ಅಮೆರಿಕದಿಂದ ೩೦ ಸಶಸ್ತ್ರ ಡ್ರೋನ್‌ ಖರೀದಿಗೆ ಭಾರತ ಚಿಂತನೆ

ಭಾರತ ತನ್ನ ಸಮುದ್ರ ಹಾಗೂ ಭೂ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ದಿಸೆಯಲ್ಲಿ ಅಮೆರಿಕದಿಂದ ೩೦ ಸಶಸ್ತ್ರ ಡ್ರೋನ್‌ಗಳನ್ನು ಖರೀದಿಸಲು ಮುಂದಾಗಿದೆ.
ನೆರೆಯ ಪಾಕಿಸ್ತಾನ ಹಾಗೂ ಚೀನಾದಲ್ಲಿ ಉದ್ವಿಗ್ನತೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಡ್ರೋನ್‌ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಯಾನ್‌ ಡಿಯಾಗೊ ಮೂಲದ ಜನರಲ್‌ ಅಟಾಮಿಕ್ಸ್‌ ತಯಾರಿಸಿದ ಎಂಕ್ಯು ೯-ಬಿ ಪ್ರಿಡೇಟರ್‌ ಡ್ರೋನ್‌ಗಳನ್ನು ೩೦೦ ಕೋಟಿ ಡಾಲರ್‌ ನೀಡಿ ಖರೀದಿಸಲು ನಿರ್ಧರಿಸಿದೆ. ಸದ್ಯ ದೇಶದಲ್ಲಿರುವ ಡ್ರೋನ್‌ಗಳು ಕೇವಲ ಕಣ್ಗಾವಲು ಹಾಗೂ ವಿಚಕ್ಷಣ ಕಾರ್ಯಗಳಿಗೆ ಮಾತ್ರ ಬಳಕೆಯಾಗುತ್ತವೆ.
ಹಿಂದೂ ಮಹಾಸಾಗರ ಹಾಗೂ ಆಗ್ನೇಯ ಏಷ್ಯಾದ ಕೆಲ ಪ್ರದೇಶಗಳಲ್ಲಿ ಚೀನಾದ ಪ್ರಭಾವ ಎದುರಿಸಲು ಕೇಂದ್ರ ಸರಕಾರ ಶಸ್ತ್ರಾಸ್ರ್ರ ಆಧುನೀಕರಣಕ್ಕೆ ಮುಂದಾಗಿದೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಮಾರ್ಚ್‌ ಅಂತ್ಯದಲ್ಲಿ ಭಾರತಕ್ಕೆ ಬರಲಿದ್ದು, ಈ ಸಂದರ್ಭದಲ್ಲಿ ರಕ್ಷಣಾ ಕ್ರಮಗಳ ಆಧುನೀಕರಣದ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement