ಸೌದಿ ಅರೇಬಿಯಾ ಪೆಟ್ರೋಲ್‌ ಕಿಂಗ್‌ ಮಾಡಿದ್ದ ‌ ಅಹ್ಮದ್‌ ಝಾಕಿ ಯಮಾನಿ ನಿಧನ

ಸೌದಿ ಅರೇಬಿಯಾವನ್ನು ಪೆಟ್ರೋಲ್‌ ಮಾರುಕಟ್ಟೆಯಲ್ಲಿ ಸೂಪರ್‌ ಪವರ್‌ ಮಾಡಿದ್ದ ಮಾಜಿ ಪೆಟ್ರೋಲಿಯಂ ಸಚಿವ ಶೇಖ್‌ ಅಹ್ಮದ್‌ ಝಾಕಿ ಯಮಾನಿ (೯೧) ನಿಧರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಲಂಡನ್‌ನಲ್ಲಿ ನಿಧನರಾಗಿದ್ದಾರೆ. 1962ರಲ್ಲಿ ಸೌದಿಯ ಇಂಧನ ಸಚಿವಾಗಿದ್ದ ಅವರು, ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ಸೌದಿಯನ್ನು ಸೂಪರ್‌ ಪವರ್‌ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಗಲ್ಫ್‌ನ ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ, ಮಾರಾಟದಲ್ಲಿ ಸೌದಿ ಅರೇಬಿಯಾ ಭಾರೀ ಹಿಂದೆ ಬಿದ್ದಿತ್ತು. ಆದರೆ ಪೆಟ್ರೋಲಿಯಂ ಸಚಿವನಾಗಿ ಅಧಿಕಾರ ಸ್ವೀಕರಿಸ ಬಳಿಕ ಅವರು ಸುಧಾರಣಾ ಕ್ರಮಗಳನ್ನು ತಂದರು. ತೈಲ ಉತ್ಪಾದಿಸಿ ರಫ್ತು ಮಾಡುವ ರಾಷ್ಟ್ರಗಳ ಒಕ್ಕೂಟವಾದ ಒಪೆಕ್‌ನಲ್ಲಿ ಸೌದಿ ಅರೇಬಿಯಾದ ಮೊದಲ ಪ್ರತಿನಿಧಿಯಾಗಿ ಆಯ್ಕೆಯಾದ ಹೆಗ್ಗಳಿಕೆ ಶೇಖ್‌ ಯಮಾನಿಯವರದ್ದು.
ಇಸ್ರೇಲ್‌ ಜತೆಗಿನ ಯುದ್ಧದ ವೇಳೆ ಪೆಟ್ರೋಲ್‌ ಮಾರುಕಟ್ಟೆಯನ್ನು ನಿಯಂತ್ರಿಸಿದ್ದ ಇವರ ಚಾಕಚಕ್ಯತೆ ಮೆಚ್ಚುಗೆ ಗಳಿಸಿತ್ತು. ಅಲ್ಲದೇ ಆದಾಯದಲ್ಲಿ ವಿಶ್ವದ ಅತೀ ದೊಡ್ಡ ತೈಲ ಬಾವಿ ಅರಾಮ್ಕೋವನ್ನು ರಾಷ್ಟ್ರೀಕರಣಗೊಳಿಸುವಲ್ಲಿಯೂ ಇವರ ಪಾತ್ರವಿತ್ತು. 1930ರಲ್ಲಿ ಮೆಕ್ಕಾದಲ್ಲಿ ಜನಿಸಿದ ಯಮಾನಿ ಈಜಿಪ್ಟ್‌ನ ಕೈರೋದಲ್ಲಿ ಕಾನೂನು ಪದವಿ ಮುಗಿಸಿ, ನ್ಯೂಯಾರ್ಕ್‌ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಪಡೆದುಕೊಂಡಿದ್ದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಟರ್ಕಿ-ಸಿರಿಯಾ ಭೂಕಂಪ: 8,000ಕ್ಕೆ ಸಮೀಪಿಸಿದ ಸಾವಿನ ಸಂಖ್ಯೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement