚೆ ನಗರದಲ್ಲಿ ವೈರಸ್‌ ಹರಡಿದ ಬಗ್ಗೆ ಪುರಾವೆಗಳು ಸಿಕ್ಕಿಲ್ಲ ಎಂದು ಚೀನಾ ತಂಡದ ಮುಖ್ಯಸ್ಥ ಲಿಯಾಂಗ್ ವನ್ನಿಯನ್ ತಿಳಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ