ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವ “ಮೋದಿ ಉದ್ಯೋಗ ಕೊಡಿ” ಅಭಿಯಾನವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಟ್ವಿಟರ್ ಬಳಕೆದಾರರು “ಮೋದಿ ಜಾಬ್ ದೊʼ, “ಮೋದಿ ರೋಜಗಾರ್ ದೊʼ ಎಂಬ ಹಾಷ್‌ಟ್ಯಾಗ್ ಬಳಕೆ ಮಾಡಿಕೊಂಡು ಉದ್ಯೋಗ ಕೇಳುವ ಅಭಿಯಾನ ನಡೆಸುತ್ತಿದ್ದಾರೆ.
ಪ್ರತಿಭಟನಾ ನಿರತ ಯುವಕರೊಂದಿಗೆ ಸೇರಿಕೊಂಡ ರಾಹುಲ್ ಗುರುವಾರ ಹಿಂದಿಯಲ್ಲಿ ಟ್ವೀಟ್ ಮಾಡಿ, ವಿಫಲ ಸರ್ಕಾರ, ಬೆಲೆ ಏರಿಕೆಯ ಹೊಡೆತದಿಂದ ಜನರು ತತ್ತರಿಸಿದ್ದಾರೆ. ಉದ್ಯೋಗಗಳು ಸಿಗುತ್ತಿಲ್ಲ ಮೋದಿ ಉದ್ಯೋಗ ಕೊಡಿʼ ಎಂದು ತಿಳಿಸಿದ್ದಾರೆ.
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ