ದೆಹಲಿ ಬಾಟ್ಲಾ ಎನ್‌ಕೌಂಟರ್‌ ಪ್ರಕರಣ: ಉಗ್ರ ಅರಿಜ್‌ ಖಾನಗೆ ಮರಣದಂಡನೆ

ಚಿತೃ ಕೃಪೆ-ಇಂಟರ್ನೆಟ್, ‌ ಬಾಟ್ಲಾ ಹೌಸ್‌ ಎನ್ಕೌಂಟರ್‌ನಲ್ಲಿ ಹುತಾತ್ಮರಾದ ಮೋಹನಚಂದ ಶರ್ಮಾ

 

 

ನವ ದೆಹಲಿ: 2008 ರ ಬಾಟ್ಲಾ ಹೌಸ್ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕೊಲೆ ಮತ್ತು ಇತರ ಅಪರಾಧಗಳಿಗಾಗಿ ದೆಹಲಿ ನ್ಯಾಯಾಲಯ ಸೋಮವಾರ ಉಗ್ರ ಅರಿಜ್ ಖಾನ್ ಅವರಿಗೆ ಮರಣದಂಡನೆ ವಿಧಿಸಿದೆ.ನ್ಯಾಯಾಲಯವು ಈ ಪ್ರಕರಣವನ್ನು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಹೇಳಿದೆ.
ಇದಕ್ಕೂ ಮೊದಲು, ಖಾನ್ ಗೆ ಪೊಲೀಸರು ಮರಣದಂಡನೆ ಕೋರಿದ್ದರು, ಈತ ಭಯೋತ್ಪಾದಕ ಸಂಘಟನೆಯಾದ ಇಂಡಿಯನ್‌ ಮುಜಾಹಿದ್ದೀನ್ ಜೊತೆ ಸಂಬಂಧ ಹೊಂದಿದ್ದ, ಇದು ಕೇವಲ ಹತ್ಯೆಯಲ್ಲ, ಆದರೆ ನ್ಯಾಯಾಂಗ ರಕ್ಷಕನಾಗಿದ್ದ ಕಾನೂನು ಜಾರಿ ಅಧಿಕಾರಿಯ ಕೊಲೆ ಎಂದು ಪೊಲೀಸರು ವಾದಿಸಿದ್ದರು.
ಈ ಪ್ರಕರಣವು ಮರಣದಂಡನೆ ಶಿಕ್ಷೆಗೆ ಅರ್ಹವಾದ ಪ್ರಕರಣ ಎಂದು ಪೊಲೀಸರ ಪರ ಹಾಜರಾದ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ಎ. ಟಿ. ಅನ್ಸಾರಿ ಹೇಳಿದ್ದರು.ಖಾನ್ ವಕೀಲರು ಮರಣದಂಡನೆಯನ್ನು ವಿರೋಧಿಸಿದ್ದರು.ಮಾರ್ಚ್ 8 ರಂದು ನ್ಯಾಯಾಲಯವು “ಅರಿಜ್ ಖಾನ್ ಮತ್ತು ಆತನ ಸಹಚರರು ಪೊಲೀಸ್ ಅಧಿಕಾರಿಯ ಹತ್ಯೆಗೆ ಕಾರಣರಾದರು ಮತ್ತು ಪೊಲೀಸ್ ಅಧಿಕಾರಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು ಎಂಬುದು ಸಾಬೀತಾಗಿದೆ” ಎಂದು ಹೇಳಿತ್ತು.
2008 ರ ದಕ್ಷಿಣ ದೆಹಲಿಯ ಜಾಮಿಯಾ ನಗರದಲ್ಲಿ ನಡೆದ ಬಾಟ್ಲಾ ಹೌಸ್ ಮುಖಾಮುಖಿಯಲ್ಲಿ ಪೊಲೀಸರ ವಿಶೇಷ ಕೋಶದ ಇನ್ಸ್‌ಪೆಕ್ಟರ್ ಶರ್ಮಾ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು 2013 ರ ಜುಲೈನಲ್ಲಿ ಭಾರತೀಯ ಮುಜಾಹಿದ್ದೀನ್ ಭಯೋತ್ಪಾದಕ ಶಹಜಾದ್ ಅಹ್ಮದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ತೀರ್ಪಿನ ವಿರುದ್ಧ ಆತನ ಮೇಲ್ಮನವಿ ಹೈಕೋರ್ಟ್‌ನಲ್ಲಿ ಬಾಕಿ ಇದೆ.ಅರಿಜ್ ಖಾನ್ ಸ್ಥಳದಿಂದ ಪರಾರಿಯಾಗಿದ್ದ ಮತ್ತು ಆತನನ್ನು ಘೋಷಿತ ಅಪರಾಧಿ ಎಂದು ಘೋಷಿಸಲಾಗಿತ್ತು. ಆತನನ್ನು ಫೆಬ್ರವರಿ 14, 2018 ರಂದು ಬಂಧಿಸಲಾಗಿತ್ತು.
2008 ರ ಸೆಪ್ಟೆಂಬರ್ 19 ರಂದು ದೆಹಲಿಯ ಜಾಮಿಯಾ ನಗರದಲ್ಲಿ ನಡೆದ ಬಾಟ್ಲಾ ಎನ್ಕೌಂಟರ್ ಸಮಯದಲ್ಲಿ ನಾಲ್ವರು ಭಯೋತ್ಪಾದಕರೊಂದಿಗೆ ಅರಜ್‌ ಕಾನ್‌ ಹಾಜರಿದ್ದ , ಇದರಲ್ಲಿ ಇಬ್ಬರು ಭಾರತೀಯ ಮುಜಾಹಿದ್ದೀನ್ ಭಯೋತ್ಪಾದಕರು ಕೊಲ್ಲಲ್ಪಟ್ಟರು ಮತ್ತು ಹಾಗೂ ಇಬ್ಬರನ್ನು ಬಂಧಿಸಲಾಗಿತ್ತು. ಆದರೆ ಅರಿಜ್‌ ಖಾನ್‌ ಪರಾರಿಯಾಗಿದ್ದ.
ಇಬ್ಬರು ಶಂಕಿತ ಭಯೋತ್ಪಾದಕರಾದ ಅತೀಫ್ ಅಮೀನ್ ಮತ್ತು ಮೊಹಮ್ಮದ್ ಸಾಜಿದ್ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಶಂಕಿತರಾದ ಮೊಹಮ್ಮದ್ ಸೈಫ್ ಮತ್ತು ಜೀಶನ್‌ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.
13 ಸೆಪ್ಟೆಂಬರ್ 2008 ರಂದು ದೆಹಲಿಗೆ ಐದು ಸರಣಿ ಸ್ಫೋಟಗಳು ಸಂಭವಿಸಿ ೩೦ ಜನರು ಮೃತಪಟ್ಟಿದ್ದರು ಹಾಗೂ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು ಇದಾದ ಒಂದು ವಾರದ ನಂತರ ಬಾಟ್ಲಾ ಎನ್ಕೌಂಟರ್‌ ನಡೆದಿತ್ತು. ವಿಶೇಷ ಕೋಶದ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರು 2008 ರ ಬಟ್ಲಾ ಹೌಸ್ ಮುಖಾಮುಖಿಯಲ್ಲಿ ಹುತಾತ್ಮರಾಗಿದ್ದರು.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement