ಮ್ಯಾನ್ಮಾರ್: ಸೈನ್ಯದ ಮುಂದೆ ಮಂಡಿಯೂರಿ ಮಕ್ಕಳನ್ನು ಬಿಟ್ಟುಬಿಡಿ ನನ್ನ ಕೊಂದು ಬಿಡಿ ಎಂದ ಸಿಸ್ಟರ್

ಯಾಂಗೂನ್ : ಉತ್ತರ ಮ್ಯಾನ್ಮಾರ್ ನ ನಗರವೊಂದರಲ್ಲಿ ಮಂಡಿಯೂರಿ ಕುಳಿತ ಸಿಸ್ಟರ್ ಆನ್ ರೋಸ್ ನು ತವಾಂಗ್ ಅವರು ಭಾರಿ ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳ ಮುಂದೆ ಮಕ್ಕಳನ್ನು’ ಬಿಟ್ಟು ತಮ್ಮ ಪ್ರಾಣ ತೆಗೆಯುವಂತೆ ಬೇಡಿಕೊಂಡಿರುವ ದೃಶ್ಯ ಸದ್ಯ ವೈರಲ್ ಆಗುತ್ತಿದೆ.
ಕ್ಯಾಥೋಲಿಕ್ ಸನ್ಯಾಸಿನಿ ಪ್ರತಿಭಟನಾ ನಿರತರ ಮೇಲೆ ದಾಳಿ ನಡೆಸಲು ಸಿದ್ಧವಾಗಿದ್ದ ಮಿಲಿಟರಿ ಎದುರು ಆಕೆ ಬೇಡಿಕೊಳ್ಳುತ್ತಿರುವ ದೃಶ್ಯಕ್ಕೆ ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮಂಡಿಯೂರಿ ಕುಳಿತ ಸಿಸ್ಟರ್… ಮಕ್ಕಳನ್ನು ಗುಂಡಿಟ್ಟು ಕೊಲ್ಲಬೇಡಿ, ಚಿತ್ರಹಿಂಸೆ ಕೊಡಬೇಡಿ, ಬದಲಿಗೆ ನನ್ನನ್ನು ಗುಂಡಿಟ್ಟು ಕೊಲ್ಲಿ ಎಂದು ಬೇಡಿಕೊಳ್ಳುತ್ತಿದ್ದಳು’ ಎಂದು ತಿಳಿದು ಬಂದಿದೆ.
ಮಿಲಿಟರಿ ಫೆಬ್ರವರಿ 1ರಂದು ನಾಗರಿಕ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಪದಚ್ಯುತ ಮಾಡಿದ ನಂತರ ಮ್ಯಾನ್ಮಾರ್ ನ ಗೊಂದಲಮಯ ಘಟನೆಗಳ ಹಿನ್ನೆಲೆಯಲ್ಲಿ ಸೋಮವಾರ ಮ್ಯಾನ್ಮಾರ್ ನ ನಗರದಲ್ಲಿ ಆಕೆ ಮಾಡಿದ ಕಾರ್ಯ ಶೌರ್ಯವನ್ನು ಪ್ರದರ್ಶಿಸಿದೆ ಎಂದು ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ.
ಪ್ರಜಾಪ್ರಭುತ್ವ ಮರಳಿಸುವುದಕ್ಕೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ,ಮಿಲಿಟರಿ ಪಡೆಯಿಂದ ಬಲಪ್ರಯೋಗ, ಅಶ್ರುವಾಯು, ಜಲಫಿರಂಗಿ, ರಬ್ಬರ್ ಗುಂಡುಗಳು ಮತ್ತು ಜೀವಂತ ಗುಂಡುಗಳ ಬಳಕೆ ನಿರಂತರವಾಗಿ ನಡೆಯುತ್ತಿದೆ..

ಪೊಲೀಸರು ತಮ್ಮ ಸುತ್ತ ಮುತ್ತ, ಇದ್ದ ಸಿಸ್ಟರ್ ಆನ್ ರೋಸ್ ನು ತವ್ಂಗ್ ಮತ್ತು ಇತರ ಇಬ್ಬರು ಸನ್ಯಾಸಿಗಳಿಗೆ ತಮ್ಮನ್ನು ಬಿಟ್ಟು ಹೋಗುವಂತೆ ಮನವಿ ಮಾಡಿದರು. ಪೊಲೀಸರು ಅವರನ್ನು ಮಕ್ಕಳನ್ನು ಬಂಧಿಸಲು ಹುಡುಕುತ್ತಿದ್ದರು.
ಆ ಸಮಯದಲ್ಲಿಯೇ 45 ವರ್ಷದ ಸನ್ಯಾಸಿನಿ ಆಕೆಯ ಮೊಣ ಕಾಲು ಊರಿ ನನ್ನನ್ನು ಕೊಲ್ಲಿ ಮಕ್ಕಳನ್ನು ಬಿಟ್ಟು ಬಿಡಿ ಎಂದು ಬೇಡಿಕೊಂಡರು.
ಪೊಲೀಸರು ಪ್ರತಿಭಟನಾಕಾರರ ಗುಂಪನ್ನು ಚದುರಿಸಲು ಗುಂಡು ಹಾರಿಸಲು ಆರಂಭಿಸಿದರು. ಮಕ್ಕಳು ಗಾಬರಿಯಿಂದ ಮುಂದೆ ಓಡಿದರು… ನಾನು ಏನೂ ಮಾಡಲು ಸಾಧ್ಯವಿಲ್ಲ, ಆದರೆ ಮಕ್ಕಳಿಗೆ ಸಹಾಯ ಮಾಡಲು ಮತ್ತು ಉಳಿಸಲು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ’ ಎಂದು ಸಂನ್ಯಾಸಿನಿ ಹೇಳಿದರು
ಮೊದಲು ಒಬ್ಬ ವ್ಯಕ್ತಿಯ ತಲೆಗೆ ಗುಂಡು ತಗುಲಿ ತನ್ನ ಕಣ್ಣೆದುರಿಗೆ ಬಿದ್ದು ಸತ್ತಿರುವುದನ್ನು ಕಂಡೆ. – ನಂತರ ಅಶ್ರುವಾಯು ಸಿಡಿಯಿತು.’ಜಗತ್ತು ಕುಸಿಯುತ್ತಿರುವಂತೆ ನಗೆ ಅನಿಸಿತು. ‘ನಾನು ಅವರನ್ನು ಬೇಡಿಕೊಳ್ಳುತ್ತಿದ್ದಾಗ ಈ ಘಟನೆ ಸಂಭವಿಸಿತು ಎಂದು ನನಗೆ ತುಂಬಾ ದುಃಖವಾಗಿದೆ.’ ಎಂದು ಅವರು ಹೇಳಿದ್ದಾರೆ.
ಸೋಮವಾರದ ಘರ್ಷಣೆಯಲ್ಲಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟರು ಎಂದು ಸ್ಥಳೀಯ ರಕ್ಷಣಾ ತಂಡ ಎಎಫ್ ಪಿಗೆ ಖಚಿತಪಡಿಸಿದೆ, ಆದರೆ ಜೀವಂತ ಗುಂಡುಗಳು ಅಥವಾ ರಬ್ಬರ್ ಗುಂಡುಗಳನ್ನು ಬಳಸಲಾಗಿದೆಯೇ ಎಂಬುದನ್ನು ಅದು ಖಚಿತಪಡಿಸಿಲ್ಲ.

4.2 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement