ತಮಿಳುನಾಡಿನಲ್ಲಿ ಒಂದು ಸಾವಿರ ಕೋಟಿ ರೂ.ಕಪ್ಪು ಹಣ ಪತ್ತೆ

ನವ ದೆಹಲಿ: ತಮಿಳುನಾಡಿನ ಚಿನ್ನದ ವ್ಯಾಪಾರಿಗಳು 1 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಕಪ್ಪು ಹಣ ವ್ಯವಹಾರ ನಡೆಸಿರುವುದನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಮಾ.4ರಂದು ಐಟಿ ಅಧಿಕಾರಿಗಳು ಚೆನ್ನೈ , ಮುಂಬೈ, ಕೊಯಮತ್ತೂರು, ಮಧುರೈ, ತಿರುಚಿನಾಪಳ್ಳಿ, ತ್ರಿಶೂರ್, ನೆಲ್ಲೂರು ಸೇರಿದಂತೆ 27ಕ್ಕೂ ಹೆಚ್ಚು ಚಿನ್ನದ ಮಳಿಗೆಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ 1.2 ಕೋಟಿ ರೂ. ನಗದು ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದರು. ದಾಖಲೆಗಳನ್ನು ಪರಿಶೀಲಿಸಿದಾಗ ಚಿನ್ನದ ವ್ಯಾಪಾರಿಗಳು ಲೆಕ್ಕಕ್ಕೆ ಸಿಗದ ಹಣ , ಬೋಗಸ್ ಕ್ಯಾಶ್ ಬಿಲ್‍ಗಳು, ಸುಳ್ಳು ಲೆಕ್ಕ ಬರೆದಿಟ್ಟಿರುವುದು ಪತ್ತೆಯಾಗಿದೆ.
ನೋಟು ಬ್ಯಾನ್‌ ಸಂದರ್ಭದಲ್ಲಿ ಚಿನ್ನದ ವ್ಯಾಪಾರಿಗಳು ಬೋಗಸ್ ಬಿಲ್‍ಗಳನ್ನು ಸೃಷ್ಟಿಸಿ ಕೋಟ್ಯಂತರ ರೂ. ಹಣ ಬದಲಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಚಿನ್ನದ ವ್ಯಾಪಾರಿಗಳು ಅಕ್ರಮವಾಗಿ ಸ್ಥಳೀಯ ಫೈನಾನ್ಷಿಯರ್‍ಗಳಿಗೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಲೆಕ್ಕಕ್ಕೆ ಸಿಗದಷ್ಟು ಚಿನ್ನದ ವ್ಯಾಪಾರ ಮಾಡಿ ತಪ್ಪು ಲೆಕ್ಕ ನಮೂದಿಸಿದ್ದಾರೆ. ಇದುವರೆಗೂ ತಮಿಳುನಾಡಿನ ಚಿನ್ನದ ವ್ಯಾಪಾರಿಗಳು ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಒಂದು ಸಾವಿರ ಕೋಟಿಗೂ ಹೆಚ್ಚು ಕಳ್ಳ ವ್ಯವಹಾರ ನಡೆಸಿರುವುದನ್ನು ಆದಾಯ ಇಲಾಖೆ ಅಕಾರಿಗಳು ಬಹಿರಂಗ ಪಡಿಸಿದ್ದಾರೆ.
ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಏ.6ರಂದು ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿನ್ನದ ಮಳಿಗೆಗಳ ಮೇಲೆ ದಾಳಿ ನಡೆಸಿ ಒಂದು ಸಾವಿರ ಕೋಟಿಗೂ ಹೆಚ್ಚು ಕಪ್ಪು ಹಣ ವ್ಯವಹಾರ ನಡೆಸಿರುವುದನ್ನು ಪತ್ತೆ ಹಚ್ಚಿರುವುದು ಸಂಚಲನ ಸೃಷ್ಟಿಸಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ನಳಂದಾದಲ್ಲಿ 1200 ವರ್ಷಗಳಷ್ಟು ಪುರಾತನವಾದ ಎರಡು ವಿಗ್ರಹಗಳು ಪತ್ತೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 3

  1. Geek

    ಇದು ಕಪ್ಪುಹಣ ಹಿಡಿಯಲು ಮಾಡಿದ ದಾಳಿಯೋ ಅಥವಾ ಚುನಾವಣಾ ಸಂದರ್ಭದಲ್ಲಿ ಬ್ಲಾಕ್ ಮೇಲ್ ತಂತ್ರವೋ?

ನಿಮ್ಮ ಕಾಮೆಂಟ್ ಬರೆಯಿರಿ

advertisement