ಮತ್ತೆ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿದ ಮುಕೇಶ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿಯಾಗಿದ್ದಾರೆ. ಅವರು ಚೀನಾದ ಜಾಂಗ್‌ ಶಾನ್‌ಶಾನ್‌ ಅವರನ್ನು ಹಿಂದಿಕ್ಕಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಚೀನಾದ ಉದ್ಯಮಿ ಆಸ್ತಿ 76.6 ಬಿಲಿಯನ್ ಡಾಲರ್‌ ಮೌಲ್ಯದ್ದಾಗಿದ್ದರೆ, ಅಂಬಾನಿಯ ಆಸ್ತಿ ಸುಮಾರು 80 ಬಿಲಿಯನ್ ಡಾಲರ್‌ ಆಗಿದೆ.
ಅಂಬಾನಿ ತನ್ನ ಸಾಮ್ರಾಜ್ಯವನ್ನು ಟೆಕ್ ಮತ್ತು ಇ-ಕಾಮರ್ಸ್‌ಗೆ ತಿರುಗಿಸುವತ್ತ ಗಮನಹರಿಸಿದ್ದಾರೆ, ಇಂಧನ ವ್ಯವಹಾರದಿಂದ ದೂರ ಸರಿಯುತ್ತಿದ್ದಾರೆ. ಕಳೆದ ವರ್ಷ, ಅವರು ರಿಲಯನ್ಸ್‌ನ ಡಿಜಿಟಲ್ ಮತ್ತು ರಿಟೇಲ್‌ ಕ್ಷೇತ್ರದಲ್ಲಿ 27 ಬಿಲಿಯನ್ ಡಾಲರ್‌ ಮೌಲ್ಯದ ಷೇರುಗಳನ್ನು ಗೂಗಲ್ ಮತ್ತು ಫೇಸ್‌ಬುಕ್ ಇಂಕ್ ಸೇರಿದಂತೆ ಹೂಡಿಕೆದಾರರಿಗೆ ಮಾರಾಟ ಮಾಡಿದರು ಮತ್ತು ಅವರ ಸಂಪತ್ತನ್ನು18 ಬಿಲಿಯನ್ ಡಾಲರ್‌ ಹೆಚ್ಚಿಸಿದರು.
ಕಳೆದ ಎರಡು ವರ್ಷಗಳಿಂದ ಮುಕೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದರೆ, ಅವರನ್ನು ಇತ್ತೀಚೆಗೆ ಜಾಂಗ್‌ ಶಾನ್‌ಶಾನ್‌ ಹಿಂದಿಕ್ಕಿದ್ದರು. ಚೀನಾದ ಬಾಟಲ್ ವಾಟರ್ ಕಿಂಗ್ ಎಂದೂ ಕರೆಯಲ್ಪಡುವ ಶನ್ಶಾನ್ 2021ರ ಆರಂಭದಲ್ಲಿ ಜಗತ್ತಿನ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದರು.

ಪ್ರಮುಖ ಸುದ್ದಿ :-   ಹಜ್ ಯಾತ್ರೆ ವೇಳೆ ಶಾಖದ ಅಲೆಯಿಂದಾಗಿ 68 ಭಾರತೀಯರು ಸೇರಿ 1000ಕ್ಕೂ ಹೆಚ್ಚು ಸಾವು ; ವರದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement