ನೈಜೀರಿಯಾ: ಅಪಹೃತ ೨೭೯ ಶಾಲಾ ಬಾಲಕಿಯರ ಬಿಡುಗಡೆ

ಗುಸೌ: ಕಳೆದ ವಾರ ಬಂದೂಕುಧಾರಿ ವ್ಯಕ್ತಿಗಳ ತಂಡ ನೈಜೀರಿಯಾದ ವಾಯುವ್ಯ ಜಾಮ್ಫಾರಾ ರಾಜ್ಯದ ಬೋರ್ಡಿಂಗ್ ಶಾಲೆಯಿಂದ ಅಪಹರಿಸಿದ್ದ ನೂರಾರು ಶಾಲಾ ಬಾಲಕಿಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ರಾಜ್ಯಪಾಲರು ಮಂಗಳವಾರ ತಿಳಿಸಿದ್ದಾರೆ.
ಜಂಗೆಬೆ ಪಟ್ಟಣದ ಸರ್ಕಾರಿ ಬಾಲಕಿಯ ಕಿರಿಯ ಮಾಧ್ಯಮಿಕ ಶಾಲೆಯಿಂದ ಬಂದೂಕುಧಾರಿಗಳು ಬಾಲಕಿಯರನ್ನು ಅಪಹರಿಸಿದ್ದರು.ಅದರಲ್ಲಿ 279 ಬಾಲಕಿಯರನ್ನು ಮಂಗಳವಾರ ಅಪಹರಣಕಾರರು ಬಿಡುಗಡೆ ಮಾಡಿದ್ದಾರೆ ಎಂದು ಜಾಮ್ಫಾರಾ ರಾಜ್ಯದ ರಾಜ್ಯಪಾಲ ಬೆಲ್ಲೊ ಮಟವಾಲ್ಲೆ ತಿಳಿಸಿದ್ದಾರೆ.
ಬಿಡುಗಡೆಯಾದ ಎಲ್ಲ 279 ಬಾಲಕಿಯರಲ್ಲಿ ನೂರಾರು ವಿದ್ಯಾರ್ಥಿನಿಯರು ಗುಸೌದಲ್ಲಿನ ರಾಜ್ಯ ಸರ್ಕಾರಿ ಗೃಹ ಕಚೇರಿಯಲ್ಲಿ ತಿಳಿನೀಲಿ ಹಿಜಬ್ ಧರಿಸಿರುವುದು ಅಸೋಸಿಯೇಟೆಡ್ ಪ್ರೆಸ್ ವರದಿಗಾರರೊಬ್ಬರು ನೋಡಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಅನ್ಯಗ್ರಹದ ಲೋಹಗಳಿಂದ ತಯಾರಿಸಲಾದ 3000 ವರ್ಷಗಳಷ್ಟು ಪುರಾತನ ಚಿನ್ನದ ಕಲಾಕೃತಿಗಳು ಪತ್ತೆ...!

ನಿಮ್ಮ ಕಾಮೆಂಟ್ ಬರೆಯಿರಿ

advertisement