ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಚಾರ:ಬಿಕೆಯು ಮುಖಂಡ ನರೇಶ ಟಿಕಾಯಿತ್‌ ಘೋಷಣೆ

ಲಕ್ನೋ: ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಮೋದಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖ್ಯಸ್ಥ ನರೇಶ್ ಟಿಕಾಯಿತ್‌ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಚಾರ ನಡೆಸುವುದಾಗಿ ಗುರುವಾರ ಪ್ರಕಟಿಸಿದರು.
ಕಿಸಾನ್ ಮಹಾಪಂಚಾಯತ ಸಮಾವೇಶಕ್ಕೆ ಬಸಿತ್‌ಗೆ ಹೋಗುವ ದಾರಿಯಲ್ಲಿ, ಭಗವಾನ್ ರಾಮ್ ಲಲ್ಲಾ ಮತ್ತು ಹನುಮಂತನಿಗೆ ಪ್ರಾರ್ಥನೆ ಸಲ್ಲಿಸಲು ಅಯೋಧ್ಯಾಕ್ಕೆ ಅವರು ಬಂದಿದ್ದರು.
ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಲು ಪಶ್ಚಿಮ ಬಂಗಾಳಕ್ಕೆ ಹೋಗುವುದಾಗಿ ಪ್ರಕಟಿಸಿದ ಅವರು, ಸುಳ್ಳು ಭರವಸೆಗಳ ಮೇಲೆ ಚುನಾವಣೆಯಲ್ಲಿ ಗೆಲ್ಲುವ ಬಿಜೆಪಿ ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಕ್ಕೆ ಮತ ಚಲಾಯಿಸುವಂತೆ ಪಶ್ಚಿಮ ಬಂಗಾಳದ ಜನರನ್ನು ಕೋರಿ ನಾವು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡುತ್ತೇವೆ” ಎಂದು ಹೇಳಿದರು.
ತನ್ನನ್ನು ‘ರಘುವಂಶಿ’ ಎಂದು ಹೇಳಿಕೊಂಡ ಬಿಕೆಯು ನಾಯಕ, ಹೊಸ ಮಾತುಕತೆ ನಡೆಸುವ ಮೂಲಕ ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ರಾಮ ಲಲ್ಲಾ ಬಳಿ ಪ್ರಧಾನಮಂತ್ರಿಗಾಗಿ ಪ್ರಾರ್ಥಿಸಿದ್ದೇನೆ. ರಾಮ್ ದೇವಾಲಯ ನಿರ್ಮಾಣಕ್ಕೆ ರೈತರು ದೇಣಿಗೆ ನೀಡಲಿದ್ದಾರೆ ಎಂದರು.
ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ನಾಯಕರೊಂದಿಗೆ ಅರ್ಥಪೂರ್ಣ ಸಂವಾದವನ್ನು ನಾವು ಬಯಸುತ್ತೇವೆ. ಆದರೆ ಅದಕ್ಕೂ ಮೊದಲು ಸರ್ಕಾರ ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ರೈತರ ಹಿತಾಸಕ್ತಿಗೆ ಒಳಪಡದ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಹಾಗೂ ರೈತರ ಮೇಲಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಮೋದಿ ಸರ್ಕಾರ ಸಿದ್ಧವಾಗಿದ್ದರೆ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ತಾವು ಒತ್ತಾಯಿಸುವುದಲ್ಲವೆಂದು ಹೇಳಿದ ಅವರು, ಅಗತ್ಯವಿದ್ದರೆ, ಸರ್ಕಾರವು ಹೊಸ ಕಾನೂನುಗಳನ್ನು ರೈತ ಪರವಾಗಿಸಲು ತಿದ್ದುಪಡಿ ಮಾಡಬಹುದು. ಆದರೆ ಸಂಪೂರ್ಣ ಪಾರದರ್ಶಕತೆ ಇರಬೇಕು, ”ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement