ಕೊರೊನಾ ರೂಪಾಂತರಕ್ಕೆ ಆಸ್ಟ್ರಾಜೆನಿಕ್‌ ಲಸಿಕೆ ಬಳಕೆಗೆ ಡಬ್ಲುಎಚ್‌ಒ ಶಿಫಾರಸು

ಜಿನೀವಾ: ಕೊರೊನಾ ವೈರಸ್‌ ರೂಪಾಂತರದಿಂದ ಆತಂಕಕ್ಕೀಡಾದ ದೇಶಗಳು ಕೂಡ ಆಸ್ಟ್ರಾಜೆನಿಕಾದ ಲಸಿಕೆ ಬಳಕೆ ಮಾಡಬಹುದೆಂದು ವಿಶ್ವ ಆರೋಗ್ಯ ಸಂಸ್ಥೆಗೆ ಸಲಹೆ ನೀಡುವ ತಜ್ಞರು ಶಿಫಾರಸು ಮಾಡಿದ್ದಾರೆ.
ಹಲವು ಯುರೋಪ್‌ ಹಾಗೂ ಆಫ್ರಿಕಾದ ದೇಶಗಳಲ್ಲಿ ಕೋವಿಡ್-‌೧೯ ರೂಪಾಂತರಗೊಂಡಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಟ್ರಾಜೆನಿಕಾ ಶ್ರೀಮಂತ ಹಾಗೂ ಬಡರಾಷ್ಟ್ರಗಳಲ್ಲಿ ಆಗತ್ಯವಿರುವ ಜನರಿಗೆ ಲಸಿಕೆಗಳನ್ನು ನೀಡುವ ಗುರಿ ಹೊಂದಿದೆ. ಫೆಬ್ರವರಿ ತಿಂಗಳ ಕೊನೆಯಲ್ಲಿ ಆಸ್ಟ್ರಾಜೆನಿಕಾ ಲಸಿಕೆಗಳನ್ನು ರವಾನಿಸಲಿದೆ.
ಸಲಹಾ ತಂಡದ ಸಂಶೋಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್‌ ಸ್ವಾಗತಿಸಿದ್ದು, ಇದೊಂದು ಪ್ರಮುಖ ಮೈಲಿಗಲ್ಲು. ಲಸಿಕೆಯನ್ನು ರೆಫ್ರಿಜಿರೇಟರ್‌ ತಾಪಮಾನದಲ್ಲಿ ಶೇಖರಿಸಿಡಬೇಕು. ಈವರೆಗೆ ವಿಶ್ವ ಆರೋಗ್ಯ ಸಂಸ್ಥೆ ಫೀಜರ್‌ ಬಯೋಟೆಕ್‌ ಲಸಿಕೆಗೆ ಮಾತ್ರ ಮಾತ್ರ ತುರ್ತು ಬಳಕೆಯ ಲಸಿಕಾ ಪಟ್ಟಿಯಲ್ಲಿ ಸ್ಥಾನ ನೀಡಿತ್ತು.
ಪ್ರಾಥಮಿಕ ವಿಶ್ಲೇಷಣೆಗಳನ್ವಯ ಅಸ್ಟ್ರಾಜೆನೆಕಾ ಲಸಿಕೆ ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೊರಹೊಮ್ಮಿರುವ ಕೊರೊನಾ ವೈರಸ್ ರೂಪಾಂತರದ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ ಎಂಬುದನ್ನು ತಜ್ಞರ ಗುಂಪು ಗಮನಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement