ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅನುಮತಿ

ವಾಷಿಂಗ್ಟನ್: ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ.
ಅಮೆರಿಕದಲ್ಲಿ ಸೋಂಕು ತಡೆಯಲು ಈ ಲಸಿಕೆಗೆ ಜೋ ಬೈಡನ್ ಆಡಳಿತ ಅನುಮತಿ ಕೊಟ್ಟಿದೆ.
ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸಂಸ್ಥೆಯ ಕೋವಿಡ್‌ ಲಸಿಕೆಯ ಪ್ರಯೋಗಾತ್ಮಕ ವರದಿಯಲ್ಲಿ ಲಸಿಕೆ ಸೋಂಕಿತರ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.
ಅಮೆರಿಕ ಸರ್ಕಾರ ತನ್ನ ದೇಶದಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ. ಆ ಮೂಲಕ ಅಮೆರಿಕದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಅನುಮತಿ ದೊರೆತಿರುವ ಮೂರನೇ ಲಸಿಕೆಯಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಫೈಝರ್‌ ಮತ್ತು ಮಾಡರ್ನಾ ಲಸಿಕೆಗಳಿಗೆ ಅನುಮತಿ ನೀಡಿತ್ತು..ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಈ ಲಸಿಕೆಯ ಒಂದು ಡೋಸ್‌ ಹಾಕಿಸಿಕೊಂಡರೆ ಸಾಕಾಗುತ್ತದೆ. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆಯನ್ನು ಸಾಮಾನ್ಯ ಫ್ರಿಡ್ಜ್‌ ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಬಹುದಾಗಿದ್ದು ಸಾಗಣೆ ಮತ್ತು ಸಂಗ್ರಹ ಸರಳವಾಗಲಿದೆ. ಈವರೆಗೂ ಅಮೆರಿಕದಲ್ಲಿ 6.5 ಕೋಟಿ ಜನರು ಫೈಝರ್‌ ಮತ್ತು ಮಾಡರ್ನಾ ಲಸಿಕೆ ಡೋಸ್‌ ಹಾಕಿಸಿಕೊಂಡಿದ್ದಾರೆ. ಆ ಎರಡೂ ಲಸಿಕೆಗಳೂ ಸುಮಾರು ಶೇ 95ರಷ್ಟು ಪರಿಣಾಮಕಾರಿಯಾಗಿದೆ .

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement