ಬಸ್‌ ನಾಲೆಗೆ ಬಿದ್ದು ೩೭ ಜನರು ಜಲಸಮಾಧಿ

ಸಿಧಿ: ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಟ್ನಾ ಗ್ರಾಮದ ಬಳಿ ಸೇತುವೆ ಮೇಲಿಂದ ಬಸ್‌ ಬನ್ಸಾಗರ ನಾಲೆಗೆ ಬಿದ್ದು ೧೬ ಮಹಿಳೆಯರು ಸೇರಿದಂತೆ ೩೭ ಜನರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಬೆಳಗ್ಗೆ ೯ ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣಕ್ಕೆ ಸಿಗದ ಬಸ್‌ ನಾಲೆಗ ಬಿದ್ದಿದೆ. ಅತಿಯಾದ ವೇಗವೇ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಬಸ್‌ನಲ್ಲಿ ೪೪ ಜನರು ಪ್ರಯಾಣಿಸುತ್ತಿದ್ದು, ೭ ಜನರು ಈಜಿ ದಡ ತಲುಪಿದ್ದಾರೆ. ಮೃತರ ದೇಹಗಳನ್ನು ನಾಲೆಯಿಂದ ಮೇಲೆತ್ತಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ.
ಘಟನೆಯ ನಂತರ ರಾಜ್ಯಕ್ಕೆ ಗೃಹಸಚಿವ ಅಮಿತ್‌ ಶಾ ಭೇಟಿಯನ್ನು ರದ್ದುಗೊಳಿಸಲಾಗಿದೆ. ಅಮಿತ್‌ ಶಾ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಿಸಿದ ೧ ಲಕ್ಷ ಮನೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಅಮಿತ್‌ ಶಾ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಚಾಲನೆ ನೀಡಲಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement