ವ್ಯಾಲೆಂಟೈನ್ ಡೇ ಆಚರಣೆ: ವಿಕೃತಿಯ ವ್ಯಾಪಾರೀಕರಣದ ಹುನ್ನಾರ, ಹಿಂದೂ ಸಂಸ್ಕೃತಿಗೆ ಧಕ್ಕೆ,

ಫೆ.೧೪ರಂದು ವಿಶ್ವದಾದ್ಯಂತ ವ್ಯಾಲೈಂಟೇನ್‌ ಡೇ ಆಚರಿಸುತ್ತಾರೆ. ಇದರ ಹಾವಳಿ ವಿರುದ್ಧ ಕಳೆದ ಅನೇಕ ವರ್ಷಗಳಿಂದ ಹೋರಾಡುತ್ತ ಜನಜಾಗೃತಿ ಮೂಡಿಸುತ್ತ ಬರುತ್ತಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರು ಇದರ ಬದಲು ತಂದೆ-ತಾಯಿ  ಪೂಜಾದಿನ ಆಚರಿಲು ಜಾಗೃತಿ ಮೂಡಿಸುತ್ತಿದ್ದಾರೆ. ವ್ಯಾಲೆಂಟೈನ್‌ ಡೇ ಹಿಂದಿರುವ ಹುನ್ನಾರ, ಸಂಸ್ಕೃತಿ ನಾಶ, ವ್ಯಾಪಾರೀಕರಣ, ಡ್ರಗ್‌ ಮಾಫಿಯಾ ಇತ್ಯಾದಿಗಳ ಕುರಿತು ಜಾಗೃತಿ ಮೂಡಿಸುತ್ತ ಬಂದಿದ್ದಾರೆ. ಇಲ್ಲಿ ಈ ಕುರಿತು ಅವರೇ ಇದರ ಹಿಂದಿರುವ ಕಹಿ ಸತ್ಯಗಳನ್ನು ತಮ್ಮ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ.

 

ಲೇಖನ:ಪ್ರಮೋದ ಮುತಾಲಿಕ

ರಾಷ್ಟ್ರೀಯ ಅಧ್ಯಕ್ಷರು ಶ್ರೀರಾಮ ಸೇನಾ ಧಾರವಾಡ

ಪ್ರೇಮಿಗಳ ದಿನ ಎಂಬುದು ಹೇಗೆ ಬಂತು ? ಎಲ್ಲಿಂದ ಬಂತು ? ಯಾರು ತಂದರು ? ಇವು ಮಹತ್ವವಲ್ಲ. ಯಾಕೆ ತಂದರು ? ಉದ್ದೇಶ ಏನು ಎಂಬುದು ಮುಖ್ಯವಾದದ್ದು.
ಉದ್ದೇಶ ಗೊತ್ತಾದಲ್ಲಿ ದೇಶ, ಧರ್ಮ, ಸಂಸ್ಕೃತಿ ಬಗ್ಗೆ ಸ್ವಾಭಿಮಾನ ಇದ್ದವರು ವ್ಯಾಲೆಂಟೈನ್ಸ್ ಡೇ ಆಚರಿಸುವುದಿಲ್ಲ ಎಂಬ ವಿಶ್ವಾಸ ಇದೆ. ಡೇ ಆಚರಣೆ ಬಂದದ್ದೆ ವಿದೇಶಿಗಳಿಂದ ಎಂಬುದು ಸತ್ಯವಾಗಿದೆ. ಮೆಕಾಲೆ ಎಂಬ ಬ್ರಿಟೀಷ್‌ ಅಧಿಕಾರಿ ಅಪ್ಪನಿಗೆ ಪತ್ರ ೧೮೩೨ರಲ್ಲಿ ಬರೆದಿದ್ದಾನೆ. ಭಾರತ ಒಂದು ಅತ್ಯುತ್ತಮ ಸಂಸ್ಕಾರ, ಸಂಸ್ಕೃತಿ ಉತ್ತಮ ರೀತಿ- ನೀತಿಗಳು ಇರುವ ದೇಶ ಇದು. ಇಲ್ಲಿ ನೀರು ವಿಪುಲವಾಗಿದೆ, ಉತ್ತಮ ಯೋಜನೆಗಳಿವೆ, ಶಿಕ್ಷಣದ ಪದ್ಧತಿ (ಗುರುಕುಲ ಶಿಕ್ಷಣ) ಸರ್ವೋತ್ತಮವಾಗಿದೆ, ಕಳ್ಳತನ, ಮೋಸ, ದ್ವೇಷ ರಹಿತ ಸಮನ್ವಯದ ಸಮಾಜ ಭಾರತದಲ್ಲಿದೆ. ಭಾರತ ಬ್ರಿಟೀಷರ ಆಡಳಿತಕ್ಕೊಳಪಡಿಸಬೇಕಾದರೆ ಬಹಳ ಬದಲಾವಣೆ ತರಬೇಕಾಗುತ್ತದೆ. ಬಹಳ ಪರಿಶ್ರಮ ಹಾಕಬೇಕಾಗುತ್ತದೆ ಎಂದು ಪತ್ರದಲ್ಲಿ ದೀರ್ಘವಾಗಿ ಉಲ್ಲೇಖಿಸಿದ್ದಾನೆ. ಬ್ರಿಟೀಷರು ಎಲ್ಲವನ್ನೂ ಅಂದರೆ, ಶಿಕ್ಷಣ, ನೀರು, ಸಮನ್ವಯ, ಕೃಷಿ, ಪದ್ಧತಿ ನ್ಯಾಯ-ನೀತಿ ಇತ್ಯಾದಿ ಎಲ್ಲವನ್ನೂ ಬದಲಾವಣೆ ಮಾಡಿ ಭಾರತೀಯ ಸಂಸ್ಕೃತಿಯನ್ನು ವಿಕೃತಿಗೊಳಿಸಿದರು. ಗುಲಾಮಿ ಮಾನಸಿಕತೆಯನ್ನು ಸಮಾಜದಲ್ಲಿ ಬಿತ್ತಿದರು.

ಪಾಶ್ಚಾತ್ಯ ಅನುಕರಣೆಯನ್ನು ಶಿಕ್ಷಣ ಪದ್ಧತಿಯಲ್ಲಿ ತೂರಿಸಿದರು. ಸ್ವಾತಂತ್ರ್ಯ ಬಂದು ೭೩ ವರ್ಷಗಳೇ ಕಳೆದರೂ ಬ್ರಿಟೀಷರ ಶಿಕ್ಷಣ, ನ್ಯಾಯಾಲಯ, ಕಾನೂನು, ವೇಷ-ಭೂಷಣ, ಕೃಷಿ, ಇತ್ಯಾದಿ ಅದನ್ನೇ ಅನುಸರಿಸಿ ಅಧೋಗತಿಗೆ ಹೊಗುತ್ತಿದ್ದೇವೆ.
ವ್ಯಾಲೇಂಟೇನ್ಸ್ ಡೇ, ಫ್ರೆಂಡ್‌ಶಿಪ್ ಡೇ, ರೋಜ್ ಡೇ, ಮದರ್ ಡೇ, ಫಾದರ್ ಡೇ, ಚಿಲ್ಡ್ರನ್ಸ್ ಡೇ ಇತ್ಯಾದಿ ಇವೆಲ್ಲವೂ ನಮ್ಮದಲ್ಲ ಪಾಶ್ಚಾತ್ಯರ ಬಳುವಳಿ ಇದು. ಇವೆಲ್ಲವೂ ಯಾಕೆ ಆಚರಣೆ ಅಂದರೆ ಭಾರತೀಯ ಯುವಶಕ್ತಿ ನಿಸ್ತೇಜಗೊಳಿಸಲು, ನಿಷ್ಕ್ರಿಯ ಮಾಡಲು, ದುರ್ಬಲಗೊಳಿಸುವುದು ಇವುಗಳ ಮೂಲ ಉದ್ದೇಶವಾಗಿದೆ. ಭಾರತದ ಹಬ್ಬಗಳು ಸಂಕ್ರಾಂತಿ, ಯುಗಾದಿ, ಹೋಳಿ ಹುಣ್ಣಿಮೆ, ವಿಜಯದಶಮಿ, ಇತ್ಯಾದಿಗಳು ಶಾಸ್ತ್ರೋಕ್ತ ಹಾಗೂ ವೈಜ್ಞಾನಿಕಗಳಾಗಿವೆ. ಜಾತ್ರೆ-ಯಾತ್ರೆ ಉತ್ಸವಗಳು ಎಷ್ಟು ಸಮಂಜಸವಾಗಿವೆ. ಸಮರಸತೆ, ಸಮನ್ವಯತೆ, ವೈವಿಧ್ಯತೆ ಕಾಣಬಹುದು. ಇವೆಲ್ಲ ಆಚರಣೆಗಳಲ್ಲಿ ಆನಂದ ಪ್ರೀತಿ, ವಿಶ್ವಾಸ, ಉಲ್ಲಾಸ ಇರುತ್ತದೆ. ವ್ಯಾಲೆಂಟೈನ್ಸ್ ಡೇ ಆಚರಣೆಗಳಲ್ಲಿ ಉದ್ವೇಗ, ಉನ್ಮಾದ, ಪ್ರಚೋದನೆ, ಕ್ಷಣಿಕ ಆನಂದ, ಕಾಮ ಇತ್ಯಾದಿಗಳನ್ನು ಕಾಣಬಹುದು. ಇದರಿಂದ ಅನಾರೋಗ್ಯ, ಅಸ್ವಸ್ಥ, ಮಾನಸಿಕ ಕಿರಿಕಿರಿ, ವಿಪರೀತ ವೆಚ್ಚ, ದ್ವೇಷ, ಅಸೂಯೆ, ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ. ‘ಪ್ರೇಮಿಗಳ ದಿನ’ ಅವೈಜ್ಞಾನಿಕವಾಗಿದ್ದು, ಅಸಂಬದ್ಧವಾಗಿದೆ. ಪ್ರೇಮಕ್ಕೆ ನಮ್ಮ ವಿರೋಧ ಇಲ್ಲ ಪ್ರೀತಿ ಪ್ರೇಮ ಇದು ಸಹಜವಾದ ಪ್ರಕ್ರಿಯೆಯಾಗಿದೆ ಇದಕ್ಕೆ ‘ದಿನ’ ನಿಶ್ಚಯಿಸುವುದಕ್ಕೆ ಮಾತ್ರ ನಮ್ಮ ವಿರೋಧವಿದೆ. ‘ವ್ಯಾಲೆಂಟೈನ್ಸ್ ಡೇ’ ದಿನದ ಹಿಂದೆ ಬಹಳ ಕಾಣದ ಕೈಗಳು ಕೆಲಸ ಮಾಡುತ್ತವೆ. ಉದಾಹರಣೆಗೆ: ಬಹುರಾಷ್ಟ್ರೀಯ ವ್ಯಾಪಾರ ಕೇಂದ್ರಗಳು ಪ್ರೇಮಿಗಳ ದಿನದ ಹಿಂದೆ ಸಂಪೂರ್ಣ ಪಾತ್ರಧಾರಿಗಳಾಗಿವೆ. ನಾನು ಮೊದಲೇ ಹೇಳಿದ ಹಾಗೆ ಇಲ್ಲಿಯ ಯುವಕ ಯುವತಿಯರನ್ನು ದುರ್ಬಲಗೊಳಿಸುವುದಕ್ಕಾಗಿ ಡ್ರಗ್ ಮಾಫಿಯಾ, ಸೆಕ್ಸ್‌ ಮಾಫಿಯಾ, ವೈನ್ ಮಾಫಿಯಾ, ಗಿಫ್ಟ್‌ ಮಾಫಿಯಾ, ಹೊಟೇಲ್ ಮಾಫಿಯಾ ಇತ್ಯಾದಿಗಳು ಪ್ರೇಮಿಗಳ ದಿನದ ೧೫ ದಿನ ಮುಂಚೆಯೇ ಚುರುಕಾಗಿ ಕಾರ್ಯದಲ್ಲಿ ಇಳಿಯುತ್ತವೆ. ಎಲ್ಲ ವಾಹಿನಿಗಳಲ್ಲಿ ವ್ಯಾಲೆಂಟೈನ್ಸ್ ಡೇ ಜಾಹಿರಾತುಗಳಿಂದ ನೆನಪಿಸಲಾಗುತ್ತದೆ, ಪ್ರೋತ್ಸಾಹಿಸಲಾಗುತ್ತದೆ. ಯುವಕ-ಯುವತಿಯರಿಗೆ ಆಫರ್ಗಳ ಸುರಿಮಳೆ ಗೈಯುತ್ತವೆ. ಹೋಟೇಲ್‌ಗಳಲ್ಲಿ ಪ್ರೇಮಿಗಳ ದಿನ ಬೇಕಾಗುವ ಎಲ್ಲ ವಸ್ತುಗಳ ಬೆಲೆ ಏರಿಸಲಾಗುತ್ತದೆ. ನಮ್ಮ ಹುಚ್ಚು ಮನಸ್ಸಿನ, ವಿಕೃತ ಮನಸ್ಸಿನ ಯುವಕರು-ಯುವತಿಯರು ಅವುಗಳ ಬೆಲೆ ಎಷ್ಟು ಹೆಚ್ಚಿದ್ದರೂ ಖರೀದಿಸಿ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ತಂದೆ-ತಾಯಿಗೆ ಪೀಡಿಸುತ್ತಾರೆ, ಬೇರೆ ಬೇರೆ ನೆಪ ಹೇಳಿ ಹಣ ಸಂಗ್ರಹಿಸುತ್ತಾರೆ, ಕೆಲವರು ಕಳ್ಳತನಕ್ಕೂ ಇಳಿಯುತ್ತಾರೆ ಒಟ್ಟಿಗೆ ವರ್ಷಕ್ಕೊಮ್ಮೆ ಆಚರಿಸುವ ಪ್ರೇಮ ದಿನದಂದು ಮಜಾ ಉಡಾಯಿಸಬೇಕು. ಬೆಂಗಳೂರಿನಂಥ ಬೃಹತ್ ಪಟ್ಟಣಗಳಿಂದ ಈಗ ಈ ವಿಕೃತಿ ತಾಲೂಕು ಹಾಗೂ ದೊಡ್ಡ ದೊಡ್ಡ ಹಳ್ಳಿಗಳಿಗೂ ಪಸರಿಸುತ್ತಾ ಇದೆ.
ಶೃಂಗೇರಿ ಶಾರದಾಂಬೆ ದರ್ಶನ ಮಾಡಿಕೊಂಡು ಒಬ್ಬರ ಹಿತೈಷಿಗಳ ಮನೆಗೆ ಭೇಟಿ ಕೊಟ್ಟಿದ್ದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ತಂದೆ ತಾಯಿಗೆ-ಗೆಳತಿಯರು ಹೇಳಿದ್ದನ್ನು ತಿಳಿಸಿದಳು, ನಿನಗೆ ಬಾಯಫ್ರೆಂಡ್ ಇಲ್ಲವಾ ನಮ್ಮ ಜೊತೆಗೆ ಬರಬೇಡ ವ್ಯಾಲೆಂಟೈನ್ಸ್ ಡೇ ಆಚರಿಸಲು ನಿನಗೆ ಹಕ್ಕಿಲ್ಲ. ಹಾಗಾಗಿ ನಿನ್ನ ಸ್ನೇಹ ನಮಗೆ ಬೇಡ ಅಂತಾ ಹೇಳಿದ್ದಾರೆ ಎಂದು. ಬೆಂಗಳೂರಲ್ಲಿ ವೈನ್ ಹಾಗೂ ಹೋಟೇಲ್ ಮಾಫಿಯಾದ ಉದಾಹರಣೆ ತಿಳಿಸುತ್ತೇನೆ ಕೇಳಿ ಆಘಾತ ಮತ್ತು ಆಶ್ಚರ್ಯ ಆಗಬಹುದು. ಪಾಲಕರು, ಶಿಕ್ಷಣ ಮಂಡಳಿಯವರು, ಸಮಾಜ ಚಿಂತಕರು ಇದನ್ನು ತಿಳಿದುಕೊಳ್ಳಬೇಕು. ಬೆಂಗಳೂರಿನ ಎಲ್ಲ ಪಬ್ಗಳಲ್ಲಿ ೧೮ ರಿಂದ ೩೦ ವಯಸ್ಸಿನ ಹುಡುಗಿಯರಿಗೆ (ಮಾತ್ರ) ಉಚಿತ ವೈನ್ ಕೊಡಲಾಗುತ್ತದೆ. ವಾರದ ಏಳುದಿನ ಉಚಿತ ಅಷ್ಟೇ ಅಲ್ಲ ಬೇಕಾದಷ್ಟು ಮತ್ತು ಬೇಕಾದ ಬ್ರ್ಯಾಂಡ್ ವೈನಗಳನ್ನು ಕುಡಿಯಬಹುದು. ಇದೆಲ್ಲ ಹುಡಿಗಿಯರಿಗೆ ಮಾತ್ರ ಕರುವನ್ನು ಕರೆದುಕೊಂಡು ಬಂದಲ್ಲಿ ಹಸು ತಾನಾಗಿಯೇ ಬರುತ್ತದೆ. ಹಾಗೇಯೆ ಹುಡುಗಿಯರಿಗೆ ಉಚಿತ ಎಂದು ಆಕ?ಣೆ ಮಾಡಿದರೆ, ಹುಚ್ಚು ವಿಕೃತ ಮಾನಸಿಕ ಯುವಕರು ತಾನಾಗಿಯೇ ಹುಡುಗಿಯರ ಹಿಂದೆ ಪಬ್ ಪ್ರವೇಶಿಸುತ್ತಾರೆ. ಹೇಗಿದೆ ಆಫರ್ ! ಫ್ರೀ ವೈನ್ ಚಟ ಒಮ್ಮೆ ಅಂಟಿಕೊಂಡಲ್ಲಿ ಮುಂದಿನ ದುಷ್ಟರಿಣಾಮಗಳ ಕಲ್ಪನೆ ಮಾಡಿಕೊಳ್ಳಿರಿ.
ಬೆಂಗಳೂರು ಪ್ರವಾಸದಲ್ಲಿದ್ದಾಗ ಒಂದು ಮಧ್ಯಮ ವರ್ಗದ ಮನೆಗೆ ಹೋಗಿದ್ದೆ, ಇಬ್ಬರು ಹೆಣ್ಣುಮಕ್ಕಳು ಒಬ್ಬಳು ೯ನೇ ತರಗತಿ, ಇನ್ನೊಬ್ಬಳು ಪಿಯುಸಿ ಓದುತ್ತಿದ್ದಾಳೆ. ಪಿಯುಸಿ ಓದುವ ಹುಡುಗಿಯ ಬ್ಯಾಗಿನಲ್ಲಿ ಸಿಗರೇಟ್ ಪ್ಯಾಕೇಟ್, ಡ್ರಗ್ ಪೌಡರ್, ‌ ಚಿಕ್ಕ ವೈನ್ ಬಾಟಲ್ ಸಿಕ್ಕಿತು. ಮಗಳಿಗೆ ಏನೂ ಹೇಳಿದರೂ ಕೇಳುತ್ತಿಲ್ಲ, ಹಿರಿಯರಿಂದ ಹೇಳಿಸಿ ಆಯ್ತು, ಪೂಜೆ ಮಾಡಿಸಿ ಆಯ್ತು ಏನೂ ಪ್ರಯೋಜನ ಆಗಲಿಲ್ಲ ಎಂದು ತಂದೆ ತಾಯಿ ಅಳುತ್ತಾ ಹೇಳಿದರು. ಇದು ಒಂದು ಮನೆಯ ಕಥೆ ಅಲ್ಲ, ಇಂಥಹ ಸಾವಿರಾರು ಮನೆಯ ವ್ಯಥೆಯಾಗಿದೆ. ಇನ್ನು ಪ್ರೇಮಿಗಳ ದಿನದ ನಿಮಿತ್ತ ಬೇರೆ ಬೇರೆ ಆಫರ್ಗಳ ಮೂಲಕ ಯುವಕ/ಯುವತಿಯರನ್ನು ಹಾಳು ಮಾಡುವ ದಿನ ನಮ್ಮ ಸಂಸ್ಕೃತಿಗೆ ಶೋಭೆ ತರುವುದೇ? ನಾವು ಹಿಂದು ಸಂಘಟನೆ ಮೂಲಕ ಸಾಕಷ್ಟು ಹೋರಾಟ ಮಾಡಿ, ಜಾಗೃತಿ ಮೂಡಿಸಿ ಇಡಿ ರಾಜ್ಯದ ಕಾಲೇಜುಗಳಲ್ಲಿ ಆಚರಣೆ ಆಗದಿರುವ ಹಾಗೆ ಮಾಡಿದ್ದೇವೆ. ನಮ್ಮ ಪ್ರಯತ್ನದಿಂದ ೨೫ ಪ್ರತಿಶತ ತಡದಿದ್ದೇವೆ ನಮ್ಮ ಪ್ರಯತ್ನಕ್ಕೆ ವ್ಯಾಲೆಂಟೈನ್ಸ್ ಡೇ ಪರವಾಗಿರುವ ಭೂತಾಕಾರವಾಗಿ ಬೆಳೆಯುತ್ತಿರುವ ಮಾಫಿಯಾಗಳು ನಮ್ಮನ್ನು ತಡೆಯುತ್ತವೆ. ಹೆದರಿಸುತ್ತಾರೆ. ಶಾರೀರಿಕ ಹಲ್ಲೆ ಕೂಡಾ ಮಾಡಿದ್ದಾರೆ, ಮುಂದೆಯೂ ಮಾಡುತ್ತಾರೆ. ೨೦೧೦ ರಲ್ಲಿ ಬೆಂಗಳೂರಿನಲ್ಲಿ ‘ಪ್ರೇಮಿಗಳ ದಿನ’ದ ಬಗ್ಗೆ ಒಂದು ವಾಹಿನಿಯಲ್ಲಿ ಚರ್ಚೆ ಮಾಡುತ್ತಿರುವ ಸಮಯದಲ್ಲಿ ನನ್ನ ಮುಖಕ್ಕೆ ಮಸಿ ಬಳಿದು ಅವಮಾನ ಮಾಡಲಾಗಿತ್ತು. ಈ ರೀತಿ ಸಾಕಷ್ಟು ಅವಮಾನ, ಹಲ್ಲೆ, ಪೊಲೀಸ್ ಕೇಸ್ಗಳನ್ನು ಎದುರಿಸಿಯೂ ನಾವು ಜಾಗೃತಿ ಮೂಡಿಸುವುದು ಹಾಗೂ ಈ ಮಾಫಿಯಾಗಳನ್ನು ತಡೆಯುವ ಕಾರ್ಯ ನಡೆಯುತ್ತಲೇ ಇದೆ. ನನಗೆ ಬೆಂಗಳೂರಿನ ೮೨ ಕಾಲೇಜಿನ ಪ್ರಾಂಶೂಪಾಲರು ಹಾಗೂ ಆಡಳಿತ ಮಂಡಳಿಯವರು, ಧನ್ಯವಾದ ಹಾಗೂ ಅಭಿನಂದನೆ ಪತ್ರಗಳನ್ನು ಕಳುಹಿಸಿದ್ದಾರೆ, ‘ವ್ಯಾಲೆಂಟೈನ್ಸ್ ಡೇ’ ಆಚರಣೆ ಕಾಲೇಜಿನ ಕ್ಯಾಂಪಸ್ನಲ್ಲಿ ತಡೆಯಲು ಆಗುತ್ತಿರಲಿಲ್ಲ ಶ್ರೀರಾಮ ಸೇನೆ ಹೆಸರಿನಲ್ಲಿ ನೋಟಿಸ್ ಬೋರ್ಡಿಗೆ ‘ಪ್ರೇಮಿಗಳ ದಿನ’ ದ ವಿರೋಧ ಪತ್ರ ಅಂಟಿಸಿದ್ದರಿಂದ ನಮಗೆ ಅನೂಕೂಲವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕ್ಯಾಂಪಸ್ನಲ್ಲಿ ಆಚರಣೆ ನಿಂತಿದೆ.
‘ವ್ಯಾಲೆಂಟೈನ್ಸ್ ಡೇ’ ನಿಮಿತ್ತ ೧೫ ದಿನದಿಂದ ಮೊದಲು ಇದರ ದುಷ್ಟಪರಿಣಾಮ ಪ್ರಾರಂಭವಾಗಿರುತ್ತದೆ. ಹೋಟೆಲ್ ಟೇಬಲ್ ಬುಕ್ಕಿಂಗ್, ಹುಡುಗಿಯರ ಬುಕ್ಕಿಂಗ್, ಲಾಡ್ಜಗಳಲ್ಲಿ ರೂಂ ಬುಕ್ಕಿಂಗ್, ಪಾರ್ಕಗಳು, ಪ್ರವಾಸಿ ಕೇಂದ್ರಗಳ ಬುಕ್ಕಿಂಗ್ ಇನ್ನು ಏನೇನೊ ನಡೆಯತ್ತದೆ, ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಮಾಫಿಯಾಗಳಂತೂ ಕೋಟಿಗಟ್ಟಲೇ ಲಾಭ ಗಳಿಸುತ್ತಾರೆ. ವೈನ್ ವ್ಯವಹಾರ ಸಾವಿರಾರು ಕೋಟಿ ನಡೆಯುತ್ತದೆ. ಕಾಂಡೋಮ್ ಮಾರಾಟದ ಏರಿಕೆ ಊಹಿಸಲು ಸಾಧ್ಯವಿಲ್ಲ, ಇದು ಪ್ರೇಮಿಗಳ ದಿನ ! ನಮ್ಮ ಭಾರತೀಯ ಸಂಸ್ಕೃತಿಗೆ ಕಳಂಕ ತರುವುದು ನಮ್ಮ ಯುವಶಕ್ತಿ ಹಾಳಾಗುವ ‘ವ್ಯಾಲೆಂಟೈನ್ಸ್ ಡೇ’ ಬೇಡ ಇದನ್ನು ವಿರೋಧಿಸಿರಿ ಪಾಲಕರು, ಸಮಾಜದ ಹಿತಚಿಂತಕರು, ಸರಕಾರವು ಕೂಡಾ ಇದನ್ನು ಗಂಭೀರವಾಗಿ ಚಿಂತಿಸಿ ನಿಷೇಧಿಸಬೇಕು. ‘ವ್ಯಾಲೆಂಟೈನ್ಸ್ ಡೇ’ ಹಿಂದೆ-ಮುಂದೆ ಎಷ್ಟು ರೇಪ್ಗಳು, ಅಪಘಾತ (ಕುಡಿದು ವಾಹನ ಚಾಲನ)ಗಳು, ಕಿಡ್ನಾಪ್ಗಳು, ಕೊಲೆಗಳು ನಡೆಯುತ್ತವೆ. ಪ್ರೀತಿ ಎಂಬುದು ಒಂದು ಪವಿತ್ರ ಭಾವನೆ, ಪ್ರೀತಿ ಎಂಬುದು ನಿಸ್ವಾರ್ಥ ಸ್ವಾದ, ಪ್ರೀತಿಗೆ ಜಾತಿ, ಭಾಷೆ, ಮತದ ಲೇಪನ ಇಲ್ಲ. ಪ್ರೀತಿ ಹುಡುಗ ಹುಡುಗಿಯಲ್ಲಿ ಮಾತ್ರ ಅಲ್ಲ, ತಾಯಿ-ತಂದೆ ಪ್ರೀತಿ, ಸಹೋದರ-ಸಹೋದರಿಯರ ಪ್ರೀತಿ, ಗೇಳೆಯರ ಪ್ರೀತಿ, ಪುಸ್ತಕ ಪ್ರೇಮ, ಪ್ರಾಣಿಗಳ ಪ್ರೀತಿ, ದೇಶ ಪ್ರೇಮ, ಕೃಷಿ ಪ್ರೇಮ, ಇತ್ಯಾದಿ ಇವೆಲ್ಲವುಗಳಲ್ಲಿ, ನಿಸ್ವಾರ್ಥ, ಪವಿತ್ರ ಪ್ರೀತಿ ಇದೆ. ‘ವ್ಯಾಲೆಟೆನ್ನ ಡೇ’ ದಲ್ಲಿ ಸ್ವಾರ್ಥ, ಕಾಮ, ಉದ್ವೇಗ, ಉನ್ಮಾದ ತುಂಬಿದೆ. ನಿತ್ಯ ಪವಿತ್ರ ನಿಸ್ವಾರ್ಥ ಪ್ರೀತಿಗೆ ಅವಕಾಶ ಕೊಡಿ ಅದರ ಆನಂದವೇ ಚಿರವಾದದ್ದು, ಕಳೆದ ೧೦ ವರ್ಷಗಳಿಂದ ‘ವ್ಯಾಲೆಂಟೈನ್ಸ್ ಡೇ’ ಬೇಡ : ಮಾತೃ-ಪಿತೃ ಪೂಜನ ಬೇಕು ಎಂದು ಆಚರಿಸುತ್ತಿದ್ದೇವೆ. ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಕಡೆಗೆ ತಂದೆ-ತಾಯಿ ಪಾದ ಪೂಜೆ ಮಾಡುತ್ತೇವೆ. ಯುವಕ-ಯುವತಿಯರು ನಿಸ್ತೇಜ, ನಿಷ್ಕ್ರಿಯರಾಗುವ ಮುನ್ನ ಎಚ್ಚರಗೊಳ್ಳೋಣ. ನಮ್ಮ ಹಿಂದೂ ಸಂಸ್ಕೃತಿ ಉಳಿಸೋಣ, ದೇಶ ಸುಭದ್ರಗೊಳಿಸೋಣ ಎಂಬುದೇ ನಮ್ಮ ಕಳಕಳಿಯ ಪ್ರಾರ್ಥನೆಯಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement