ಪೂರ್ವ ಜಪಾನ್‌ನ ಕರಾವಳಿಯಲ್ಲಿ ಶನಿವಾರ 7.1 ರಿಕ್ಟರ್ ತೀವ್ರತೆಯ ತೀವ್ರ ಭೂಕಂಪನ ಸಂಭವಿಸಿ, ಕಟ್ಟಡಗಳನ್ನು ಅಲುಗಾಡಿಸಿದೆ. ಆದರೆ ಯಾವುದೇ ದೊಡ್ಡ ಹಾನಿಯಾಗಿಲ್ಲ.
ಭೂಕಂಪ ಕೇಂದ್ರವು ಫುಕುಶಿಮಾ ಪ್ರಾಂತ್ಯದ ಕರಾವಳಿಯಲ್ಲಿ 60 ಕಿಲೋಮೀಟರ್ (36 ಮೈಲಿ) ಆಳದಲ್ಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಇದು ರಾತ್ರಿ 11:08 ಕ್ಕೆ , (7.38 p.m.ಭಾರತದ ಕಾಲಮಾನ) ಸಂಭವಿಸಿದೆ. ರಾಜಧಾನಿ ಟೋಕಿಯೊ ಮತ್ತು ಇತರೆಡೆ ಕಟ್ಟಡಗಳನ್ನು ಅಲ್ಲಾಡಿಸಿದೆ.
ಟಿವಿ ದೃಶ್ಯಾವಳಿಗಳು ಅಂಗಡಿ ಮುಂಭಾಗಗಳಿಂದ ಒಡೆದ ಗಾಜನ್ನು ಸಹ ತೋರಿಸಿವೆ.ಕೆಲವರಿಗೆ ಗಾಯಗಳಾಗಿವೆ.
ಸುಮಾರು 950,000 ಕುಟುಂಬಗಳು ಆರಂಭದಲ್ಲಿ ವಿದ್ಯುತ್ ಇಲ್ಲದೆ ಇದ್ದವು ಎಂದು ಸರ್ಕಾರದ ವಕ್ತಾರ ಕಟ್ಸುನೊಬು ಕಟೊ ತಿಳಿಸಿದ್ದಾರೆ.. ವಿಶ್ವದ ಭೂಕಂಪನಶೀಲವಾಗಿರುವ ಪ್ರದೇಶಗಳಲ್ಲಿ ಒಂದಾದ ಜಪಾನ್‌ನಲ್ಲಿ ಭೂಕಂಪಗಳು ಸಾಮಾನ್ಯವಾಗಿದೆ.
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ