ಫೆ,೧೮ರಂದು ರಾಷ್ಟ್ರವ್ಯಾಪಿ ರೈಲು ತಡೆ:ಸಂಯುಕ್ತ ಕಿಸಾನ್‌ ಮೋರ್ಚಾ ಘೋಷಣೆ

ನವ ದೆಹಲಿ: ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಂದೋಲನವನ್ನು ತೀವ್ರಗೊಳಿಸಿದ ರೈತ ಸಂಘಗಳು ಫೆಬ್ರವರಿ 18 ರಂದು ರಾಷ್ಟ್ರವ್ಯಾಪಿ ನಾಲ್ಕು ತಾಸುಗಳ ರೈಲು ತಡೆ ಚಳವಳಿ ಮಾಡುವುದಾಗಿ ಪ್ರಕಟಿಸಿವೆ.
ಫೆಬ್ರವರಿ 12 ರಿಂದ ರಾಜಸ್ಥಾನದಲ್ಲಿ ಟೋಲ್ ಸಂಗ್ರಹಣೆಗೆ ನೀಡುವುದಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆಯಲ್ಲಿ ತಿಳಿಸಿದೆ.
ಫೆಬ್ರವರಿ 18ರಂದು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ದೇಶಾದ್ಯಂತ ‘ರೈಲು ತಡೆ ಚಳವಳಿ ನಡೆಯಲಿದೆ ಎಂದು ಎಸ್‌ಕೆಎಂ ಹೇಳಿಕೆಯಲ್ಲಿ ತಿಳಿಸಿದೆ.ಈ ತಿಂಗಳ ಆರಂಭದಲ್ಲಿ, ಮೂರು ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಬೇಡಿಕೆಯನ್ನು ಒತ್ತಾಯಿಸಲು ಅವರು ಮೂರು ಗಂಟೆಗಳ ರಸ್ತೆ ದಿಗ್ಬಂಧನ ಮಾಡಿದ್ದರು. ಈಗ ಚಳವಳಿಯ ಮುಂದಿನ ಹಂತವಾಗಿ ರೈಲು ತಡೆ ನಡೆಸಲು ತೀರ್ಮಾನಿಸಿದ್ದಾರೆ. ಲೋಕಸಭೆಯಲ್ಲಿ ಪ್ರಧಾನಿಯವರು ತೊಡಕಿದ್ದರೆ ಕಾನೂನಿನಲ್ಲಿ ಬದಲಾವಣೆಗೆ ಸಿದ್ಧ ಎಂದು ಹೇಳಿದ ಬೆನ್ನಲ್ಲೇ ಸಂಯುಕ್ತ ಕಿಸಾನ್‌ ಮೋರ್ಚಾದಿಂದ ಈ ಪ್ರಕಟನೆ ಹೊರ ಬಿದ್ದಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ಮೂರು ಕಾನೂನುಗಳ ವಿರುದ್ಧ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾನೂನುಗಳು ಎಂಎಸ್ಪಿ ಕಾರ್ಯವಿಧಾನವನ್ನು ದುರ್ಬಲಗೊಳಿಸುತ್ತವೆ ಮತ್ತು ಮಂಡಿ ವ್ಯವಸ್ಥೆ ಕೊನೆಗೊಳಿಸುತ್ತವೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   'ಪುಷ್ಪಾ 2' ಪ್ರದರ್ಶನದ ವೇಳೆ ಕಾಲ್ತುಳಿತದಿಂದ ಮಹಿಳೆ ಸಾವು, ಮಗನಿಗೆ ಗಾಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement