ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ನ್ಯಾಯಾಲಯ ಮಾರ್ಚ್ 25ರವರೆಗೂ ರಾಷ್ಟ್ರೀಯ ತನಿಖಾ ದಳದ (ಎನ್ವಐಎ)ಶಕ್ಕೆ ನೀಡಿದೆ.
ಶನಿವಾರ ಮಧ್ಯರಾತ್ರಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. 12 ತಾಸು ನಿರಂತರವಾಗಿ ಪ್ರಶ್ನಿಸಿದ ಬಳಿಕ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಬಂಧಿಸಲಾಗಿದೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದರು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಭಾನುವಾರ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು, ವಿಚಾರಣೆ ನಡೆಸಿದ ನ್ಯಾಯಾಲಯ ಮಾರ್ಚ್ 25ರವರೆಗೂ ವಾಜೆ ಅವರನ್ನು ಎನ್ ಐಎ ತನಿಖೆಗೆ ನೀಡಿದೆ.
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮನೆ ಅಂಟಾಲಿಯಾ ಬಳಿ ಸ್ಫೋಟಕ ತುಂಬಿದ ವಾಹನ ಪತ್ತೆಯಾದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರನ್ನು ಶನಿವಾರ ರಾತ್ರಿ 12 ಗಂಟೆಗಳ ಕಾಲ ಪ್ರಶ್ನಿಸಿದ ನಂತರ ಬಂಧಿಸಿದೆ.
ತಮ್ಮ ಹೇಳಿಕೆಯನ್ನು ದಾಖಲಿಸಲು ವಾಜ್ ಅವರು ಬೆಳಿಗ್ಗೆ 11.30 ರ ಸುಮಾರಿಗೆ ದಕ್ಷಿಣ ಮುಂಬೈನ ಕುಂಬಲ್ಲಾ ಬೆಟ್ಟದಲ್ಲಿರುವ ಏಜೆನ್ಸಿಯ ಕಚೇರಿ ತಲುಪಿದ್ದರು. ಶನಿವಾರ ತಡರಾತ್ರಿ ಅಂದರೆ ರಾತ್ರಿ ೧೧.೫೦ಕ್ಕೆ ಸಚಿನ್ ವಾಝೆ ಅವರನ್ನು ಬಂಧಿಸಲಾಗಿದೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.
ಫೆಬ್ರವರಿ 25 ರಂದು ಕಾರ್ಮೈಕಲ್ ರಸ್ತೆಯ ಅಂಬಾನಿಯ ಮನೆಯ ಬಳಿ ನಿಲ್ಲಿಸಿದ್ದ ಸ್ಕಾರ್ಪಿಯೋದಲ್ಲಿ ಕೆಲವು ಜೆಲೆಟಿನ್ ತುಂಡುಗಳು ಮತ್ತು ಬೆದರಿಕೆ ಪತ್ರ ಇದ್ದುದು ಪತ್ತೆಯಾಗಿತ್ತು.
ಈ ಸ್ಕಾರ್ಪಿಯೋ ಮಾಲೀಕ ಎನ್ನಲಾದ ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರಾನ್ ಅವರ ಸಾವಿನ ಪ್ರಕರಣದಲ್ಲಿ “ಎನ್ಕೌಂಟರ್ ಸ್ಪೆಷಲಿಸ್ಟ್” ವಾಝೆ ಕೂಡ ಆರೋಪ ಎದುರಿಸುತ್ತಿದ್ದಾರೆ. ಮಾರ್ಚ್ 5 ರಂದು ಥಾಣೆ ಜಿಲ್ಲೆಯ ಕೊಲ್ಲಿಯಲ್ಲಿ ಹಿರಾನ್ ಶವವಾಗಿ ಪತ್ತೆಯಾಗಿದ್ದರು.
ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಹಿರೆನ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದೆ. ಹಿರೆನ್ ಶವ ಪತ್ತೆಯಾದ ಕೆಲ ದಿನಗಳ ನಂತರ ಎಟಿಎಸ್ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.
ಶನಿವಾರ ವಾಝೆ ಅವರ ಹೇಳಿಕೆ ದಾಖಲಿಸುವಾಗ, ಎನ್‌ಐಎ ಮುಂಬೈನ್ ಕ್ರೈಂ ವಿಭಾಗದ ಸಿಪಿ ನಿತಿನ್ ಅಲಕ್ನೂರ್ ಮತ್ತು ಎಟಿಎಸ್ ಎಸಿಪಿ ಶ್ರೀಪಾದ್ ಕೇಲ್ ಅವರನ್ನು ಕರೆದು ಎಸ್‌ಯುವಿ ಪ್ರಕರಣ ಮತ್ತು ಹಿರೆನ್ ಸಾವಿನ ಪ್ರಕರಣಗಳಲ್ಲಿ ಇದುವರೆಗೆ ನಡೆದ ತನಿಖೆಯ ಬಗ್ಗೆ ಮಾಹಿತಿ ಪಡೆದಿದೆ. ಗಂಡನ ಅನುಮಾನಾಸ್ಪದ ಸಾವಿನಲ್ಲಿ ಹಿರೆನ್ ಪತ್ನಿ ಪೊಲೀಸ್ ಅಧಿಕಾರಿ ವಾಝೆ ವಿರುದ್ಧ ಆರೋಪಿಸಿದ್ದರು, ನಂತರದಲ್ಲಿ ಅವರನ್ನು ಮುಂಬೈ ಅಪರಾಧ ವಿಭಾಗದಿಂದ ವರ್ಗಾಯಿಸಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ