ಬ್ರಿಟನ್, ಬ್ರೆಜಿಲ್, ದಕ್ಷಿಣ ಆಫ್ರಿಕಾ ನಂತರ ಈಗ ಜಪಾನ್‌ನಲ್ಲಿ ಹೊಸ ಮಾದರಿ ರೂಪಾಂತರಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಕೋವಿಡ್-೧೯ ಅಲೆಯನ್ನು ನಿಗ್ರಹಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ರೂಪಾಂತರಿ ಸೋಂಕು ಕಾಣಿಸಿಕೊಂಡಿರುವುದು ದೇಶವಾಸಿಗಳನ್ನು ಆತಂಕಿತರನ್ನಾಗಿಸಿದೆ. ಪೂರ್ವ ಜಪಾನ್‌ನ ಕಾಂಟೊ ಎಂಬಲ್ಲಿ ಪತ್ತೆಯಾದ ೯೧ ಪ್ರಕರಣಗಳಲ್ಲಿ ಹೊಸ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ. ಇದು ಈಗಿರುವ ಕೊರೊನಾ ಸೋಂಕಿಗಿಂತ ಹೆಚ್ಚು ಸಾಂಕ್ರಾಮಿಕವಾಗಬಹುದು. ಇದರಿಂದ ಸೋಂಕಿತರ ಸಂಖ್ಯೆಯಲ್ಲಿ ಒಮ್ಮಿಲೇ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಮುಖ್ಯ ಕ್ಯಾಬಿನೇಟ್ ಕಾರ್ಯದರ್ಶಿ ಕಟ್ಸುನೊಬು ಕಾಟೊ ತಿಳಿಸಿದ್ದಾರೆ.
ಜಪಾನ್‌ನಲ್ಲಿ ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮಾದರಿಯ ೧೫೧ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಪ್ರಸ್ತುತ ೪ ಲಕ್ಷ ಕೊರೊನಾ ಸೋಂಕಿತರಿದ್ದು, ೭೧೯೪ ಜನರು ಜೀವ ಕಳೆದುಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ