ಕೇರಳದಲ್ಲಿ ಕೊರೊನಾ ಕೇಕೆ: ಕೊಡಗು ಜಿಲ್ಲೆಯಲ್ಲಿ ಕಟ್ಟೆಚ್ಚರ

posted in: ರಾಜ್ಯ | 0

ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೇರಳಕ್ಕೆ ಹೋಗಿ ಬರುವವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.
ಕೇರಳದಲ್ಲಿ ಬುಧವಾರ ಫೆ.17 ರಂದು ಒಂದೇ ದಿನ 4,892 ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಅಲ್ಲಿ ಈಗ 60,803ಕ್ಕೆ ಏರಿದಂತಾಗಿದೆ. 746 ಮಂದಿ ಐಸಿಯುನಲ್ಲಿದ್ದು, 218 ರೋಗಿಗಳು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದಾರೆ.
ಕೊಡಗಿನ ಜೊತೆ ಗಡಿ ಹಂಚಿಕೊಂಡಿರುವ ವಯನಾಡ್‌ ಜಿಲ್ಲೆಯಲ್ಲಿ 144, ಕಣ್ಣೂರು ಜಿಲ್ಲೆಯಲ್ಲಿ 284 ಹಾಗೂ ಕಾಸರಗೋಡು ಜಿಲ್ಲೆಯಲ್ಲಿ 73 ಕೋವಿಡ್‌-19 ಪ್ರಕರಣಗಳು ವರದಿಯಾಗಿದೆ. ನೆರೆಯ ಜಿಲ್ಲೆಗಳಲ್ಲಿ ಈ ರೀತಿಯ ಆತಂಕ ಪರಿಸ್ಥಿತಿ ಇರುವುದರಿಂದ ಕೊಡಗಿನಲ್ಲೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಾಸರಗೋಡು ಜಿಲ್ಲೆಯ ಗಡಿಭಾಗ ಕರಿಕೆ, ವಯನಾಡು ಜಿಲ್ಲೆಯ ಗಡಿಭಾಗ ಕುಟ್ಟ ಹಾಗೂ ಕಣ್ಣೂರು ಜಿಲ್ಲೆಯ ಗಡಿಭಾಗ ಮಾಕುಟ್ಟದಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ.
ಗಡಿಯಲ್ಲಿರುವ ಗ್ರಾಮಸ್ಥರು ತಮ್ಮ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ, ಇತರೆ ಕೆಲಸ ಕಾರ್ಯಗಳಿಗೆ ನೆರೆಯ ಕೇರಳದಲ್ಲಿರುವ ಊರುಗಳನ್ನೇ ಅವಲಂಬಿಸಿದ್ದಾರೆ. ಕರಿಕೆ ಭಾಗದಿಂದ ಸುಳ್ಯಕ್ಕೆ ಶೈಕ್ಷಣಿಕ ಉದ್ದೇಶಕ್ಕೆ ತೆರಳುವ ವಿದ್ಯಾರ್ಥಿಗಳು ಕೇರಳದ ಪಾಣತ್ತೂರು ಮೂಲಕ ಸುಳ್ಯದ ವಿದ್ಯಾಸಂಸ್ಥೆಗಳಿಗೆ ಬಸ್‌ನಲ್ಲಿ ಹೋಗುತ್ತಾರೆ.
ಕಳೆದ ಕೆಲವು ದಿನಗಳಿಂದ ಪಾಣತ್ತೂರಿನಲ್ಲಿ ನೂರಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದೆ. ಗುರುವಾರ ಒಂದೇ ದಿನ 12 ಕೊರೊನಾ ಪ್ರಕರಣಗಳು ವರದಿಯಾಗಿದೆ. ಈ ಬೆನ್ನಲ್ಲೇ ಈಗ ಜಿಲ್ಲಾಡಳಿತ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/
ಓದಿರಿ :-   ವಿಚಿತ್ರ...ತನಗೆ ಹೊಡೆದವರನ್ನು ಮಾತ್ರ ಬೆನ್ನು ಬಿಡದೆ ಅಟ್ಟಾಡಿಸಿಕೊಂಡು ಹೋಗುವ ದೇವಿಯ ಹರಕೆಯ ಕೋಣ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ