ಮೋದಿ ಲೂಟಿಕೋರ; ರಾಹುಲ್‌ ಗಾಂಧಿ ಆರೋಪ

ಕೊರೊನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಪ್ರಧಾನಿ ಮೋದಿ ಕಾರ್ಪೋರೇಟ್‌ಗಳತ್ತ ಗಮನ ಹರಿಸಿ ತಮ್ಮ ಇಬ್ಬರು ಸ್ನೇಹಿತರ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೇರ ಆರೋಪ ಮಾಡಿದ್ದಾರೆ.
ಕೊವಿಡ್‌-೧೯ ಸಂದರ್ಭದಲ್ಲಿ ಮೋದಿ ಸಾರ್ವಜನಿಕರ ಹಣವನ್ನು ಲೂಟಿಗೈದಿದ್ದಾರೆ ಎಂದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಆಸ್ಸಾಂ ರಾಜ್ಯವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್‌ ರಾಜ್ಯದ ಜನರನ್ನು ಒಗ್ಗೂಡಿಸಿದೆ.
ರಾಜ್ಯದ ಪ್ರಸ್ತುತ ಬಿಜೆಪಿ ಸರ್ಕಾರವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ರಾಹುಲ್‌, ನಿಮ್ಮ ಸಮಸ್ಯೆಗಳನ್ನು ಆಲಿಸುವ ನಿಮ್ಮ ಸ್ವಂತ ಸಿಎಂ ನಿಮಗೆ ಬೇಕು. ಆದರೆ ಪ್ರಸ್ತುತ ಅಸ್ಸಾಂ ಸಿಎಂ ದೆಹಲಿ ಹಾಗೂ ನಾಗಪುರ ಹೇಳಿದಂತೆ ಮಾತ್ರ ಕೇಳುತ್ತಾರೆ ಎಂದರು.
ರಾಜ್ಯದಲ್ಲಿ ಸರ್ಕಾರ ರಚಿಸಲು ಅವಕಾಶ ನೀಡಿದರೆ ಅಸ್ಸಾಂ ಒಪ್ಪಂದದ ತತ್ವವನ್ನು ರಕ್ಷಿಸುವುದಾಗಿ ರಾಹುಲ್ ಗಾಂಧಿ ವಾಗ್ದಾನ ಮಾಡಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement