ನವದೆಹಲಿ: ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಚೌಧರಿ ಸುಖ್ ರಾಮ್ ಸಿಂಗ್ ಯಾದವ್ ಅವರ ಟ್ವೀಟ್ ಖಾತೆಯನ್ನು ತಡೆಹಿಡಿಯಲಾಗಿದೆ..
ಈ ಬಗ್ಗೆ ಮಾಹಿತಿ ಉತ್ತರ ಪ್ರದೇಶ ಸಂಸದ ಸುಖ ರಾಮ್ ಸಿಂಗ್ ಅವರೇ ಹೇಳಿದ್ದಾರೆ. ಭಾರತದಲ್ಲಿ ಟ್ವಿಟರ್ ತಡೆ ಹಿಡಿದಿರುವ ಹೈ ಪ್ರೊಫೈಲ್ ಖಾತೆಗಳ ಪೈಕಿ ಇದೂ ಒಂದಾಗಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಒಳಗೊಂಡ, ತಪ್ಪು ಮಾಹಿತಿ ಹರಡುತ್ತಿದ್ದ ಟ್ವೀಟ್ ಖಾತೆಗಳನ್ನು ತಡೆಹಿಡಿಯುವುದಕ್ಕೆ ಸರ್ಕಾರ ನೀಡಿದ್ದ ಸೂಚನೆಯನ್ನು ಭಾಗಶಃ ಟ್ವಿಟರ್ ಪಾಲನೆ ಮಾಡಿದ್ದು 500 ಟ್ವಿಟರ್ ಖಾತೆಗಳನ್ನು ತಡೆಹಿಡಿಯಲಾಗಿದೆ ಎಂದು ಹೇಳಿದೆ.ಆದರೆ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ರಾಜಕಾರಣಿಗಳು ಹಾಗೂ ಚಳವಳಿಗಾರರ ಖಾತೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಟ್ವಿಟರ್ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ