ಪ್ರಾಚೀನ ದೇವಸ್ಥಾನಗಳ ನಿರ್ವಹಣೆ ಸಾಧ್ಯವಾಗದಿದ್ರೆ ಭಕ್ತರಿಗೆ ಹಸ್ತಾಂತರಿಸಿ: ತಮಿಳುನಾಡು ಸರ್ಕಾರಕ್ಕೆ ಸದ್ಗುರು ಸಲಹೆ

ತಮಿಳುನಾಡು ಸರ್ಕಾರ ಪ್ರಾಚೀನ ದೇವಾಲಯಗಳನ್ನು ನಿರ್ಲಕ್ಷಿಸಿದ್ದನ್ನು ಖಂಡಿಸಿರುವ   ಸದ್ಗುರು ಜಗ್ಗಿ ವಾಸುದೇವ, ನಿರ್ವಹಣೆ ಸಾಧ್ಯವಾಗದಿದ್ದರೆ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಕಲೆ ಹಾಗೂ ವಾಸ್ತುಶಿಲ್ಪ ಸಾರುವ, ಇತಿಹಾಸ ಹೊಂದಿದ ಸಹಸ್ರಾರು ದೇವಾಲಯಗಳು ನಾಶವಾಗುತ್ತಿವೆ. ದೇವಾಲಯಗಳನ್ನು ತೆರವುಗೊಳಿಸಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ರಾಜ್ಯದಲ್ಲಿ ಪ್ರಾಚೀನ ದೇವಾಲಯಗಳು ಕೆಟ್ಟ ಸ್ಥಿತಿಯಲ್ಲಿವೆ ಎಂಬುದನ್ನು ಯುನೆಸ್ಕೊ ಹೇಳಿರುವುದನ್ನು ಸದ್ಗುರು ಉಲ್ಲೇಖಿಸಿದ್ದಾರೆ.  ಅವುಗಳ ನಿರ್ವಹಣೆಗಾಗಿ ಸರಕಾರ ಸಮರ್ಥ ಮಂಡಳಿಗಳನ್ನು ರಚನೆ ಮಾಡಬೇಕು.
ಕಳೆದ ವರ್ಷ ಮದ್ರಾಸ್ ಹೈಕೋರ್ಟ್‌ಗೆ ಸರ್ಕಾರಿ ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿ ಇಲಾಖೆ ವರದಿ ಸಲ್ಲಿಸಿದ್ದನ್ನು ಉಲ್ಲೇಖಿಸಿದ ಇಷಾ ಫೌಂಡೇಶನ್‌ನ ಮುಖ್ಯಸ್ಥ  ಸದ್ಗುರು, 11,999 ದೇವಾಲಯಗಳಲ್ಲಿ ಒಂದೇ ಒಂದು ಪೂಜೆ ನಡೆಯುತ್ತಿಲ್ಲ. 37,000 ದೇವಾಲಯಗಳು ಪೂಜೆ, ನಿರ್ವಹಣೆ, ಭದ್ರತೆ ಇತ್ಯಾದಿಗಳಿಗೆ ಕೇವಲ ಒಬ್ಬ ವ್ಯಕ್ತಿಯನ್ನು ನೇಮಿಸಿವೆ ಎಂದು ತಿಳಿಸಿದರು.
ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯು 85 ಗುರುದ್ವಾರಗಳನ್ನು ನಿರ್ವಹಿಸುತ್ತದೆ ಮತ್ತು ಅವರ ಬಜೆಟ್ ವರ್ಷಕ್ಕೆ 1,000 ಕೋಟಿ ರೂ. ಅವರ ಸಮುದಾಯಕ್ಕೆ ಸೇವೆ ಸಲ್ಲಿಸುವಲ್ಲಿ ಅವರು ಎಷ್ಟು ದೊಡ್ಡ ಕೆಲಸ
ಮಾಡುತ್ತಿದ್ದಾರೆಂದು ನೋಡಿದರೆ ಗೊತ್ತಾಗುತ್ತದೆ. ಮತ್ತೊಂದೆಡೆ, ೧೨೮ ಕೋಟಿ ರೂ.ಗಳಲ್ಲಿ 44,000 ದೇವಾಲಯಗಳ ನಿರ್ವಹಣೆ ಹೇಗೆ ಸಾಧ್ಯ ಎಂಬುದನ್ನು ಆಲೋಚಿಸಬೇಕು ಎಂದರು.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement