ಮೋದಿಗೆ ಜೈ, ರೈತರ ಮೇಲೆ ಕ್ರಮಕ್ಕೆ ಭಾರತೀಯ ಅಮೆರಿಕನ್ನರ ವಿರೋಧ

ವಾಷಿಂಗ್ಟನ್: ಅಮೆರಿಕದಲ್ಲಿ ವಾಸವಾಗಿರುವ ಭಾರತೀಯ ಮೂಲದವರಲ್ಲಿ ಶೇ.೫೦ರಷ್ಟು ಜನರು ಭಾರತದ ಕೇಂದ್ರ ಸರಕಾರದ ನೀತಿಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಕಾರ್ನೆಗಿ ಎಂಡೋಮೆಂಟ್‌ ಫಾರ್‌ ಇಂಟರ್‌ನ್ಯಾಷನಲ್‌ ಪೀಸ್‌, ಜಾನ್ಸ್‌ ಹಾಪ್ಕಿನ್ಸ್‌-ಎಸ್‌ಎಐಎಸ್‌ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆದ “ಭಾರತೀಯ ಅಮೆರಿಕನ್ನರ ದೃಷ್ಟಿಯಲ್ಲಿ ಭಾರತʼ ವಿಷಯದ ಸಮೀಕ್ಷೆ ನಡೆದಿದೆ. ವಲಸೆಗಾರರ ಬಗ್ಗೆ ಪ್ರಧಾನಿ ಮೋದಿ ಹೆಚ್ಚು ಉದಾರತೆ ಹೊಂದಿದ್ದಾರೆ ಎಂಬುದು ವರದಿಯಾಗಿದೆ.
ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದನ್ನು (ಶೇ.೬೫) ಹಾಗೂ ಮಾಧ್ಯಮಗಳ ಮೇಲೆ ಸರಕಾರದ ದಬ್ಬಾಳಿಕೆಯನ್ನು (ಶೇ.೬೯) ಭಾರತೀಯ ಅಮೆರಿಕನ್ನರು ಖಂಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಭಾರತೀಯ ಜನತಾ ಪಕ್ಷ ಭಾರತೀಯ ಅಮೆರಿಕನ್ನರ ಜನಪ್ರಿಯ ಪಕ್ಷವಾಗಿದೆ. ೨೦೨೦ರ ಸೆಪ್ಟೆಂಬರ್ ೧ ರಿಂದ ಸೆಪ್ಟೆಂಬರ್ 20ರ ನಡುವೆ ನಡೆಸಿದ ಈ ಆನ್‌ಲೈನ್ ಸಮೀಕ್ಷೆಯಲ್ಲಿ ೧೨೦೦ ಭಾರತೀಯ ಅಮೆರಿಕನ್ನರು  ಭಾಗವಹಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement