ನೇಪಾಳ: ಸಂಸತ್ತು ವಿಸರ್ಜನೆ ರದ್ದುಗೊಳಿಸಿದ ಸುಪ್ರೀಂಕೋರ್ಟ್‌:ಓಲಿಗೆ ಮುಖಭಂಗ

ನೇಪಾಳ ಸುಪ್ರೀಂ ಕೋರ್ಟ್  ವಿಸರ್ಜಿಸಿದ ಜನಪ್ರತಿನಿಧಿ ಸಭೆ ವಿಸರ್ಜಿಸಿದ್ದನ್ನು ಮಂಗಳವಾರ ರದ್ದುಗೊಳಿಸಿ ತೀರ್ಪು ನೀಡಿದೆ..
ನೇಪಾಳಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಆಡಳಿತಾರೂ ಕಮ್ಯುನಿಸ್ಟ್ ಪಕ್ಷದಲ್ಲಿ ತಮ್ಮ ಪ್ರತಿಸ್ಪರ್ಧಿಗಳೊಂದಿಗೆ ಅಧಿಕಾರಕ್ಕಾಗಿ ನಡೆದ ಜಗಳದ ನಡುವೆ ಕ್ಷಿಪ್ರ ಬೆಳವಣಿಗೆಯಲ್ಲಿ ನೇಪಾಳಿ ಸಂಸತ್ತನ್ನು ವಿಸರ್ಜಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಕೋಲೆಂದ್ರ ಶುಮ್ಶರ್ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠವು 275 ಸದಸ್ಯರ ಸಂಸತ್ತಿನ ಕೆಳಮನೆ ವಿಸರ್ಜಿಸುವ ಒಲಿ ಸರ್ಕಾರದ “ಅಸಂವಿಧಾನಿಕ” ನಿರ್ಧಾರವನ್ನು ರದ್ದುಗೊಳಿಸಿತು. ಅಲ್ಲದೆ,ಮುಂದಿನ 13 ದಿನಗಳಲ್ಲಿ ಸದನ ಅಧಿವೇಶನವನ್ನು ಕರೆಯುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದಲ್ಲಿ (ಎನ್‌ಸಿಪಿ) ಅಧಿಕಾರಕ್ಕಾಗಿ ನಡೆದ ತಿಕ್ಕಾಟದ ಮಧ್ಯೆ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಶಿಫಾರಸ್ಸಿನ ಮೇಲೆ ಅಧ್ಯಕ್ಷ ಬಿದ್ಯಾ ದೇವ್ ಭಂಡಾರಿ ಅವರು ಸದನವನ್ನು ವಿಸರ್ಜಿಸಿ ಏಪ್ರಿಲ್ 30 ಮತ್ತು ಮೇ 10 ರಂದು ಹೊಸ ಚುನಾವಣೆಗಳನ್ನು ಘೋಷಿಸಿದ ನಂತರ ನೇಪಾಳ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿತ್ತು. ಸದನವನ್ನು ವಿಸರ್ಜಿಸಲು ಒಲಿಯವರ ಕ್ರಮಕ್ಕೆ ನೇಪಾಳಿ ಕಮ್ಯುನಿಸ್ಟ್‌ ಪಕ್ಷದವರೇ ಆದ ಪುಷ್ಪಾ ಕಮಲ್ ದಹಲ್, ಅಲಿಯಾಸ್ ಪ್ರಚಂಡ ನೇತೃತ್ವದಲ್ಲಿ ಪ್ರತಿಭಟನೆಗೆ ಕಾರಣವಾಗಿತ್ತು. ಅವರು ಆಡಳಿತ ಪಕ್ಷದ ಸಹ-ಅಧ್ಯಕ್ಷರಾಗಿದ್ದಾರೆ.
ಸಂಸತ್ತಿನ ಕೆಳಮನೆ ಪುನಃಸ್ಥಾಪಿಸುವಂತೆ ಕೋರಿ ಆಡಳಿತ ಪಕ್ಷದ ಮುಖ್ಯ ವಿಪ್ ದೇವ್ ಪ್ರಸಾದ್ ಗುರುಂಗ್ ಅವರನ್ನೂ ಒಳಗೊಂಡಂತೆ 13 ರಿಟ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು.
ಜನವರಿ 17 ರಿಂದ ಫೆಬ್ರವರಿ 19 ರವರೆಗೆ ಈ ಪ್ರಕರಣದ ಬಗ್ಗೆ ಬಿಶ್ವೋಂಭರ್ ಪ್ರಸಾದ್ ಶ್ರೇಷ್ಠಾ, ಅನಿಲ್ ಕುಮಾರ್ ಸಿನ್ಹಾ, ಸಪನಾ ಮಲ್ಲಾ ಮತ್ತು ತೇಜ್ ಬಹದ್ದೂರ್ ಕೆಸಿ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿತು.
69 ರ ಹರೆಯದ ಓಲಿ ಅವರು ಸದನವನ್ನು ವಿಸರ್ಜಿಸುವ ತನ್ನ ಕ್ರಮವನ್ನು ಪದೇ ಪದೇ ಸಮರ್ಥಿಸಿಕೊಂಡಿದ್ದರು, ತಮ್ಮ ಪಕ್ಷದ ಕೆಲವು ನಾಯಕರು “ಸಮಾನಾಂತರ ಸರ್ಕಾರ” ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಕಳೆದ ತಿಂಗಳು, ಎನ್‌ಸಿಪಿಯ ಪ್ರಚಂಡ ನೇತೃತ್ವದ ಬಣವು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಓಲಿಯನ್ನು ನೇಪಾಳ ಕಮ್ಯುನಿಸ್ಟ್ ಪಕ್ಷದ ಸಾಮಾನ್ಯ ಸದಸ್ಯತ್ವದಿಂದ ಹೊರಹಾಕಿತ್ತು.ಮಾಜಿ ಪ್ರಧಾನಿ ಮಾಧವ್ ಕುಮಾರ್ ನೇಪಾಳವನ್ನು ಪಕ್ಷದ ಎರಡನೇ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಪ್ರಚಂಡ ಅವರು ಪಕ್ಷದ ಮೊದಲ ಅಧ್ಯಕ್ಷರು.
ಪ್ರಚಂಡ ನೇತೃತ್ವದ ಎನ್‌ಸಿಪಿ ಮತ್ತು ಮುಖ್ಯ ಪ್ರತಿಪಕ್ಷವಾದ ನೇಪಾಳಿ ಕಾಂಗ್ರೆಸ್ ಸದನವನ್ನು ವಿಸರ್ಜಿಸುವುದನ್ನು ವಿರೋಧಿಸಿತ್ತು., ಇದು ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿತ್ತು. ಪ್ರಚಂಡ ನೇತೃತ್ವದ ಬಣವು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನಾ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುತ್ತಿತ್ತು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ವೀಡಿಯೊ...: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಉಕ್ರೇನ್ ಅಣೆಕಟ್ಟು ಸ್ಫೋಟ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement