ಭಾರತ-ಮಾಲ್ಡಿವ್ಸ್‌ ಮಧ್ಯೆ ೫೦ ಮಿಲಿಯನ್‌ ಡಾಲರ್ ಸಾಲದ ಒಪ್ಪಂದ

ಭಾರತ ಹಾಗೂ ಮಾಲ್ಡೀವ್ಸ್‌ ಮಧ್ಯೆ ಕಡಲ ಸಾಮರ್ಥ್ಯವನ್ನು ಹೆಚ್ಚಿಸಲು ೫೦ ಮಿಲಿಯನ್‌ ಡಾಲರ್‌ ರಕ್ಷಣಾ ಸಾಲದ ಒಪ್ಪಂದ ನಡೆದಿದೆ.
ದ್ವಿಪಕ್ಷಿಯ ಸಂಬಂಧಗಳನ್ನು ಬಲಪಡಿಸಿ ಸಹಕಾರದ ಹೊಸ ಕ್ಷೇತ್ರಗಳನ್ನು ಆನ್ವೇಷಿಸಿ ರಕ್ಷಣಾ ಯೋಜನೆಗಳಿಗಾಗಿ ೫೦ ಮಿಲಿಯನ್‌ ಕ್ರೆಡಿಟ್‌ ಲೈನ್‌ ಒಪ್ಪಂದಕ್ಕೆ ಮಾಲ್ಡಿವ್ಸ್‌ ಹಣಕಾಸು ಸಚಿವಾಲಯ ಹಾಗೂ ಭಾರತದ ರಫ್ತು-ಆಮದು ಬ್ಯಾಂಕ್‌ ಒಪ್ಪಂದಕ್ಕೆ ಸಹಿ ಹಾಕಿದವು.
ಮಾಲ್ಡೀವಿಯನ್ ರಕ್ಷಣಾ ಸಚಿವ ಮರಿಯಾ ದಿದಿ, ಹಣಕಾಸು ಸಚಿವ ಇಬ್ರಾಹಿಂ ಅಮೀರ್, ಆರ್ಥಿಕ ಅಭಿವೃದ್ಧಿ ಸಚಿವ ಫಯಾಜ್ ಇಸ್ಮಾಯಿಲ್ ಮತ್ತು ರಾಷ್ಟ್ರೀಯ ಯೋಜನೆ, ವಸತಿ ಮತ್ತು ಮೂಲಸೌಕರ್ಯ ಸಚಿವ ಮೊಹಮ್ಮದ್ ಅಸ್ಲಾಮ್ ಅವರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾತುಕತೆ ನಡೆಸಿದ ನಂತರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಹುಲ್ಹುಮಾಲೆನಲ್ಲಿ 2000 ಸಾಮಾಜಿಕ ವಸತಿ ಘಟಕಗಳ ವಿನ್ಯಾಸ ಮತ್ತು ನಿರ್ಮಾಣವನ್ನು ಬೆಂಬಲಿಸಲು ಎಕ್ಸಿಮ್ ಬ್ಯಾಂಕಿನ ಖರೀದಿದಾರರ ಕ್ರೆಡಿಟ್ ಯೋಜನೆಯಡಿ ಸಾಲ ಸೌಲಭ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಫಾಹಿ ಧಿರಿಲ್ಹುನ್ ಕಾರ್ಪೊರೇಷನ್ ಮತ್ತು ಎಕ್ಸಿಮ್ ಬ್ಯಾಂಕ್ ನಡುವಿನ ಉದ್ದೇಶದ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿಸಲಾಗಿದೆ.
ವಿದೇಶಾಂಗ ಸಚಿವರು ರಕ್ಷಣಾ ಸಚಿವ ದೀದಿ ಅವರೊಂದಿಗೆ ಸೌಹಾರ್ದಯುತ ಸಭೆ ನಡೆಸಿ ರಕ್ಷಣಾ ಮತ್ತು ಭದ್ರತಾ ಸಹಕಾರದ ವಿವಿಧ ಅಂಶಗಳನ್ನು ಪರಿಶೀಲಿಸಿದರು. ಭಾರತವು ಯಾವಾಗಲೂ ಮಾಲ್ಡೀವ್ಸ್‌ಗೆ ವಿಶ್ವಾಸಾರ್ಹ ಭದ್ರತಾ ಪಾಲುದಾರನಾಗಲಿದೆ ಎಂದು ಜೈಶಂಕರ ಹೇಳಿದರು.
ಮಾಲ್ಡೀವ್ಸ್‌ ರಕ್ಷಣಾ ಪಡೆಗಳ ಅಧಿಕಾರವನ್ನು ಹೆಚ್ಚಿಸಲು ಮತ್ತು ಕಡಲ ಕಣ್ಗಾವಲು ಕೈಗೊಳ್ಳಲು ಮಾಲ್ಡೀವ್ಸ್ ಸರ್ಕಾರಕ್ಕೆ ಸಹಾಯ ಮಾಡಲು ಭಾರತ ಸರ್ಕಾರದ ಬೆಂಬಲ ಮತ್ತು ಸಹಕಾರಕ್ಕಾಗಿ 2013ರ ಎಪ್ರಿಲ್‌ನಲ್ಲಿ ಮಾಲ್ಡೀವ್ಸ್ ಸರ್ಕಾರದ ಕೋರಿಕೆಯ ಮೇರೆಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಇದು ಮಾಲ್ಡೀವಿಯನ್ ಕೋಸ್ಟ್ ಗಾರ್ಡ್ ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ವಿಪತ್ತು ಪರಿಹಾರ ಪ್ರಯತ್ನಗಳಿಗೆ ಅನುಕೂಲವಾಗಲಿದೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಜೈಶಂಕರ್ ಕೋವಿಡ್-19 ಲಸಿಕೆಯ 1,00,000 ಹೆಚ್ಚುವರಿ ಲಸಿಕೆಗಳನ್ನು ಮಾಲ್ಡಿವ್ಸ್‌ಗೆ ಹಸ್ತಾಂತರಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement