ತಮ್ಮ ದೇಶಕ್ಕೆ ೩೫,೦೦೦ ಕೋವಿಡ್-೧೯ ಲಸಿಕೆ ಕಳಿಸಿದ್ದಕ್ಕೆ ಡೊಮಿನಿಕನ್ ಪ್ರಧಾನಿ ಸ್ಕೆರಿಟ್ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ.
ತ್ವರಿತ ಗತಿಯಲ್ಲಿ ಲಸಿಕೆಗಳನ್ನು ರವಾನಿಸಿದ್ದು ಶ್ಲಾಘನೀಯ. ಇದರಿಂದ ದೇಶದ ೭೨,೦೦೦ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರನ್ನು ಮಾರಕ ಕೊರೊನಾ ಲಸಿಕೆಯಿಂದ ರಕ್ಷಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಲಸಿಕೆಗಳನ್ನು ನೆರೆಯ ಬಾರ್ಬಡೋಸ್‌ನ ಏರ್ ನ್ಯಾಷನಲ್ ಗಾರ್ಡ್‌ನ ವಿಮಾನದಲ್ಲಿರುವ ಡೊಮಿನಿಕಾದ ಡೌಗ್ಲಾಸ್-ಚಾರ್ಲ್ಸ್ ವಿಮಾನ ನಿಲ್ದಾಣಕ್ಕೆ ತರಲಾಯಿತು.
ನನ್ನ ದೇಶದ ಪ್ರಾರ್ಥನೆಗೆ ಇಷ್ಟು ಶೀಘ್ರವಾಗಿ ಫಲ ಸಿಗಲಿದೆ ಎಂದು ನಾನು ಊಹಿರಿಸಲಿಲ್ಲ. ನಮ್ಮ ದೇಶ ಸಣ್ಣದಾಗಿದ್ದರೂ ನಮ್ಮ ವಿನಂತಿಯನ್ನು ಪರಿಗಣಿಸಲಾಗಿದೆ. ಇದಕ್ಕಾಗಿ ನಾವು ಪ್ರಧಾನಿ ಮೋದಿಗೆ ಕೃತಜ್ಞರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ