ಗುರು-ಶಿಷ್ಯರ ಕದನ:ದೇಶದ ಕುತೂಹಲದ ಕೇಂದ್ರವಾದ ನಂದಿಗ್ರಾಮ

ಪಶ್ಚಿಮ ಬಂಗಾಳದ ನಂದಿಗ್ರಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ.
ಈ ಬಿಜೆಪಿ ಇದನ್ನು ಪ್ರಕಟಿಸಿದ್ದು ಇದು ಪಶ್ಚಿಮ ಬಂಗಾಳದಲ್ಲಿಯೇ ಅತ್ಯಂತ ತುರುಸಿನ ಸ್ಪರ್ಧಾ ಕಣವಾಗಿ ಮಾರ್ಪಡಲಿದೆ.
ಬಿಜೆಪಿ ಔಪಚಾರಿಕವಾಗಿ ಈ ಘೋಷಣೆ ಮಾಡಿದ್ದು, ಇದು ನಂದಿಗ್ರಾಮದಲ್ಲಿ ಗುರು (ಮಮತಾ ಬ್ಯಾನರ್ಜಿ) ಶಿಷ್ಯನ (ಸುವೇಂದು ಅಧಿಕಾರಿ) ನಡುವಿನ ಕದನವಾಗಲಿದೆ.ನಂದಿಗ್ರಾಮ ಪಶ್ಚಿಇಮ ಬಂಗಾಳದ ರಾಜಕೀಯದ ಚಂಡಮಾರುತದ ಕೇಂದ್ರ ಬಿಂದುವಾಗಲಿದ್ದು, ಗೆದ್ದರೆ ಮಮತಾಗೆ ಮುಖ್ಯಮಂತ್ರಿ ಪಟ್ಟ,  ಸೋತರೆ ಏನು ಎಂಬುದು ಗೊತ್ತಿಲ್ಲ.
ನಂದಿಗ್ರಾಮವು ತೃಣಮೂಲ ಕಾಂಗ್ರೆಸ್‌ ಎಡಪಂಥೀಯ ಕೋಟೆಯನ್ನು ಛಿದ್ರಗಿಳಿಸಿ ಮಮತಾ ಬಾನರ್ಜಿ ಅಧಿಕಾರಕ್ಕೆ ಬರಲು ಕಾರಣವಾದ ಗ್ರಾಮ, ಆ ದಿನಗಳಲ್ಲಿ, ಸುವೇಂದು ಅಧಿಕಾರಿ ತೃಣಮೂಲಕಾಂಗ್ರೆಸ್‌ನ ವಾಸ್ತುಶಿಲ್ಪಿ ಮತ್ತು ಮಮತಾ ಅವರ ಬಲಗೈ ಮನುಷ್ಯ ಆಗಿದ್ದರು ಎಂಬುದು ಗಮನಾರ್ಹ. ಈಗ ಅವರಿಬ್ಬರ ಮಧ್ಯವೇ ಕದನ ಏರ್ಪಡಲಿದೆ.
ಇದುವರೆಗೂ ನಂದಿಗ್ರಾಮ ಪ್ರತಿನಿಧಿಸುತ್ತಿದ್ದ ಹಾಗೂ ಬಂಗಾಳದ ಪ್ರಬಾವಸಾಲಿ ರಾಜಕಾರಣಿ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್‌ನಲ್ಲಿ ಮಮತಾ ಅಳಿಯನ ವಿರುದ್ಧ ಧ್ವನಿ ಎತ್ತಿ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ ಮೇಲೆ ಮಮತಾ ನಂದಿಗ್ರಾಮದಲ್ಲಿ ಬೃಹತ್‌ ಸಮಾವೇಶ ಮಾಡಿದ್ದರು ಹಾಗೂ ನಂದಿಗ್ರಾಮದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
ಇದಕ್ಕೆ ಪ್ರತಿಯಾಗಿ ಎರಡೇ ದಿನಗಳಲ್ಲಿ ಅದಕ್ಕಿಂತ ದೊಡ್ಡ ಸಮಾವೇಶ ಮಾಡಿದ ಸವೇಂದು ಅಧಿಕಾರಿ ಮಮತಾ ಅವರಿಗೆ ಪಂಥಾಹ್ವಾನ ನೀಡಿ ೫೦ ಸಾವಿರ ಮತಗಳಿಂದ ಮಮತಾ ಅವರನ್ನು ಸೋಲಿಸದಿದ್ದರೆ ರಾಜಕೀಯ ತೊರೆಯವುದಾಗಿ ಘೋಷಿಸಿದ್ದರು. ಈಗ ಒಂದು ದಶಕದ ನಂತರ ನಮದಿಗ್ರಾಮ ಚುನಾವನಾ ಕಾರಣಕ್ಕಾಗಿ ರಾಷ್ಟ್ರಾದ್ಯಂತ ಗಮನ ಸೆಳೆದಿದೆ. ಎರಡು ಪ್ರಬಲ ನಾಯಕರ ಸ್ಪರ್ಧೆಯಾಗಿ ಮಾರ್ಪಟ್ಟಿದೆ.ಇದು ರಾಜಕೀಯ ಕದನಕ್ಕಿಂತ ಹೆಚ್ಚು ವೈಯಕ್ತಿಕ ಕದನವಾಗಿ ಪರಿಣಮಿಸಿದ್ದರಿಂದ ಗುರು-ಶಿಷ್ಯರ ಕದನದಲ್ಲಿ ಗೆಲ್ಲುವವರು ಯಾರು ಎಂಬುದು ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಅದಾನಿ ಷೇರುಗಳ ಕುಸಿತದ ಮಧ್ಯೆ ಬ್ಯಾಂಕಿಂಗ್ ವಲಯ ಸ್ಥಿರವಾಗಿದೆ ಎಂದ ಆರ್‌ಬಿಐ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement