ರೈತರ ಬೇಡಿಕೆ ಈಡೇರುವ ವರೆಗೂ ಸರ್ಕಾರಕ್ಕೆ ಶಾಂತಿಯಿಂದಿರಲು ಬಿಡಲ್ಲ

ರೈತರ ಬೇಡಿಕೆಗಳನ್ನು ಈಡೇರಿಸುವವರೆಗೂ ಶಾಂತಿಯಿಂದ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಮುಂಚೂಣಿಯಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್‌ ಹೇಳಿದ್ದಾರೆ.
ರೈತರ “ಮಹಾಪಂಚಾಯತ್” ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಆಂದೋಲನಕ್ಕೆ ಮುಂದಾಗಿರುವ 40 ನಾಯಕರು ಇಡೀ ದೇಶದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರವು ನಮ್ಮ ಪರವಾಗಿ ತೀರ್ಮಾನಿಸುವ ವರೆಗೂ ಆಂದೋಲನವನ್ನು ಮುನ್ನಡೆಸುತ್ತೇವೆ ನಾವು ಸರ್ಕಾರವನ್ನು ಶಾಂತಿಯಿಂದ ಕುಳಿತುಕೊಳ್ಳಲು ಬಿಡುವುದಿಲ್ಲ” ಎಂದು ಅವರು ಹೇಳಿದರು.
ಕೇಂದ್ರದ ಕೃಷಿ ಕಾನೂನುಗಳು “ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ನಾಶಗೊಳಿಸುತ್ತವೆ ಎಂದು ಅವರು ಮತ್ತೊಮ್ಮೆ ಪುನರುಚ್ಚರಿಸಿದರು.
ಈ ಕಾನೂನುಗಳು ರೈತರ ಮೇಲೆ ಮಾತ್ರವಲ್ಲದೆ ಸಣ್ಣ ವ್ಯಾಪಾರಿಗಳು, ಮತ್ತು ಇತರ ವಿಭಾಗಗಳ ಮೇಲೂ ಪರಿಣಾಮ ಬೀರುತ್ತವೆ. . ಕಾನೂನುಗಳನ್ನು ತರುವ ಹಿಂದಿನ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದ ಅವರು, “ಮೊದಲು ಗೋದಾಮುಗಳನ್ನು ನಿರ್ಮಿಸಲಾಯಿತು ಮತ್ತು ನಂತರ ಕಾನೂನುಗಳು ಬಂದವು. ಈ ಕಾನೂನುಗಳು ದೊಡ್ಡ ಸಂಸ್ಥೆಗಳ ಪರವೆಂದು ರೈತರಿಗೆ ತಿಳಿದಿಲ್ಲವೇ? ಈ ದೇಶದಲ್ಲಿ ಹಸಿವಿನ ವ್ಯಾಪಾರಕ್ಕೆ ಅನುಮತಿ ಕೊಡುವುದಿಲ್ಲ” ಎಂದು ಟಿಕಾಯಿತ್‌ ಪುನರುಚ್ಚರಿಸಿದರು.
ಸಮಿತಿಯು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡರೂ ಅದು ಎಲ್ಲರಿಗೂ ಸ್ವೀಕಾರಾರ್ಹ. ದೇಶದ ರೈತರು ಇದರ ಹಿಂದೆ ನಿಲ್ಲುತ್ತಾರೆ ಎಂದರು.
ರೈತ ಮುಖಂಡರಾದ ಬಲ್ಬೀರ್ ಸಿಂಗ್ ರಾಜೇವಾಲ್, ದರ್ಶನ್ ಪಾಲ್ ಮತ್ತು ಹರಿಯಾಣ ಬಿಕೆಯು ಮುಖ್ಯಸ್ಥ ಗುರ್ನಮ್ ಸಿಂಗ್ ಚಾಡುನಿ ಉಪಸ್ಥಿತರಿದ್ದರು. ರೈತರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಆದರೆ ಸರ್ಕಾರ ಅವರ ಬೇಡಿಕೆಗಳನ್ನು ಆಲಿಸುತ್ತಿಲ್ಲ ಎಂದು ರಾಜೇವಾಲ್ ಹೇಳಿದರು.

ಪ್ರಮುಖ ಸುದ್ದಿ :-   ಬಾಲಿವುಡ್‌ ನಟ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು

ಆಂದೋಲನದ ಸಮಯದಲ್ಲಿ 200 ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಪಾಲ್ ಹೇಳಿದರು, ಅವರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement