ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಎಸ್‌ಯುವಿ ಪತ್ತೆ ಪ್ರಕರಣ:ತಿಹಾರ ಜೈಲಿನಲ್ಲಿ ಉಗ್ರ ತೆಹ್ಸೀನ್ ಅಖ್ತರ್ ವಿಚಾರಣೆ

ಮುಂಬೈ; ಮುಖೇಶ್ ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಂಡಿಯನ್‌ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ತೆಹ್ಸೀನ್ ಅಖ್ತರ್ ಅವರನ್ನು ದೆಹಲಿ ಪೊಲೀಸರ ವಿಶೇಷ ಕೋಶದ ತಂಡವು ತಿಹಾರ್ ಜೈಲಿನೊಳಗೆ “ಸುಮಾರು ನಾಲ್ಕು ತಾಸುಗಳ ಕಾಲ” ಪ್ರಶ್ನಿಸಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ ಎಂದು ಫ್ರಿ ಪ್ರೆಸ್‌ ಜರ್ನಲ್‌ ವರದಿ ಮಾಡಿದೆ.
ತಿಹಾರ್ ಜೈಲಿನಲ್ಲಿರುವ ಅಖ್ತರ್ ಬ್ಯಾರಕ್‌ನಿಂದ ವಶಪಡಿಸಿಕೊಂಡ ಮೊಬೈಲ್ ಫೋನ್, ಅಂಬಾನಿಯ ದಕ್ಷಿಣ ಮುಂಬೈ ಮನೆಯ ಹೊರಗೆ ಜೆಲೆಟಿನ್ ತುಂಡುಗಳೊಂದಿಗೆ ಎಸ್‌ಯುವಿ ನಿಲುಗಡೆ ಮಾಡಿದಕ್ಕೆ ಜವಾಬ್ದಾರಿ ಹೊತ್ತ ಜೈಶ್-ಉಲ್-ಹಿಂದ್ ಬಳಸಿದ ಟೆಲಿಗ್ರಾಮ್ ಚಾನೆಲ್ ರಚಿಸಲು ಬಳಸಲಾಗಿದೆ ಎಂದು ಶಂಕಿಸಲಾಗಿದೆ
ಇಂಡಿಯನ್‌ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಅಖ್ತರನನ್ನು 2014ರಲ್ಲಿ ಬಂಧಿಸಲಾಗಿತ್ತು. ಮೂಲಗಳ ಪ್ರಕಾರ, ದೆಹಲಿ ಪೊಲೀಸರ ವಿಶೇಷ ಸೆಲ್ ತಂಡವು ಗುರುವಾರ ರಾತ್ರಿ ಜೈಲು ಆಡಳಿತ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆತನ ಬ್ಯಾರಕ್‌ನಿಂದ ವಶಪಡಿಸಿಕೊಂಡ ಮೊಬೈಲ್‌ ಫೋನಿಗೆ ಸಂಬಂಧಿಸಿದಂತೆ ಅಖ್ತರ್‌ನನ್ನು ಪ್ರಶ್ನಿಸಲು ನ್ಯಾಯಾಲಯದಿಂದ ಅನುಮತಿ ಕೋರಿದೆ.
ತಂಡಕ್ಕೆ ತಿಹಾರ್‌ನ ಸೆಂಟ್ರಲ್ ಜೈಲು ಸಂಖ್ಯೆ 8 ರಲ್ಲಿ ಪ್ರತ್ಯೇಕ ಕೊಠಡಿ ನೀಡಲಾಯಿತು. ಅಲ್ಲಿ ಅವರನ್ನು ಅಖ್ತರನನ್ನು ಪ್ರಶ್ನಿಸಲಾಯಿತು. ಈತನನ್ನು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆಗೊಳಪಡಿಸಲಾಯಿತು ಮತ್ತು ವಶಪಡಿಸಿಕೊಂಡ ಫೋನ್ ಬಗ್ಗೆ ಪ್ರಶ್ನಿಸಲಾಯಿತು. ಬೇರೆ ಯಾವುದೇ ಕೈದಿಯನ್ನು ಪ್ರಶ್ನಿಸಲಾಗಿಲ್ಲ” ಎಂದು ಮೂಲಗಳು ತಿಳಿಸಿವೆ. .
ಹಿಂದಿನ ದಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ನಮ್ಮ ತಂಡ ತಿಹಾರ್‌ನಲ್ಲಿದೆ ಮತ್ತು ನಾವು ಅಖ್ತರ್‌ನನ್ನು ಪ್ರಶ್ನಿಸಲು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದೇವೆ ಮತ್ತು ಅದರ ಆಧಾರದ ಮೇಲೆ, ಅಗತ್ಯವಿದ್ದರೆ ನಾವು ಇತರ ಕೈದಿಗಳನ್ನು ಪ್ರಶ್ನಿಸಬಹುದು” ಎಂದು ಹೇಳಿದ್ದರು.
ಗುರುವಾರ ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಟೆಲಿಗ್ರಾಮ್ ಚಾನೆಲ್ ಮೂಲಕ ಜೈಷ್-ಉಲ್-ಹಿಂದ್ ಸ್ಫೋಟಕಗಳಿಂದ ತುಂಬಿದ ಎಸ್ಯುವಿಯನ್ನು ಕೈಗಾರಿಕೋದ್ಯಮಿ ನಿವಾಸದ ಹೊರಗೆ ನಿಲ್ಲಿಸುವ ಜವಾಬ್ದಾರಿ ಹೊತ್ತಿದ್ದ ಟೆಲಿಗ್ರಾಮ ಸಂದೇಶವ್ನು ದೆಹಲಿಯ ತಿಹಾರ್ ಪ್ರದೇಶದಲ್ಲಿ ರಚಿಸಲಾಗಿದೆ ಎಂದು ಹೇಳಿದ್ದರು. ಟೆಲಿಗ್ರಾಮ್ ಚಾನೆಲ್ ಅನ್ನು ರಚಿಸಿದ ಫೋನ್‌ನ ಸ್ಥಳವನ್ನು ಪತ್ತೆಹಚ್ಚಲು ಮುಂಬೈ ಪೊಲೀಸರು ಖಾಸಗಿ ಸೈಬರ್ ಏಜೆನ್ಸಿ ಸಹಾಯ ಪಡೆದಿದ್ದರು. ತನಿಖೆಯ ವೇಳೆ ದೆಹಲಿಯ ತಿಹಾರ್ ಜೈಲಿನ ಬಳಿ ಫೋನ್ ಇರುವ ಸ್ಥಳವನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದರು.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement