ನವ ದೆಹಲಿ; ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ)ವೇದಿಕೆಗಳ ಡಬಲ್ ಸ್ಟ್ಯಾಂಡರ್ಡ್‌ಗೆ ಭಾರತದಲ್ಲಿ ಅವಕಾಶವಿಲ್ಲ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಸಂಸತ್ತಿನಲ್ಲಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ ಹಾಗೂ ದ್ವೇಷದ ಸುದ್ದಿ ಹರಡುವುದನ್ನು ಸರಕಾರ ಸಹಿಸುವುದಿಲ್ಲ ಸಾಮಾಜಿಕ ಜಾಲತಾಣಗಳ ದೈತ್ಯರಾದ ಟ್ವಿಟರ್, ಫೇಸ್‌ಬುಕ್ ಹಾಗೂ ವ್ಯಾಟ್ಸಪ್ ನಮ್ಮ ನೆಲದ ನಿಯಮವನ್ನು ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ರವಿಶಂಕರ್ ಪ್ರಸಾದ್, ಟ್ವಿಟರ್, ಫೇಸ್‌ಬುಕ್, ಲಿಂಕ್ಡ್‌ಇನ್ ಅಥವಾ ವಾಟ್ಸಪ್ ಯಾವುದೇ ಸಂಸ್ಥೆ ಆಗಿರಲಿ ಅವರು ಭಾರತದಲ್ಲಿ ಸೇವೆ ಒದಗಿಸುತ್ತಿರುವುದು ಸ್ವಾಗತಾರ್ಹ. ಅವುಗಳಿಗೆ ಕೋಟಿಗಟ್ಟಲೇ ಬಳಕೆದಾರರಿದ್ದಾರೆ. ಆದರೆ ಈ ಜಾಲತಾಣಗಳು ಭಾರತೀಯ ಸಂವಿಧಾನ ಮತ್ತು ಕಾನೂನುಗಳನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು.
ಅಮೆರಿಕದ ಕ್ಯಾಪಿಟಲ್ ಹಿಲ್ ಮತ್ತು ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಘಟನೆಗಳ ಕುರಿತು ಕೆಲವು ಮೈಕ್ರೋಬ್ಲಾಗಿಂಗ್ ವೇದಿಕೆಗಳ ದ್ವಿಮುಖ ನೀತಿಯನ್ನು ಸಚಿವರು ಖಂಡಿಸಿದರು. ಕ್ಯಾಪಿಟಲ್ ಹಿಲ್‌ನಲ್ಲಿ ನಡೆದ ಹಿಂಸಾಚಾರ ಸಮಯದಲ್ಲಿ, ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದಲ್ಲಿ ಮೈಕ್ರೊಬ್ಲಾಗಿಂಗ್ ವೇದಿಕೆಗಳು ವಿಭಿನ್ನ ನಿಲುವನ್ನು ತೆಗೆದುಕೊಂಡಿದ್ದನ್ನು ಖಂಡಿಸಿದರು.
ಸೋಷಿಯಲ್ ಮೀಡಿಯಾ ದೈತ್ಯ ಸಂಸ್ಥೆಗಳು ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿ ಹರಡಲು ತಮ್ಮ ವೇದಿಕೆ ಬಳಸಿದರೆ ನಾವು ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಹೋರಾಟ ನಡೆಸುತ್ತಿರುವ ರೈತರನ್ನು ಪ್ರಚೋದಿಸುವ ಸಂದೇಶಗಳನ್ನು ರವಾನಿಸುವ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರಕಾರ ಟ್ವೀಟರ್‌ಗೆ ಸೂಚನೆ ನೀಡಿದ ನಂತರ ಸಚಿವರು ನೀಡಿದ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ