ದಿಶಾ ರವಿಗೆ ಜಾಮೀನು ನೀಡುವಾಗ ಋಗ್ವೇದ ಉಲ್ಲೇಖಿಸಿದ ನ್ಯಾಯಾಧೀಶರು

ನವ ದೆಹಲಿ:  ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರಿಗೆ ಮಂಗಳವಾರ ಜಾಮೀನು ನೀಡಿದ ದೆಹಲಿ ನ್ಯಾಯಾಲಯದ ನ್ಯಾಯಾಧೀಶರು ಋಗ್ವೇದವನ್ನು ಉಲ್ಲೇಖಿಸಿದ್ದಾರೆ.

ನಮ್ಮ 5000 ವರ್ಷಗಳಷ್ಟು ಹಳೆಯದಾದ ಈ ನಾಗರಿಕತೆಯು ವೈವಿಧ್ಯಮಯ ಭಾಗಗಳಿಂದ ಬಂದ ವಿಚಾರಗಳಿಗೆ ಎಂದಿಗೂ ಹಿಂಜರಿಯಲಿಲ್ಲ. ನಮ್ಮ ರಾಷ್ಟ್ರ ನಿರ್ಮಾತೃರು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಉಲ್ಲಂಘಿಸಲಾಗದ ಮೂಲಭೂತ ಹಕ್ಕು ಎಂದು ಗುರುತಿಸುವ ಮೂಲಕ ಅಭಿಪ್ರಾಯದ ಭಿನ್ನತೆಗೆ ಸಮರ್ಪಕ ಗೌರವ ನೀಡಿದ್ದಾರೆ” ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಧರ್ಮೇಂದ್ರ ರಾಣಾ ಹೇಳಿದರು ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಭಿನ್ನಾಭಿಪ್ರಾಯದ ಹಕ್ಕನ್ನು ಭಾರತದ ಸಂವಿಧಾನದ 19ನೇ ಪರಿಚ್ಛೇದದ ಅಡಿಯಲ್ಲಿ ದೃಢವಾಗಿ ಪ್ರತಿಪಾದಿಸಲಾಗಿದೆ ಎಂದು ನ್ಯಾಯಧೀಶರಾದ ರಾಣಾ ಹೇಳಿದರು.

ಭಾರತವನ್ನು ಕೆಣಕುವ ಜಾಗತಿಕ ಪಿತೂರಿಯ ಭಾಗವಾಗಿದೆ ಎಂದು ಪೊಲೀಸರು ಹೇಳಿದ ಟೂಲ್ಕಿಟ್ ಬಗ್ಗೆ ಮಾತನಾಡಿದ ನ್ಯಾಯಾಧೀಶರು, ಗೂಗಲ್ ಡಾಕ್‌ನಲ್ಲಿ  ಎರಡು ಹೈಪರ್‌ ಲಿಂಕ್‌ಗಳನ್ನು ತೋರಿಸಿದ್ದಾರೆ, ಅದು ಎರಡು ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಹೊಂದಿದೆ, ಅಲ್ಲಿ  ಆಕ್ಷೇಪಾರ್ಹವಾದದ್ದು ಏನೂ ಕಾಣಲಿಲ್ಲ ಎಂದು ಹೇಳಿದ್ದಾರೆ.

ಎರಡನೇ ವೆಬ್‌ಸೈಟ್‌ನಲ್ಲಿರುವುದರಲ್ಲಿ “ದೇಶದ್ರೋಹ” ಎಂಬ ರೀತಿಯ ಅಂಶಗಳಿವೆ ಎಂಬ ಸಾರ್ವಜನಿಕ ಅಭಿಯೋಜಕರ ವಾದವನ್ನೂ ಅವರು ನಿರಾಕರಿಸಿದರು. “ಪ್ರಚೋದನೆಗಳು ಸುಳ್ಳು, ಉತ್ಪ್ರೇಕ್ಷೆ ಅಥವಾ ಚೇಷ್ಟೆಯ ಉದ್ದೇಶದಿಂದ ಇರಬಹುದು, ಆದರೆ ಹಿಂಸಾಚಾರವನ್ನು ಪ್ರಚೋದಿಸುವ ಪ್ರವೃತ್ತಿಯನ್ನು ಹೊಂದಿರದ ಹೊರತು ಅದನ್ನು ದೇಶದ್ರೋಹ ಎಂದು ಹೇಳಲಾಗುವುದಿಲ್ಲ ಎಂದು  ನ್ಯಾಯಾಧೀಶರಾದ ರಾಣಾ ಹೇಳಿದರು.

ಪ್ರಮುಖ ಸುದ್ದಿ :-   ಪವಿತ್ರಗೌಡ ನಟ ದರ್ಶನ್ ಪತ್ನಿ ಅಲ್ಲ ; ವಕೀಲರ ಸ್ಪಷ್ಪನೆ

ಪೊಲೀಸರು ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ಆದ್ದರಿಂದ ಪ್ರಜಾಪ್ರಭುತ್ವದ ನಿರೀಕ್ಷೆಗಳ ಆಧಾರದ ಮೇಲೆ ನಾಗರಿಕರ ಸ್ವಾತಂತ್ರ್ಯವನ್ನು ಮತ್ತಷ್ಟು ನಿರ್ಬಂಧಿಸಲು ಅವರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದ ಅವರು, .ಜಾಮೀನು ಅರ್ಜಿಗೆ ಪ್ರತಿರೋಧವು ಹೆಚ್ಚು ಆಲಂಕಾರಿಕವಾಗಿದ್ದಂತೆ ತೋರುತ್ತದೆ” ಎಂದು ಹೇಳಿದರು.

ದಿಶಾ ರವಿ ಅವರನ್ನು ಫೆಬ್ರವರಿ 13ರಂದು ಬೆಂಗಳೂರಿನಿಂದ ಬಂಧಿಸಲಾಗಿದ್ದು, ಅವರು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಮತ್ತು ಮೂರು ದಿನಗಳ ಕಾಲ ನ್ಯಾಯಾಂಗಕಸ್ಟಡಿಯಲ್ಲಿ ಕಳೆದಿದ್ದಾರೆ. ಇವರು ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಅವರ ಚಳವಳಿಯ ಸ್ಥಳೀಯ ಚಾಪ್ಟರಿನ ಸ್ಥಾಪಕಳಾಗಿದ್ದಾಳೆ.

ಆಕೆಯ ಬಂಧನದ ನಂತರ, ದೆಹಲಿಯಲ್ಲಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಕಾರಣವಾದ ಕ್ರಿಯಾ ಯೋಜನೆಯನ್ನು ತಯಾರಿಸಲು ಮತ್ತು ಪ್ರಸಾರ ಮಾಡಲು ದಿಶಾ ರವಿ ತೊಡಗಿಸಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದರು.  ಆದರೆ ಬಂಧನ ಕಾನೂನುಬಾಹಿರ ಮತ್ತು ಟೂಲ್ಕಿಟ್‌ನಲ್ಲಿ  ದೇಶದ್ರೋಹದ ಯಾವುದೇ ಅಂಶಗಳಿಲ್ಲ ಎಂದು ಅವರ ದಿಶಾ ರವಿ ವಕೀಲರು ವಾದಿಸಿದ್ದರು.

ಮಂಗಳವಾರ  1 ಲಕ್ಷ ರೂ.ಗಳ ಎರಡು ಶ್ಯುರಿಟಿಗಳ ಮೇಲೆ ದಿಶಾ ರವಿ ಅವರಿಗೆ ಜಾಮೀನು ನೀಡಲಾಯಿತು.

ಪ್ರಮುಖ ಸುದ್ದಿ :-   ಶಾಲೆಯಲ್ಲಿ ದ್ವೇಷ, ಹಿಂಸಾಚಾರದ ಬಗ್ಗೆ ಕಲಿಸಬಾರದು: ಪಠ್ಯಪುಸ್ತಕಗಳಲ್ಲಿ ಬಾಬ್ರಿ ಕೈಬಿಟ್ಟಿದಕ್ಕೆ ಎನ್‌ಸಿಇಆರ್‌ಟಿ ಮುಖ್ಯಸ್ಥ

 

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement