ಬಿಪಿಎಫ್‌ ಕಾಂಗ್ರೆಸ್‌ ತೆಕ್ಕೆಗೆ: ತಮಗೆ ಲಾಭ ಎಂದ ಕಾಂಗ್ರೆಸ್‌, ತಲೆಕೆಡಿಸಿಕೊಳ್ಳದ ಬಿಜೆಪಿ

ಪ್ರಾದೇಶಿಕ ಪಕ್ಷವಾದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಬಿಜೆಪಿಯಿಂದ ಬಿಟ್ಟು ಮತ್ತೆ ಕಾಂಗ್ರೆಸ್‌ ಜೊತೆ ಕೈಜೋಡಿಸುವ ನಿರ್ಧಾರವನ್ನು ಶನಿವಾರ ಪ್ರಕಟಿಸಿದೆ. ಇದು ಅಸ್ಸಾಂ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಮೊದಲ ಮಹತ್ವ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವು ಚುನಾವಣಾ ವಿಶ್ಲೇಷಕರು ಮಾತ್ರ ಇದಕ್ಕೆ ಅಷ್ಟೊಂದು ಮಹತ್ವವನ್ನು ಕೊಡುತ್ತಿಲ್ಲ ಹಾಗೂ ಬಿಜೆಪಿಯು ಈ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಅಸ್ಸಾಂನ ಇತಿಹಾಸದಲ್ಲಿ ಅದರಲ್ಲಿಯೂ ರಾಷ್ಟ್ರದ ಬಿಜೆಪಿ ಇತಿಹಾಸದಲ್ಲಿ ಅಸ್ಸಾಂನಲ್ಲಿ ಅಷ್ಟೇ ಅಲ್ಲ, ಸಂಪೂರ್ಣ ಪೂರ್ವಾಂಚಲ ರಾಜ್ಯದಲ್ಲಿ ೨೦೧೬ರಲ್ಲಿ ಬಿಜೆಪಿ ಅಸ್ಸಾಂನಲ್ಲಿ ಅಧಿಕಾರಕ್ಕೆ ಬರುವ ಮೂಲಕ ಮಹತ್ವದ ಮೈಲುಗಲ್ಲು ಸ್ಥಾಪಿಸಿತ್ತು. ಹಲವರಿಗೆ ಕೇಂದ್ರದಲ್ಲಿ ಬಿಜೆಪಿ ೨೦೧೪ರಲ್ಲಿ ಅಧಿಕಾರಕ್ಕೆ ಬಂದಾಗಲೂ ಈ ರೀತಿ ಅಚ್ಚರಿಯಾಗಿರಲಿಲ್ಲವೇನೋ  ? ಹೀಗಾಗಿ ಈ ಚುನಾವಣಾ ಫಲಿತಾಂಶ ಅನೇಕ ರಾಜಕೀಯ ಬೆಳವಣಿಗೆಗೆ ಕಾರಣವಾಯಿತು.
ಈಗ ಅಸ್ಸಾಂ ಚುನಾವಣೆ ಘೋಷಣೆಯಾಗಿದ್ದು, ಮಾರ್ಚ್ 27 ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ. ಬಿಜೆಪಿ ಮತ್ತು ಅಸ್ಸಾಂ ಪ್ರಾದೇಶಿಕ ಪಕ್ಷವಾದ ಬೊಡೊಲ್ಯಾಂಡ್‌ ಪೀಪಲ್ಸ್‌ ಘ್ರಂಟ್‌ (ಬಿಪಿಎಫ್‌) ನಡುವಿನ ಬಿರುಕು ಈಗ ಬಂದಿದ್ದಲ್ಲ. ಯಾಕೆಂದರೆ 2020 ರ ಜನವರಿಯಲ್ಲಿ ಬಿಪಿಎಫ್ ಮೂರನೇ ಬೋಡೋ ಒಪ್ಪಂದ ತಿರಸ್ಕರಿಸಿದಾಗಲೇ ಇದು ಬಂದಿತ್ತು.  ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ)  ಅವಧಿ ಕೊನೆಗೊಂಡಾಗ ಏಪ್ರಿಲ್ 2020 ರಲ್ಲಿ ವ್ಯತ್ಯಾಸಗಳು ತೀವ್ರಗೊಂಡವು. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಚುನಾವಣೆಗಳನ್ನು ನಿಗದಿತ ಸಮಯದಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ಬಿಪಿಎಫ್ ಆರು ತಿಂಗಳ ವಿಸ್ತರಣೆ ಕೋರಿತು. ಆದರೆ ಬುಡಕಟ್ಟು ಪರಿಷತ್ತಿನ ಮೇಲ್ವಿಚಾರಣೆಯ ಪ್ರದೇಶಗಳಲ್ಲಿ ಬಿಜೆಪಿ ರಾಜ್ಯಪಾಲರ ಆಡಳಿತ ವಿಧಿಸಿತು.
ಅಂತಿಮವಾಗಿ ಡಿಸೆಂಬರ್‌ನಲ್ಲಿ 40 ಸದಸ್ಯರ ಬುಡಕಟ್ಟು ಕೌನ್ಸಿಲ್‌ಗೆ ಚುನಾವಣೆ ನಡೆದಾಗ, ಬಿಪಿಎಫ್ ಅನ್ನು ಡಂಪ್ ಮಾಡಿದ ನಂತರ ಬಿಜೆಪಿ ಮತ್ತೊಂದು ಪ್ರಾದೇಶಿಕ ಪಕ್ಷವಾದ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಜೊತೆ ಸೇರಿ ಆಡಳಿತ ಮಾಡಿತು.  ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಕೌನ್ಸಿಲ್ ಅನ್ನು 2003 ರಲ್ಲಿ ಸ್ಥಾಪಿಸಿದಾಗಿನಿಂದ (ಹಿಂದಿನ ಬೋಡೋ ಒಪ್ಪಂದದ ನಂತರ) ನಡೆದ ಚುನಾಣೆಗಳಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಬಿಪಿಎಫ್ಚು ನಾವಣೆಯಲ್ಲಿ ಮೊದಲ ಬಾರಿಗೆ ಸೋಲೊಪ್ಪಿಕೊಳ್ಲಬೇಕಾಯಿತು.
2020ರ ಡಿಸೆಂಬರ್‌ನಲ್ಲಿ ಫಲಿತಾಂಶವು ಮಾಜಿ ಬಿಟಿಸಿ ಮುಖ್ಯಸ್ಥ ಮೊಹಿಲರಿ 17 ವರ್ಷಗಳ ಕಾಲ ಅಧಿಕಾರವನ್ನು ಅಂತ್ಯಗೊಳಿಸಿತು. ಅಲ್ಲಿ ಬಿಜೆಪಿ ಮತ್ಆತು ಯುಪಿಪಿಎಲ್ನ ಮೈತ್ರಿ ಆಡಳಿತ ಮೊದಲ ಬಾರಿಗೆ ಅಧಿಕಾರಕ್ಕೆ ಬಂತು.
2005 ರಲ್ಲಿ, ಮೊದಲ ಬಿಟಿಸಿ ಚುನಾವಣೆ ನಡೆದಾಗ, ಬಿಪಿಎಫ್ 35 ಸ್ಥಾನಗಳನ್ನು ಗೆದ್ದಿತ್ತು, 2010 ರಲ್ಲಿ 26, 2015 ರಲ್ಲಿ 20 ಮತ್ತು 2020 ರಲ್ಲಿ 17 ಸ್ಥಾನಗಳನ್ನು ಪಡೆಯಲಷ್ಟೇ ಶಕ್ತವಾಗಿ ಅಧಿಕಾರದಿಂದ ದೂರ ಇರಬೇಕಾಯಿತು.
ಏತನ್ಮಧ್ಯೆ, ೨೦೨೦ರಲ್ಲಿ ಬಿಜೆಪಿ ಉತ್ತಮ ಫಲಿತಾಂಶಗಳೊಂದಿಗೆ ಈ ಪ್ರದೇಶದಲ್ಲಿ ದೊಡ್ಡ ಪ್ರಗತಿ ಕಂಡಿತು. ಇದು ಒಂಭತ್ತು ಸ್ಥಾನಗಳನ್ನು ಗಳಿಸಿತು, ಮಿತ್ರ ಯುಪಿಪಿಎಲ್ 2015 ರಲ್ಲಿ 7 ಇದ್ದಿದ್ದು 12 ಕ್ಕೆ ಏರಿತು.
ಆದಾಗ್ಯೂ, ಬಿಪಿಎಫ್ ಮತ್ತೆ ತನ್ನ ಜೊತೆ ಮೈತ್ರಿಗೆ ಹಿಂದುರಿಗಿದ್ದಕ್ಕೆ ಪಕ್ಷವು ಅಸ್ಸಾಂ ಪುನರುತ್ಥಾನದ ಹಾದಿಯಲ್ಲಿದೆ ಎಂಬುದರ ಸಂಕೇತವಾಗಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಪಕ್ಷವು ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟಕ್ಕೆ ಸೇರುತ್ತಿದೆ ಎಂದು ಬಿಪಿಎಫ್ ಮುಖ್ಯಸ್ಥ ಹಗ್ರಾಮ ಮೊಹಿಲರಿ ಶನಿವಾರ ಟ್ವೀಟ್ ಮಾಡಿದ್ದನ್ನು ಕೆಲವು ರಾಜಕೀಯ ವಿಶ್ಲೇಷಕರು ಮಹಾಜತ್‌ಗೆ ಅನುಕೂಲವೆಂದು ನೋಡುತ್ತಾರೆ, ಆದರೆ ಅಸ್ಸಾಂನಲ್ಲಿ ಕಾಂಗ್ರೆಸ್‌ಗೆ ಮೊಹಿಲರಿ ಪಕ್ಷವನ್ನು ಸರಿಯಾಗಿ ಹೊಂದಿಸಲು ಕಡಿಮೆ ಅವಧಿ ಮತ್ತು ಅವಕಾಶ ಎರಡೂ ಇದೆ ಎಂದೂ ಮತ್ತೆ ಕೆಲವರು ಹೇಳುತ್ತಾರೆ.
ಮಹಾಜತ್ ಹಡಗಿನಲ್ಲಿರುವ ಹಗ್ರಾಮ ಅವರಿಗೆ ದೊಡ್ಡ ಪ್ಲಸ್ ಆಗಿದೆ ಏಕೆಂದರೆ ಹಗ್ರಾಮಾ ರಾಜ್ಯದಾದ್ಯಂತ ಬೋಡೋ ಮತದಾರರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಈ ಮಹಾ ಮೈತ್ರಿಕೂಟಕ್ಕೆ ಇದು ಸಕಾರಾತ್ಮಕ ಜಾರಿಯಾಗಿದೆ ”ಎಂದು ಮತ್ತೆ ಕೆಲವರು ಹೇಳುತ್ತಾರೆ.
“ಆದರೆ ಬಿಜೆಪಿ-ಎಜಿಪಿ (ಅಸೋಮ್ ಗಣ ಪರಿಷತ್) ಸರ್ಕಾರ ರಚಿಸುತ್ತದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ. ಯಾಕೆಂದರೆ ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ( ಯುಪಿಪಿಎಲ್)  ಆಡಳಿತವೇ ಮೊದಲ ಬಾರಿಗೆ ಬಿಟಿಸಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಬಿಜೆಪಿಗೆ ಅಲ್ಲಿ ಹೊಸ ಮಿತ್ರ ಪಕ್ಷ ದೊರೆತಿದೆ. ಹೀಗಾಗಿ ಒಂದು ಕಡೆಯಿಂದ ಕಳೆದುಕೊಂಡಂತೆ ಕಂಡರೂ ಮತ್ತೊಂದು ಕಡೆಯಿಂದ ಅವರು ಪಡೆದುಕೊಂಡಿದ್ದಾರೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.
ಬಿಪಿಎಫ್ ತನ್ನ ಮತ ಬ್ಯಾಂಕ್ ಹೊಂದಿರುವ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಲಾಭ ಪಡೆಯಲಿದೆ. ಇದು ಬಿಪಿಎಫ್ ಬೆಂಬಲದೊಂದಿಗೆ ಶೇ. ೧೫-೨೦ರಷ್ಟು ಹೆಚ್ಚು ಮತಗಳನ್ನು ಪಡೆಯಬಹುದಾಗಿದ್ದರೂ , ಇತರ ಬೊಡೋ ಪಕ್ಷಗಳ ಪಕ್ಷಗಳ ಸೇರ್ಪಡೆಗಳೊಂದಿಗೆ ಬಿಜೆಪಿ ಸ್ವತಂತ್ರವಾಗಿ ಸಾಕಷ್ಟು ಲಾಭ ಗಳಿಸುತ್ತದೆ ಎಂದೂ ಕೆಲವರು ಪ್ರತಿಪಾದಿಸುತ್ತಾರೆ. ಇದು ಬಿಪಿಎಫ್‌ನ ರಾಜಕೀಯ ಪ್ರತಿಸ್ಪರ್ಧಿಗಳ ಮೌಲ್ಯಮಾಪನವೂ ಹೌದು.
ಬಿಪಿಎಫ್ ತಂತ್ರಗಳು ಬಿಟಿಸಿ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಮೊಹಿಲರಿ ಈ ಹಿಂದೆ ಎರಡು ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.ಇದನ್ನು ನಾವು ನಿರೀಕ್ಷಿದ್ದೆವು ಎಂಬುದಾಗಿ ಅಲ್ಲಿನ ಬಿಜೆಪಿ ನಾಯಕರು ಹೇಳುತ್ತಾರೆ.
ಈಗ ಅವರು ಮತ್ತೆ ಕಾಂಗ್ರೆಸ್‌ ಜೊತೆ ಸೇರಿದ್ದಾರೆ. ಮೊಹಿಲರಿ ಅವರು ಮೊದಲು ಕಾಂಗ್ರೆಸ್ ಮೈತ್ರಿಕೂಟದ ಸದಸ್ಯರಾಗಿದ್ದರು ಎಂಬುದನ್ನು ಮರೆತಿದ್ದಾರೆ ”ಎಂದು ಅಸ್ಸಾಂ ಬಿಜೆಪಿ ಉಪಾಧ್ಯಕ್ಷ ಸ್ವಾಪ್ನಾನೀಲ್ ಬರುವಾ ಹೇಳಿದ್ದಾರೆ. “ಬಿಟಿಸಿಯಲ್ಲಿ ಅಲ್ಪಸಂಖ್ಯಾತರ ಬೆಂಬಲದೊಂದಿಗೆ 17 ಸ್ಥಾನಗಳನ್ನು ಗೆದ್ದರು. ಅಲ್ಪಸಂಖ್ಯಾತರು ಅವರಿಗೆ ಮತ ಚಲಾಯಿಸಿದರೆ ಅವರ ವ್ಯಾಪ್ತಿ ಕೊಕ್ರಜಾರ್ ಮೀರಿ ವಿಸ್ತರಿಸುವುದಿಲ್ಲ ಎನ್ನುತ್ತಾರೆ ಅವರು.
ಆದರೆ ಕಾಂಗ್ರೆಸ್ ಬಿಪಿಎಫ್ ಜೊತೆಗಿನ ಮೈತ್ರಿಯನ್ನು ತನ್ನ “ಗೆಲುವಿನ ಸಂಯೋಜನೆ” ಎಂದು ಬಣ್ಣಿಸಿದೆ.
ಬಿಟಿಆರ್‌ನ ನಾಲ್ಕು ಜಿಲ್ಲೆಗಳೊಳಗಿನ 12 ವಿಧಾನಸಭಾ ಸ್ಥಾನಗಳಲ್ಲಿ ಬಿಪಿಎಫ್ ಸ್ಪರ್ಧಿಸಲು ಮುಂದಾಗಿದೆ, ಆದರೆ ಬೋಡೋ ಮತದಾರರು ಗೌರಿಪುರ, ಪೂರ್ವ ಬಿಲಾಸಿಪರ, ಸೋರ್‌ಬಾಗ್, ಭವಾನಿಪುರ, ಗೋಹ್ಪುರ, ರಂಗಪರಾ, ಧೇಕಿಯಾಜುಲಿ, ಬಿಹಾಲಿ, ಧೆಮಾ ಸೇರಿದಂತೆ ಕನಿಷ್ಠ 28 ಸ್ಥಾನಗಳಲ್ಲಿ ಹರಡಿದ್ದಾರೆ. ಇದು ಬಹಳ ಮುಖ್ಯವಾಗುತ್ತದೆ. ಇಲ್ಲಿ ಅವರ ಪ್ರಬಲ್ಯ ಏನು ಎಂಬುದು ಚುನಾವಣೆಯಲ್ಲಿ ಗೊತ್ತಾಗಲಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement