ಮತ್ತೆ ಏರಿದ ಪೆಟ್ರೋಲ್‌ ದರ

ಬೆಂಗಳೂರು: ಕಳೆದ ವಾರಪೂರ್ತಿ ದರ ಏರಿಕೆ ಕಂಡಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರ ರವಿವಾರ ಕೂಡ ಏರಿಕೆ ಕಂಡಿದೆ.
6 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ 2.16 ರೂ. ಏರಿಕೆಯಾಗಿದೆ. ಭಾರತೀಯ ರೂಪಾಯಿ ಮೌಲ್ಯವು ಡಾಲರ್ ಎದುರು ಕುಸಿತ ಕಂಡಿರುವುದು ತೈಲ ಬೆಲೆಯನ್ನು ಮತ್ತಷ್ಟು ಏರಿಸುವ ಸೂಚನೆ ನೀಡಿದೆ.
ಪ್ರಸ್ತುತ ರೂಪಾಯಿ ಮೌಲ್ಯವು ಡಾಲರ್ ಎದುರು 72.85 ರೂ.ಗಳಿಗೆ ಏರಿಕೆ ಆಗಿದೆ. ರವಿವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ 34 ಪೈಸೆ ಹೆಚ್ಚಳವಾಗಿದೆ.
45 ದಿನಗಳಿಂದಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು 18 ಬಾರಿ ಏರಿಕೆಯಾಗುವ ಗ್ರಾಹಕರ ಜೇಬಿಗೆ ಬೆಂಕಿ ಬಿದ್ದಂತಾಗಿದೆ. ಈ ತಿಂಗಳಲ್ಲೇ ಪೆಟ್ರೋಲ್ ಉತ್ಪನ್ನಗಳು 8 ಬಾರಿ ತನ್ನ ಬೆಲೆ ಏರಿಸಿಕೊಂಡಿದೆ.

ಪ್ರಮುಖ ನಗರಗಳಲ್ಲಿ ದರ:
ಮುಂಬೈ- 95.21ರೂ. (ಪೆಟ್ರೋ ಲ್), 86.04 ರೂ.(ಡೀಸೆಲ್)
ಚೆನ್ನೈ- 90.96ರೂ. (ಪೆಟ್ರೋ ಲ್), 84.16 ರೂ.(ಡೀಸೆಲ್)
ಕೋಲ್ಕತ್ತಾ- 90.01ರೂ. (ಪೆಟ್ರೋ ಲ್), 82.65 ರೂ.(ಡೀಸೆಲ್)
ದೆಹಲಿ- 88.73.ರೂ. (ಪೆಟ್ರೋ ಲ್),79.06 ರೂ.(ಡೀಸೆಲ್)
ಬೆಂಗಳೂರು- 91.70ರೂ. (ಪೆಟ್ರೋ ಲ್), 83.81 ರೂ.(ಡೀಸೆಲ್)

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement