ಮೊದಲು ನನ್ನ ಸೋದರಳಿಯನ ವಿರುದ್ಧ ಸೆಣಸಿ: ಅಮಿತ್‌ ಶಾಗೆ ದೀದಿ ಸವಾಲು

ಮೊದಲು ನನ್ನ ಸೋದರಳಿಯ ಅಭಿಷೇಕ ಬ್ಯಾನರ್ಜಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ನಂತರ ನನ್ನ ವಿರುದ್ಧ ಹೋರಾಟ ನಡೆಸಿ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಸವಾಲು ಹಾಕಿದ್ದಾರೆ.
ಅಭಿಷೇಕ್‌ ರಾಜ್ಯಸಭಾ ಸದಸ್ಯರಾಗಿ ಸಂಸದರಾಗಬಹುದಿತ್ತು, ಆದರೆ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನಾದೇಶ ಪಡೆದಿದ್ದಾರೆ. ಕೆಲವರು ದೀದಿ ಸಂಬಂಧಿಗಳ ಬಗ್ಗೆ ಮಾತನಾಡುತ್ತಾರೆ. ಮೊದಲು ಅಭಿಷೇಕ್‌ ವಿರುದ್ಧ ಸ್ಪರ್ಧಿಸಲಿ ಮುಂದೆ ನನ್ನ ವಿರುದ್ಧ ಸೆಣೆಸಿರಿ ಎಂದು ಹೇಳಿದರಲ್ಲದೇ ನಿಮ್ಮ ಪುತ್ರ ಕ್ರಿಕೆಟ್‌ ಆಡಳಿತ ಮಂಡಳಿಯಲ್ಲಿ ಹೇಗೆ ಸೇರ್ಪಡೆಗೊಂಡರು ಹಾಗೂ ಹೇಗೆ ನೂರಾರು ಕೋಟಿ ರೂ. ಸಂಪಾದಿಸಿದರು ಎಂಬ ಬಗ್ಗೆ ಮೊದಲು ತಿಳಿಸಿ ಎಂದು ಪ್ರಶ್ನಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಎಲ್ಲ ದಾಖಲೆಗಳನ್ನು ಮುರಿಯಲಿದೆ. ಮತ್ತೆ ಟಿಎಂಸಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು.
ಕುಟುಂಬ ರಾಜಕಾರಣ ಮಾಡುತ್ತಿರುವ ಮಮತಾ ಬ್ಯಾಜರ್ಜಿ ಸೋದರಳಿಯನಿಗೆ ಆದ್ಯತೆ ನೀಡುತ್ತಿದ್ದು, ಅವನನ್ನೇ ಸಿಎಂ ಮಾಡಲು ನಿರ್ಧರಿಸಿದ್ದಾರೆ ಎಂದು ಅಮಿತ್‌ ಶಾ ಆರೋಪಿಸಿದ್ದರು.

ಪ್ರಮುಖ ಸುದ್ದಿ :-   ಏಷ್ಯಾದ ಆನೆಗಳು ಸತ್ತ ಮರಿಗಳನ್ನು ವಿಧಿವತ್ತಾಗಿ ಹೂಳುತ್ತವೆ...! ಹೊಸ ಅಧ್ಯಯನದ ವೇಳೆ ಪತ್ತೆ...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement