ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ತನ್ವೀರ್‌ ಸೇಠ್‌ಗೆ ಜೆಡಿಎಸ್‌ಗೆ‌ ಆಹ್ವಾನ ನೀಡಿದ ಸಾ.ರಾ.ಮಹೇಶ

ಮೈಸೂರು: ಶಾಸಕ ತನ್ವೀರ್ ಸೇಠ್ ಅವರನ್ನು ಕಾಂಗ್ರೆಸ್ ವಜಾ ಮಾಡಿದರೆ ಅವರನ್ನು ಜೆಡಿಎಸ್‍ಗೆ ಸ್ವಾಗತಿಸುತ್ತೇವೆ ಎಂದು ಜೆಡಿಎಸ್‌ ಮುಖಂಡ ಹಾಗೂ ಶಾಸಕ ಸಾ.ರಾ. ಮಹೇಶ ಹೇಳಿದರು.
ತನ್ವೀರ್ ಸೇಠ್ ಒಬ್ಬ ಅಲ್ಪಸಂಖ್ಯಾತ ಮುಖಂಡ, ನಮಗೆ ಅವರ ಬಗ್ಗೆ ಗೌರವವಿದೆ. ನಾವು ಯಾರ ಪಕ್ಷದಲ್ಲೂ ಬೆಂಕಿ ಹಚ್ಚಿಲ್ಲ. ಎಲ್ಲವು ಆ ಕ್ಷಣದಲ್ಲಿ ಆದ ನಿರ್ಧಾರ. ಇದರಿಂದ ತನ್ವೀರ್ ಸೇಠಗೆ ಸಮಸ್ಯೆ ಆದರೆ, ಅವರು ಜೆಡಿಎಸ್‍ಗೆ ಬರಲಿ. ಹಿಂದಿನ ಚುನಾವಣೆಯಲ್ಲಿ ಅವರ ವಿರುದ್ದ ಸ್ಪರ್ಧಿಸಿದ್ದ ಅಬ್ದುಲ್ಲಾ ಅವರೇ ಅವರನ್ನು ಸ್ವಾಗತ ಮಾಡುತ್ತಾರೆ ಎಂದರು.
ಮೊದಲು ಅವರು ಪಕ್ಷಕ್ಕೆ ಬರಲಿ ಆಮೇಲೆ ಅವರಿಗೆ ಟಿಕೇಟ್‌ ನೀಡುವ ಬಗ್ಗೆ ನಿರ್ಧರಿಸಲಾಗುವುದು. ಮೈಸೂರು ಪಾಲಿಕೆಯ ಚುನಾವಣೆ ಗೊಂದಲಕ್ಕೆ ಮಾಜಿ ಸಿ.ಎಂ ಸಿದ್ದರಾಮಯ್ಯ ಪ್ರಮುಖ ಕಾರಣ, ಅವರ ತವರು ಜಿಲ್ಲೆ ಮೈಸೂರಿನಲ್ಲಿಯೇ ಅವರಿಗೆ ಜೆಡಿಎಸ್‌ ಶಕ್ತಿ ತೋರಿಸಿದ್ದೇವೆ ಎಂದು ನೀಡಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement