ಮನೆ ಕಟ್ಟಲು ಕೂಡಿಟ್ಟಿದ್ದ ೫ ಲಕ್ಷ ರೂ. ಗೆದ್ದಲು ಪಾಲು

ಹೈದರಾಬಾದ್‌: ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿನ ಉದ್ಯಮಿಯೊಬ್ಬರು ಮನೆಕಟ್ಟಲು ಟ್ರಂಕ್‌ನಲ್ಲಿ ಕೂಡಿಟ್ಟಿದ್ದ ಸುಮಾರು ಐದು ಲಕ್ಷ ನಗದು ಹಣ ಗೆದ್ದಲು ತಿಂದು ಹರಿದು ಚಿಂದಿಯಾಗಿ ಬಳಕೆಗೆ ಬಾರದಂತಾಗಿದೆ.
ಹಂದಿ ವ್ಯಾಪಾರಿಯಾಗಿರುವ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಮೈಲಾವರಮ್‌ ಗ್ರಾಮದ ನಿವಾಸಿಯಾಗಿರುವ ಬಿಜಿಲ್‌ ಜಮಾಲಯ್ಯ ಎಂಬಾತ ತಾನು ದುಡಿದ ಹಣವನ್ನು ಬ್ಯಾಂಕ್‌ನಲ್ಲಿ ಇಡುವ ಬದಲು, ಕಬ್ಬಿಣದ ಟ್ರಂಕ್‌ನಲ್ಲಿ ಕೂಡಿಟ್ಟಿದ್ದಾರೆ. ದುರದೃಷ್ಟವಶಾತ್‌ ಎಲ್ಲಾ ನೋಟುಗಳನ್ನು ಗೆದ್ದಲು ತಿಂದಿರುವುದರಿಂದ ಉಪಯೋಗಿಸಲಾಗದ ಸ್ಥಿತಿಗೆ ತಲುಪಿದೆ.
ಹಂದಿಗಳ ವ್ಯಾಪಾರವಾಗಿರುವುದರಿಂದ ಹೆಚ್ಚಾಗಿ ನಗದು ವಹಿವಾಟೇ ನಡೆಯುತ್ತಿದ್ದು. ಹೀಗಾಗಿ ವ್ಯಾಪಾರದದಿಂದ ಗಳಿಸಿದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವ ಬದಲು ಕಬ್ಬಿಣದ ಟ್ರಂಕ್‌ನಲ್ಲಿ ಇರಿಸಿದ್ದರು.
ಸ್ವಂತದ್ದೊಂದು ಮನೆ ನಿರ್ಮಾಣ ಮಾಡಲು ಈ ಹಣ ಕೂಡಿಟಿದ್ದ ಜಮಾಲಯ್ಯ ಈಗ ಹಣ ಕಳೆದುಕೊಂಡು ನಷ್ಟ ಅನುಭವಿಸಿದ್ದಾರೆ. ಐದು ಲಕ್ಷ ಮೌಲ್ಯದ ₹200 ಹಾಗೂ ₹2000ರ ನೋಟು ಸೇರಿ ವಿವಿಧ ಮುಖಬೆಲೆಯ ನೋಟುಗಳಿದ್ದವು.
ಚಿಂದಿಯಾದ ಉಪಯೋಗಕ್ಕೆ ಬಾರದ ನೋಟುಗಳನ್ನು ರಸ್ತೆಯಲ್ಲಿ ಆಡವಾಡುತ್ತಿರುವ ಮಕ್ಕಳಿಗೆ ಹಂಚಿದ್ದು, ಸುತ್ತಮುತ್ತಲಿನ ಮಕ್ಕಳು ಹರಿದ ಹಣದೊಂದಿಗೆ ಆಟವಾಡುತ್ತಿರುವುದರ ಬಗ್ಗೆ ಸ್ಥಳೀಯರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈ ವೇಳೆ ವಿಷಯ ಬಹಿರಂಗವಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   5 ಮತ್ತು 8ನೇ ತರಗತಿಗೆ ಬೋರ್ಡ್​ ಪರೀಕ್ಷೆ : ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ, ಅರ್ಜಿ ಆಲಿಸಲು ಸಮ್ಮತಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement