ಸಮಾವೇಶಕ್ಕೆ ಅನುಮತಿ ನಿರಾಕರಣೆ ಅಧಿಕಾರದ ದುರುಪಯೋಗ

ಕೊಲ್ಕತ್ತಾ:ಚುನಾವಣೆ ಸಮೀಪಿಸುತರುವ ಪಶ್ಚಿಮ ಬಗಾಳದಲ್ಲಿ ಅಸದುದ್ದೀನ್ ಒವೈಸಿ ಅವರ ಮೊದಲ ಸಮಾವೇಶಕ್ಕೆ ಅನುಮತಿ ನಿರಾಕರಿಸಿದ್ದಕ್ಕಾಗಿ ಕೋಲ್ಕತಾ ಆಡಳಿತವು “ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ” ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ (ಎಐಐಎಂ) ಕೋಲ್ಕತಾ ವಿಭಾಗ ಗುರುವಾರ ಆರೋಪಿಸಿದೆ.
ಎಐಎಂಐಎಂ ನಾಯಕ ಜಮೀರುಲ್ ಹಸನ್ ಆಡಳಿತವು ನಮಗೆ ಅಗತ್ಯವಾದ ಅನುಮತಿ ನೀಡದ ಕಾರಣ ನಾವು ಸಮಾವೇಶ ರದ್ದುಗೊಳಿಸಬೇಕಾಯಿತು. ಹತ್ತು ದಿನಗಳ ಹಿಂದೆ ನಾವು ಅನುಮತಿ ಕೋರಿದ್ದರೂ ಇನ್ನೂ ಅನುಮತಿ ನಿರಾಕರಿಸಲಾಗಿದೆ ಎಂದರು.
ಮುಖ್ಯಮಂತ್ರಿ ಮಮತಾ ಬಾನರ್ಜಿಯವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸರಿಯಾದ ಕ್ರಮ ಅನುಸರಿಸುವ ಮೂಲಕ ಸಮಾವೇಶಕ್ಕೆ ಅನುಮತಿ ಪಡೆಯುವುದು ಪ್ರಜಾಪ್ರಭುತ್ವದ ಹಕ್ಕು ಎಂದರು.
ಸಮಾವೇಶ ಕೊಲ್ಕತ್ತಾದ ಅಲ್ಪಸಂಖ್ಯಾತ ಪ್ರಾಬಲ್ಯದ ಮೆಟಿಯಾಬ್ರೂಜ್ ಪ್ರದೇಶದಲ್ಲಿ ನಡೆಯಬೇಕಿತ್ತು. ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಸಂಸದೀಯ ಕ್ಷೇತ್ರದಲ್ಲಿ ಬರುತ್ತದೆ. ಕ್ಷವು ಫರ್ಫುರಾ ಷರೀಫ್ ಧರ್ಮಗುರು ಅಬ್ಬಾಸ್ ಸಿದ್ದಿಕಿ ಅವರ ಭಾರತೀಯ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಜೊತೆಗೆ ಮಾರ್ಚ್ ಎರಡನೇ ವಾರದಲ್ಲಿ ಸಾರ್ವಜನಿಕ ಸಭೆ ನಡೆಸಲು ಯೋಜಿಸುತ್ತಿದೆ ಎಂದರು.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement