ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ  ಸಿಎಎ ಪ್ರಮುಖ ವಿಷಯ

ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರ ಮೂರು ಹಂತಗಳಲ್ಲಿ ಅಸ್ಸಾಂ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇ ೨ರಂದು  ಫಲಿತಾಂಶಗಳನ್ನು ಮೇ 2 ರಂದು ಪ್ರಕಟಿಸಲಾಗುತ್ತದೆ.

ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್‌ ಹಾಗೂ ಅದರ ಹೊಸ ಮೈತ್ರಿಕೂಟದ ನಡುವೆ ನೇರಸ್ಪರ್ಧೆ ನಡೆಯಲಿದೆ. ಪ್ರಾದೇಶಿಕ ಪಕ್ಷಗಳು ಕೆಲವು ಕಡೆಗಳಲ್ಲಿ ಪ್ರಬಲವಾಗಿದ್ದು ಅಲ್ಲಿ ತ್ರಿಕೋನ ಸ್ಪರ್ಧೆಗಳು ಏರ್ಪಡಲಿದೆ.  ದಿನಾಂಕಗಳನ್ನು ಅಸಸಾಂಗೆ ಚುನಾವಣೆ  ಪ್ರಕಟವಾದ ಬೆನ್ನಲ್ಲೇ ಅಸ್ಸಾಂನ ಹಿರಿಯ ಮಂತ್ರಿ ಮತ್ತು ಈಶಾನ್ಯದ ಬಿಜೆಪಿಯ ಪ್ರಮುಖ ಮುಖಂಡ ಹಿಮಂತ ಬಿಸ್ವಾ ಶರ್ಮಾ    “ಅಸ್ಸಾಂ ವಿಧಾನಸಭಾ ಚುನಾವಣೆಗಳನ್ನು ಘೋಷಿಸಲಾಗಿದೆ ಮತ್ತು ಮತ್ತೊಮ್ಮೆ ಸರ್ಕಾರ ರಚಿಸಲು ನಿಮ್ಮ ಆಶೀರ್ವಾದವನ್ನು ನಾವು ಬಯಸುತ್ತೇವೆ. ಕಳೆದ 5 ವರ್ಷಗಳಲ್ಲಿ ಅಸ್ಸಾಂ ಅದ್ಭುತ ಬೆಳವಣಿಗೆಗೆ ಸಾಕ್ಷಿಯಾದ ನಿಮ್ಮ ನಂಬಿಕೆ ಮತ್ತು ಸಹಕಾರಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ.  ಪ್ರಧಾನಿ  ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇದನ್ನು ಮುಂದುವರಿಸುವುದಾಗಿ ನಾವು ಭರವಸೆ ನೀಡುತ್ತೇವೆ ಎಂದು ಟ್ವೀಟ್‌ ಮಾಡಿದ್ದಾರೆ.

ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ( ಸಿಎಎ)  ಅಲ್ಲಿಯ ಚುನಾವಣೆಯ ಪ್ರಮುಖ ವಿಷಯಗಳಲ್ಲೊಂದು. ಇದನ್ನು ಮೊದಲು ಪ್ರಸ್ತಾಪಿಸಿದಾಗ, ರಾಜ್ಯಾದ್ಯಂತ ಪ್ರಭಾವಿ ಗುಂಪುಗಳು ಇದು ಅಸ್ಸಾಂನ ಸ್ಥಳೀಯ ಜನರ ಹಿತಾಸಕ್ತಿಗೆ ಹಾನಿಕಾರಕ ಎಂದು ವಾದಿಸಿದ್ದರು.

ಪ್ರಮುಖ ಸುದ್ದಿ :-   ರಾಜಸ್ಥಾನದ ಸಿಎಂ ಹುದ್ದೆಗೆ ಮುಂಚೂಣಿಯಲ್ಲಿರುವ ಬಿಜೆಪಿ ನಾಯಕರು ಇವರು

ಎರಡು ಹೊಸ ಪ್ರಾದೇಶಿಕ ಪಕ್ಷಗಳಾದ ಅಸ್ಸಾಂ ಜತಿಯ ಪರಿಷತ್ (ಎಜೆಪಿ) ಮತ್ತು ರೈಜೋರ್ ದಳ – ಸಿಎಎ ವಿರೋಧಿ ಬೃಹತ್ ಪ್ರತಿಭಟನೆ ನಡೆಸಿದ್ದವು.   ಘರ್ಷಣೆಗಳಲ್ಲಿ ಕನಿಷ್ಠ ಐವರು  ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದರು. ಈಗ ಈ ಚುನಾವಣೆಯಲ್ಲಿ ಉಭಯ ಪಕ್ಷಗಳು ಒಟ್ಟಾಗಿ ಬಿಜೆಪಿ ವಿರುದ್ಧ ಸ್ಪರ್ಧಿಸಲಿವೆ.

126 ಸದಸ್ಯರ ವಿಧಾಸಭೆಯಲ್ಲಿ 2016 ರ ಚುನಾವಣೆಯಲ್ಲಿ, ವಿಜೇತ ಮೈತ್ರಿಯಲ್ಲಿ ಬಿಜೆಪಿ (61), ಬೊಡೊಲ್ಯಾಂಡ್ ಪೀಪಲ್ಸ್ ಫ್ರಂಟ್ (13 ಸ್ಥಾನಗಳು) ಮತ್ತು ಅಸೋಮ್ ಗಣ ಪರಿಷತ್ (14 ಸ್ಥಾನಗಳು) ಇದ್ದವು. ಈ ಬಾರಿ, ಬಿಜೆಪಿ  ಜೊತೆಗೆ ಎಜಿಪಿ  ಮೈತ್ರಿ ಮುಂದುವರಿಯಲಿದೆ. ಆದರೆ ಬೋಡೊ ಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ (ಬಿಪಿಎಫ್‌) ಒಂದಿಗೆ ಮೈತ್ರಿ ಮುರಿದಿದೆ.  ಬದಲಿಗೆ ಬೋಡೋಲ್ಯಾಂಡ್ ಪ್ರದೇಶದ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ನೊಂದಿಗೆ ಮೈತ್ರಿ ಏರ್ಪಟ್ಟಿದೆ.

ಏತನ್ಮಧ್ಯೆ, ಕಾಂಗ್ರೆಸ್ ಪಕ್ಷವು  ಎಐಯುಡಿಎಫ್, ಮೂರು ಎಡ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷದೊಂದಿಗೆ ಸೇರಿ ಬಿಜೆಪಿ ವಿರುದ್ಧ ಬಹುಪಕ್ಷೀಯ ಮೈತ್ರಿ ಘೋಷಿಸಿವೆ. ಎಐಯುಡಿಎಫ್ ನಾಯಕ ಬದ್ರುದ್ದೀನ್ ಅಜ್ಮಲ್ ಅವರು ರಾಜ್ಯದ ಬಂಗಾಳಿ ಮೂಲದ ಮುಸ್ಲಿಂ ಸಮುದಾಯದಲ್ಲಿ ದೊಡ್ಡ ಬೆಂಬಲ ಹೊಂದಿದ್ದಾರೆ.

ಪ್ರಮುಖ ಸುದ್ದಿ :-   ಮಿಜೋರಾಂ ವಿಧಾನಸಭಾ ಚುನಾವಣೆ ಮತ ಎಣಿಕೆ : ಆಡಳಿತಾರೂಢ ಎಂಎನ್‌ಎಫ್ ಪಕ್ಷಕ್ಕೆ ಭಾರೀ ಹಿನ್ನಡೆ

ಅಸ್ಸಾಂನಲ್ಲಿ, ಚುನಾವಣೆಗಳಿಗಾಗಿ ಬಿಜೆಪಿಯ ರಾಜಕೀಯವು ಅಭಿವೃದ್ಧಿ ಮತ್ತು ಅಸ್ಸಾಂ  ಸಂಸ್ಕೃತಿ ಮತ್ತು ಭಾಷೆ  “ಉಳಿವಿಕೆಯ ಮೇಲೆ ಕೇಂದ್ರೀಕರಿಸಿದೆ, ವಿಶೇಷವಾಗಿ ಬಂಗಾಳಿ ಮೂಲದ ಮುಸ್ಲಿಂ ಸಮುದಾಯದ ಬೆದರಿಕೆ  ಬಗ್ಗೆ ಗಮನ ನೀಡಲಾಗಿದೆ. ಕೇಸರಿ ಪಕ್ಷವು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗಲೂ ಅದು ಅಜ್ಮಲ್ ಮತ್ತು ಎಐಯುಡಿಎಫ್ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ.  ಕಾಂಗ್ರೆಸ್ ಎಐಯುಡಿಎಫ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಟೀಕಿಸಿದೆ.

ಹಿಮಾಂಶು ಶರ್ಮಾ   ಇತ್ತೀಚೆಗೆ ಅಜ್ಮಾಲ್ ಅವರನ್ನು ಅಸ್ಸಾಂನ “ಶತ್ರು” ಎಂದು ಕರೆದರು ಮತ್ತು ಅವರು “ಅಸ್ಸಾಮೀಸ್ ಸಂಸ್ಕೃತಿಗೆ ಭಿನ್ನವಾಗಿರುವ ಯಾವುದನ್ನಾದರೂ ಮಾಡುತ್ತಾರೆ ಎಂದು ಆರೋಪಿಸಿದ್ದರು.

ಹೊಸ ಪಕ್ಷಗಳು ಸಹ ಸಿಎಎ ವಿರುದ್ಧ ಮತ್ತು ಅಸ್ಸಾಮೀಸ್ ಗುರುತನ್ನು ರಕ್ಷಿಸುವ ಬಗ್ಗೆ ತೀವ್ರವಾಗಿ ಪ್ರಚಾರ ಮಾಡುತ್ತಿವೆ, ಆದರೆ ರಾಜ್ಯದ ಆರ್ಥಿಕತೆಯನ್ನು ಬಲಪಡಿಸುವ ಬಗ್ಗೆ ಕೇಂದ್ರೀಕರಿಸಿಲ್ಲ ಎಂಬ ದೂರುಗಳೂ ಇವೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement