ಸಿದ್ದರಾಮಯ್ಯ, ನಟ ಯಶ್‌ ಅಂತ್ಯಕ್ರಿಯೆಗೆ ಬರಬೇಕೆಂದು ಡೆತ್‌ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡ ಯುವಕ

posted in: ರಾಜ್ಯ | 0

ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚಿತ್ರ ನಟ ಯಶ್‌ ಆಗಮಿಸಬೇಕು ಎಂದು ಡೆತ್ ‌ನೋಟ್‌ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಂಡ್ಯ ತಾಲೂಕ ಕೆರೆಗೋಡು ಹೋಬಳಿ ಕೊಡಿದೊಡ್ಡಿ ಗ್ರಾಮದ ಯುವಕ ಕೃಷ್ಣ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂತ್ಯಕ್ರಿಯೆ ವೇಳೆ ತನ್ನ ಮೊಬೈಲ್‌ನ್ನು ಚಿತೆಯಲ್ಲಿ ಹಾಕುವಂತೆ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಡಿದೊಡ್ಡಿ ಗ್ರಾಮಕ್ಕೆ ಆಗಮಿಸಲಿದ್ದಾರೆ.
ಯುವಕ ಕೃಷ್ಣ ಬರೆದಿರುವ ಡೆತ್‌ನೋಟ್‌ನಲ್ಲಿ ನನ್ನನ್ನು ಎಲ್ಲರೂ ಕ್ಷಮಿಸಿ. ತಾಯಿಗೆ ತಕ್ಕ ಮಗನಾಗಲಿಲ್ಲ, ಅಣ್ಣನಿಗೆ ತಕ್ಕ ತಮ್ಮನಾಗಲಿಲ್ಲ, ಸ್ನೇಹಿತರಿಗೆ ಒಳ್ಳೆಯ ಸ್ನೇಹಿತನಾಗಲಿಲ್ಲ, ಹುಡುಗಿಗೆ ಒಳ್ಳೆ ಹುಡುಗನಾಗಲಿಲ್ಲ ಎಂದು ಬರೆದಿದ್ದಾನೆ. ಜೊತೆಗೆ ನಟ ಯಶ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತನ್ನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬೇಕು ಎಂದು ಯುವಕ ಡೆತ್‌ನೋಟ್‌ನಲ್ಲಿ ಕೋರಿದ್ದಾನೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಐಎಫ್‌ಎಸ್‌ ಪರೀಕ್ಷೆಯಲ್ಲಿ ಉತ್ತರ ಕನ್ನಡ ಯುವಕರ ಉತ್ತಮ ಸಾಧನೆ: ದೇಶಕ್ಕೆ 2ನೇ ರ‍್ಯಾಂಕ್ ಪಡೆದ ವರದರಾಜ ಗಾಂವಕರ, ನವೀನಕುಮಾರ ಹೆಗಡೆಗೆ 62ನೇ ರ‍್ಯಾಂಕ್
advertisement

ನಿಮ್ಮ ಕಾಮೆಂಟ್ ಬರೆಯಿರಿ