ನವ ದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಕಾನೂನುಗಳು “ರೈತರು, ಸಣ್ಣ, ಮಧ್ಯಮ ಉದ್ಯಮಿಗಳು ಮತ್ತು ಮಂಡಿಗಳನ್ನು ನಾಶ ಪಡಿಸಲು” ಉದ್ದೇಶಿಸಿದಂತಿದೆ ಎಂದು ಆರೋಪಿಸಿದರು.
ಈ ಸರ್ಕಾರ ಕೇವಲ ನಾಲ್ಕು ಜನರಿಂದ ನಡೆಯುವಂತಿದೆ. ಅದು ಹಮ್ ದೋ, ಹಮಾರೆ ದೊ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಭಾಷಣದಿಂದ ಕೋಪಗೊಂಡ ಆಡಳಿತ ಪಕ್ಷದ ಸದಸ್ಯರು ಗದ್ದಲ ಮಾಡಿದರು. ಆಸ ಸ್ಪೀಕರ್ ಅವರನ್ನು ಸುಮ್ಮನಿರುವಂತೆ ಕೇಳಿಕೊಂಡರು. ಆದರೆ, ಈ ವಿಷಯದ ಬಗ್ಗೆ ಪ್ರತ್ಯೇಕ ಚರ್ಚೆ ನಡೆಸಲು ಸರ್ಕಾರ ಹಿಂಜರಿಯುತ್ತಿರುವುದನ್ನು ವಿರೋಧಿಸಿದ ರಾಹುಲ್ ಗಾಂಧಿ , ರೈತರ ವಿಷಯದ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದರು.
ಆಡಳಿ ಪಕ್ಷದ ಅಡ್ಡಿಯ ಮಧ್ಯಯೇ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಮೂರು ಕಾನೂನುಗಳು ದೇಶದ ಮಂಡಿ ವ್ಯವಸ್ಥೆ, ಅಗತ್ಯ ಸರಕುಗಳ ಕಾಯ್ದೆ ಮುಗಿಸಲು ಮತ್ತು ದೇಶದ ಸಂಪೂರ್ಣ ಆಹಾರ ಧಾನ್ಯಗಳನ್ನು ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸಲು ಉದ್ದೇಶಿಸಿವೆ ಎಂದು ಟೀಕಿಸಿದರು.
ಪ್ರತಿಪಕ್ಷಗಳು ಮಸೂದೆಗಳ ವಿಷಯ ಮತ್ತು ಉದ್ದೇಶದ ಬಗ್ಗೆ ಮಾತನಾಡಲಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ನಾನು ಮಸೂದೆಗಳ ಆಶಯದ ಬಗ್ಗೆ ಮಾತನಾಡುತ್ತೇನೆ. ನಾಲ್ಕು ಜನರು ಈ ದೇಶವನ್ನು ನಡೆಸಲಿದ್ದಾರೆ. ಅವರು ಯಾರೆಂದು ಎಲ್ಲರಿಗೂ ತಿಳಿದಿದೆ, ‘ ಹಮ್ ಡೋ, ಹಮಾರೆ ದೋ ’ಎಂಬ ಕುಟುಂಬ ಯೋಜನೆ ಘೋಷ ವಾಕ್ಯವನ್ನು ನೆನಪಿಸಿದರು.
ರೈತರು ತಮ್ಮ ಸಂಪೂರ್ಣ ಆಹಾರ ಧಾನ್ಯಗಳನ್ನು ಕಾರ್ಪೊರೇಟ್‌ಗೆ ಹಸ್ತಾಂತರಿಸುವುದನ್ನು ಖಚಿತಪಡಿಸಿಕೊಳ್ಳುವುದು ಮೊದಲ ಕಾನೂನು ಆಗಿದ್ದರೆ, ಎರಡನೆಯದು ಆಹಾರ ಧಾನ್ಯಗಳನ್ನು ಎರಡನೇ ಕಾರ್ಪೊರೇಟ್ ಸ್ನೇಹಿತನಿಗಾಗಿ ಸಂಗ್ರಹಿಸುವುದು ಎಂದು ಆರೋಪಿಸಿದರು. ಮೂರನೆಯ ಕಾನೂನು, ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ರೈತರು ಯಾವುದೇ ವಿವಾದಗಳನ್ನು ಹೊಂದಿದ್ದರೆ ನ್ಯಾಯಾಲಯಕ್ಕೆ ಹೋಗುವುದನ್ನು ತಡೆಯುವುದು ಎಂದು ಟೀಕಿಸಿದರು.
ಇದು ರೈತರಿಗೆ ಒಂದು ಆಯ್ಕೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಈಗ ರೈತರಿಗೆ ಆಯ್ಕೆ ಏನು – ಹಸಿವು, ನಿರುದ್ಯೋಗ ಮತ್ತು ಆತ್ಮಹತ್ಯೆ ಎಂದು ಲೇವಡಿ ಮಾಡಿದರು.
ಆಡಳಿತ ಪಕ್ಷದ ಸದಸ್ಯರು ಗಾಂಧಿಯನ್ನು ತಡೆಯಲು ಸಂಸತ್ತಿನ ನಿಯಮಗಳನ್ನು ಉಲ್ಲೇಖಿಸಿದವು, ಆದರೆ ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆ ಸದಸ್ಯರು ಯಾವುದೇ ವಿಷಯದ ಬಗ್ಗೆ ಮಾತನಾಡಲು ಮುಕ್ತರಾಗಿದ್ದಾರೆ ಎಂಬ ನಿಯಮಗಳನ್ನು ಉಲ್ಲೇಖಿಸಿ ಅದನ್ನು ವಿರೋಧಿಸಿದರು.
ರಾಹುಲ್ ಭಾಷಣವು ಆಡಳಿತ ಪಕ್ಷದ ಸದ್ಯರು ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಜಿಎಸ್ಟಿ ಅಂದರೆ ಗಬ್ಬರ್ ಸಿಂಗ್ ಎಂದು ಹೇಳಿದ ರಾಹುಲ್, ಜಿಎಸ್‌ಟಿ ತೆರಿಗೆ ಹೇರುವ ಮೂಲಕ, ಸರ್ಕಾರವು ಸಣ್ಣ ಉದ್ಯಮಿಗಳನ್ನು ನಾಶಗೊಳಿಸಿದೆ. ಈಗ ಕೃಷಿ ಕಾನೂನುಗಳನ್ನು ಪರಿಚಯಿಸುವ ಮೂಲಕ ರೈತರನ್ನು ಮುಗಿಸಲು ಹೊರಟಿದ್ದಾರೆ. ಎಂದು ರಾಹುಲ್ ಹೇಳಿದರು.
ರಾಹುಲ್ ಗಾಂಧಿ ಸದನದಿಂದ ಹೊರಬಂದ ನಂತರ, ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ನಿಯಮಗಳಂತೆ ನಡೆದುಕೊಳ್ಳದ ಕಾರಣ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದರು. ಹಿಂದಿನ ಕಾಂಗ್ರೆಸ್ ಸರ್ಕಾರಗಳು ಬಡತನವನ್ನು ನಿರ್ಮೂಲನೆ ಮಾಡುವ ಬಗ್ಗೆ ಭರವಸೆ ನೀಡಿದ್ದವು, ಆದರೆ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರವೇ ಈ ಬಗ್ಗೆ ಕೆಲಸ ಪ್ರಾರಂಭವಾಗಿದೆ ಎಂದರು.
ಕುಟುಂಬವು ವಿವಿಧ ರಾಜ್ಯಗಳ ರೈತರಿಂದ ಭೂಮಿಯನ್ನು ಕಸಿದುಕೊಂಡಿದೆ ಎಂದು ಆರೋಪಿಸಿ ಠಾಕೂರ್ ಗಾಂಧಿ ಕುಟುಂಬದ ಮೇಲೆಆರೋಪ ಮಾಡಿದರು.
ನಿಮ್ಮ ಕಾಮೆಂಟ್ ಬರೆಯಿರಿ