ಕೋರ್ಟ್‌ ಮೊರೆ ಹೋದ ಆರು ಸಚಿವರ ನಿರ್ಧಾರಕ್ಕೆ ಸದಾನಂದ ಗೌಡ ಅತೃಪ್ತಿ

posted in: ರಾಜ್ಯ | 0

ಬೆಂಗಳೂರು: ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೊರೆ ಹೋಗಿರುವ ಕರ್ನಾಟಕದ ಸಚಿವರ ವಿರುದ್ಧ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಅತನಾಡಿರುವ ಡಿ.ವಿ.ಸದಾನಂದ ಗೌಡ ಅವರು, ಅನವಶ್ಯಕವಾಗಿ ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ರಮೇಶ್ ಜಾರಿಕಿಹೊಳಿ ಅವರ ಸಿಡಿ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಇನ್ನೂ 6 ಸಚಿವರು ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಯಾವುದೇ ಅವಹೇಳನಕಾರಿ ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರಿ ಕೋರ್ಟ್​ಗೆ ಅರ್ಜಿ ಹಾಕಿದ್ದಾರೆ. ಸಚಿವರ ಈ ನಡೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಕೇಂದ್ರ ಸಚಿವ ಸದಾನಂದ ಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
6 ಸಚಿವರು ಕೋರ್ಟ್​ಗೆ ಹೋಗಿರೋದು ಅವರ ವೈಯಕ್ತಿಕ ವಿಚಾರ. ಆದರೆ, ಅನವಶ್ಯಕವಾಗಿ ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡುವುದು ನನ್ನ ಪ್ರಕಾರ ಸರಿಯಲ್ಲ. ಮುಂದಿನ ಸಾಧಕ ಬಾಧಕಗಳನ್ನು ಅರಿತು ಕೋರ್ಟ್ ಮೊರೆ ಹೋಗಿರುವುದು ಅವರು ವೈಯಕ್ತಿವಾಗಿ ತೆಗೆದುಕೊಂಡು ನಿರ್ಧಾರ. ಆದರೆ ಕೋರ್ಟಿಗೆ ಹೋಗಿ ವಿಚಾರವನ್ನು ಇನ್ನಷ್ಟು ಗೊಂದಲ ಮಡಿಕೊಳ್ಳುವುದು ನನ್ನ ಪ್ರಕಾರ ಸರಿಯಲ್ಲ ಎಂದುಹೇಳಿದರು.
ರಾಜಕೀಯದಲ್ಲಿ ಈ ರೀತಿಯ ಸಿಡಿಗಳು ತನ್ನದೇ ಆದ ಪ್ರಭಾವ ಬೀರುತ್ತವೆ. ಟೆಕ್ನಾಲಜಿ ಬಹಳ ಮುಂದುವರೆದಿದ್ದು, ಯಾರು ಏನು ಬೇಕಾದರೂ ಮಾಡಬಹುದು ಇದು ಸತ್ಯವೋ ಸುಳ್ಳೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇಂತಹ ವಿಚಾರ ಬಂದಾಗ ಸೂಕ್ಷ್ಮವಾಗಿರಬೇಕು. ಆಡಳಿತಕ್ಕೂ ಇದರಿಂದ ತೊಂದರೆಯಾಗಲಿದೆ. ಕೇಂದ್ರದಿಂದ ಅದೇ ದಿನ ವರದಿ ಕೂಡ ಕೇಳಿದ್ದರು. ಬಹಳ ವಿಚಾರಗಳು ನಮಗೂ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಆರೋಪ ಎದುರಿಸುತ್ತಿರುವವರು ಅಧಿಕಾರದಿಂದ ದೂರ ಉಳಿದು ತನಿಖೆಗೆ ಸಹಕರಿಸಬೇಕು. ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿಗೆ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.
ಸಿಟಿ ಸಿವಿಲ್ ಕೋರ್ಟ್​ನಲ್ಲಿ 6 ಸಚಿವರು ಅರ್ಜಿ ಹಾಕಿದ್ದು, ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಹೋದ ಸಚಿವರಾದ ಶಿವರಾಮ್ ಹೆಬ್ಬಾರ್, ಎಸ್​.ಟಿ ಸೋಮಶೇಖರ್​, ನಾರಾಯಣ ಗೌಡ, ಭೈರತಿ ಬಸವರಾಜ್​, ಬಿ.ಸಿ ಪಾಟೀಲ್​, ಡಾ. ಕೆ. ಸುಧಾಕರ್​​ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​ ಮೊರೆ ಹೋಗಿದ್ದಾರೆ. 67 ಸುದ್ದಿ ಸಂಸ್ಥೆಗಳನ್ನು ಪ್ರತಿವಾದಿಯಾಗಿ ಮಾಡಲಾಗಿದೆ. ಇನ್ನೂ ಕೆಲವು ರಾಜಕಾರಣಿಗಳ ಸಿಡಿ ಬಿಡುಗಡೆಯ ಸಾಧ್ಯತೆ ಬಗ್ಗೆ ಹೇಳಿಕೆ ನೀಡಿದ್ದ ರಾಜಶೇಖರ್ ಮುಲಾಲಿ ಅವರನ್ನು ಕೂಡ 68ನೇ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಜೊತೆಗೆ, ಫೇಸ್ ಬುಕ್, ಟ್ವಿಟರ್, ವಾಟ್ಸಾಪ್, ಯೂಟ್ಯೂಬ್ ಅನ್ನು ಸಹ ಸಚಿವರ ಪರ ವಕೀಲರು ಪ್ರತಿವಾದಿಯನ್ನಾಗಿ ಮಾಡಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಜೆಡಿಎಸ್ ಶಾಸಕ ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಚ್ಚರಿಕೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement