ಮಹಾರಾಷ್ಟ್ರ: 16 ಸಾವಿರ ದಾಟಿದ ದಿನವೊಂದರ ಕೊವಿಡ್‌ ಸೋಂಕು

ಮುಂಬೈ: ಮಹಾರಾಷ್ಟ್ರದಲ್ಲಿ ಭಾನುವಾರ (ಮಾರ್ಚ್ 14) 16,620 ಹೊಸ ಕೊವಿಡ್‌ -19 ಪ್ರಕರಣಗಳು ವರದಿಯಾಗಿವೆ. ಈ ವರ್ಷ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದಲ್ಲಿ 16,000 ಕೊವಿಡ್‌ -19 ಪ್ರಕರಣಗಳು ದಾಖಲಾಗಿವೆ
. ಮಾರ್ಚ್ 12 ರ ಶುಕ್ರವಾರ ಈ ವರ್ಷದ ಹಿಂದಿನ ಏಕದಿನದ ಗರಿಷ್ಠ ಏರಿಕೆ 15,817 ಆಗಿತ್ತು. ದಿನದಲ್ಲಿ 50 ಕೊವಿಡ್‌-19 ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 52,861 ಕ್ಕೆ ತಲುಪಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ 2.28%.
ಮಹಾರಾಷ್ಟ್ರದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,26,231 ತಲುಪಿದೆ.ಮುಂಬೈ ವಲಯದಲ್ಲಿ ಭಾನುವಾರ 3676 ಹೊಸ ಪ್ರಕರಣಗಳನ್ನು ದಾಖಲಿಸಿದೆ. ನಾಸಿಕ್ ವಲಯದಲ್ಲಿ 2776, ಪುಣೆ ವಲಯದಲ್ಲಿ 3609 ಹಾಗೂ ನಾಗ್ಪುರ ವಲಯದಲ್ಲಿ 2862 ಹೊಸ ಪ್ರಕರಣಗಳು ದಾಖಲಾಗಿವೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement