ವಾಷಿಂಗ್ಟನ್: ನಾಸಾದ ಉಪಗ್ರಹ ಯಶಸ್ವಿಯಾಗಿ ಮಂಗಳನ ಮೇಲ್ಮೈ ತಲುಪಿದ ಯಶಸ್ಸಿನಲ್ಲಿ ಭಾರತೀಯ ಮೂಲದ ಯುವತಿಯೊಬ್ಬರ ಪಾತ್ರ ಪ್ರಮುಖವಾಗಿದೆ.
ಉಪಗ್ರಹ ಏಳು ತಿಂಗಳ ಬಾಹ್ಯಾಕಾಶ ಯಾನದ ನಂತರ ರೋವರ್ ಯಶಸ್ವಿಯಾಗಿ ಮಂಗಳವನ್ನು ತಲುಪುವಲ್ಲಿ ಭಾರತೀಯ ಮೂಲದ ಡಾ. ಸ್ವಾತಿ ಮೋಹನರ ಶ್ರಮ ಕೂಡ ಇದೆ. ರೋವರ್ ಮೊದಲು ಮಂಗಳನ ಅಂಗಳಕ್ಕೆ ಇಳಿದಿದ್ದನ್ನು ದೃಢಪಡಿಸಿದ್ದೇ ಡಾ. ಸ್ವಾತಿ. ಕ್ಯಾಲಿಫೋರ್ನಿಯಾದ ನಾಸಾ ಮಿಷನ್ ಕಂಟ್ರೋಲ್ ರೂಮ್‌ನಲ್ಲಿ ರೋವರ್ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿದ ವಿಜ್ಞಾನಿಗಳ ತಂಡದಲ್ಲಿ ಸ್ವಾತಿ ಕೂಡ ಸೇರಿದ್ದಾರೆ.
ಕಾರ್ನೆಲ್‌ನಲ್ಲಿ ಪದವಿ ಪಡೆದಿರುವ ಸ್ವಾತಿ, ಆರಂಭದಿಂದಲೂ ಮಂಗಳ ಮಿಷನ್‌ನ ಭಾಗವಾಗಿದ್ದಾರೆ. ಈ ಹಿಂದೆ ಅವರು ನಾಸಾದ ಕ್ಯಾಸಿನಿ ಮಿಷನ್ ಟು ಸ್ಯಾಟರ್ನ್‌ದಲ್ಲೂ ಕಾರ್ಯ ನಿರ್ವಹಿಸಿದ್ದರು.
ಸ್ವಾತಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದರು. ರೋವರ್ ನಿಯಂತ್ರಣ ಮಾಡಿ ಲ್ಯಾಂಡಿಂಗ್ ಮೂಲಕ ನ್ಯಾವಿಗೇಟ್ ಮೂಲಕ ಟಚ್‌ಡೌನ್ ಆದಾಗ ಇಡೀ ಪ್ರಪಂಚವೇ ನಿಬ್ಬೆರಗಾಯಿತು.
ಸ್ವಾತಿ ಒಂದು ವರ್ಷದವಳಿದ್ದಾಗ ಸ್ವಾತಿ ಪಾಲಕರು ಅಮೆರಿಕಕ್ಕೆ ಬಂದರು. ಆಕೆಯ ಬಾಲ್ಯದ ಬಹುಪಾಲು ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಕಳೆಯಿತು. ಅಮೆರಿಕನ್ ವೈಜ್ಞಾನಿಕ ಕಾದಂಬರಿ ಸರಣಿ ‘ಸ್ಟಾರ್ ಟ್ರೆಕ್’ ನಿಂದ ಪ್ರಭಾವಿತರಾದ ಸ್ವಾತಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾದರು.
ರೋವರ್ ಉಪಗ್ರಹ ಸುಮಾರು ಏಳು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಸಾಗಿ 472 ದಶಲಕ್ಷ ಕಿ.ಮೀ.ಗಿಂತಲೂ ಹೆಚ್ಚು ದೂರದ ಮಂಗಳ ಗ್ರಹದ ಅಂಗಳಕ್ಕೆ ಪ್ರವೇಶಿಸುವ ಮೊದಲು ಗಂಟೆಗೆ 12,000 ಮೈಲುಗಳಷ್ಟು (ಗಂಟೆಗೆ 19,000 ಕಿ.ಮೀ) ಸಂಚರಿಸಿ ಮಂಗಳ ಗ್ರಹದ ಮೇಲ್ಮೈಯಲ್ಲಿ ತನ್ನ ಪಥವನ್ನು ಪ್ರಾರಂಭಿಸಿತು.
ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |

ನಿಮ್ಮ ಕಾಮೆಂಟ್ ಬರೆಯಿರಿ