ಗಡಿ ಸಮಸ್ಯೆ ಬಗೆಹರಿಯಲು ಪರಸ್ಪರ ನಂಬಿಕೆ ಹೆಚ್ಚಬೇಕು: ಚೀನಾ ರಾಯಭಾರಿ

ಚೀನಾ ಹಾಗೂ ಭಾರತ ಗಡಿ ಸಮಸ್ಯೆಗಳನ್ನು ಬಗೆಹರಿಸಲು ಪರಸ್ಪರ ಗೌರವ, ನಂಬಿಕೆ ಹೆಚ್ಚಬೇಕು, ರಚನಾತ್ಮಕ ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳಬೇಕು ಎಂದು ಚೀನಾದ ರಾಯಭಾರಿ ಸನ್‌ ವೀಡಾಂಗ್‌ ಹೇಳಿದ್ದಾರೆ.
ಗಡಿ ಸಮಸ್ಯೆ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಎರಡೂ ದೇಶಗಳು ಒಂದೊಂದು ಹೆಜ್ಜೆ ಮುಂದಿಡಬೇಕು ಎಂದು ತಿಳಿಸಿದ್ದಾರೆ.
ಲದಾಖ್‌ ಸೆಕ್ಟರ್‌ನಲ್ಲಿ ವಾಸ್ತವ ನಿಯಂತ್ರಣ ಗಡಿರೇಖೆ ಕುರಿತು ವಿವಾದ ಉಂಟಾಗಿರುವ ಸಂದರ್ಭದಲ್ಲಿ ಚೀನಾ ರಾಯಭಾರಿ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಚೀನಾ ಮತ್ತು ಭಾರತವನ್ನು ಅಭಿವೃದ್ಧಿಯ ನಿರ್ಣಾಯಕ ಹಂತದಲ್ಲಿನ ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು ಎಂದು ಬಣ್ಣಿಸಿದ್ದಾರೆ. ಭಿನ್ನಾಭಿಪ್ರಾಯಗಳನ್ನು ತರ್ಕಬದ್ಧ ಮತ್ತು ರಚನಾತ್ಮಕ ರೀತಿಯಲ್ಲಿ ಪರಿಹರಿಸಬೇಕು ಕೆಲವು ವ್ಯತ್ಯಾಸಗಳು ವಿವಾದಗಳಾಗಿ ಮಾರ್ಪಟ್ಟಿವೆ ಎಂದು ತಿಳಿಸಿದ್ದಾರೆ.
ಹಲವಾರು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಹೊರತಾಗಿಯೂ ಕಳೆದ ವರ್ಷ ಮೇ ತಿಂಗಳಲ್ಲಿ ಬಹಿರಂಗವಾಗಿ ಹೊರಹೊಮ್ಮಿದ ಗಡಿ ವಿವಾದವನ್ನು ಬರೆಹರಿಸಲು  ಭಾರತ ಮತ್ತು ಚೀನಾಕ್ಕೆ ಸಾಧ್ಯವಾಗಿಲ್ಲ. ಉಭಯ ಕಡೆಯ ವಿದೇಶಾಂಗ ಮಂತ್ರಿಗಳ ನಡುವಿನ ಸಭೆಗಳ ನಂತರವೂ ಪ್ರಗತಿಯಾಗಿಲ್ಲ.
ಕಳೆದ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮತ್ತು ಅನಿರ್ದಿಷ್ಟ ಸಂಖ್ಯೆಯ ಚೀನಾದ ಸೈನಿಕರು  ಮೃತಪಟ್ಟಿದ್ದರು. ತಮ್ಮ ಪಡೆಗಳ ತ್ವರಿತ ಚಲನೆಗೆ ಅನುಕೂಲವಾಗುವಂತೆ ಚೀನಾ ಕಳೆದ ಮೂರು ವರ್ಷಗಳಲ್ಲಿ ಟಿಬೆಟ್‌ನಲ್ಲಿ ಮಿಲಿಟರಿ ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಹೆಚ್ಚಿಸಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾಗಿವೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement