ಮಹಾರಾಷ್ಟ್ರದ ಕೋವಿಡ್ ಪ್ರಕರಣಗಳ ಹೆಚ್ಚಳವೂ… ಹಿಂದಿನ ಕಾರಣಗಳೂ…

ನವ ದೆಹಲಿ: ಕೋವಿಡ್ -19ರಿಂದ ಹೆಚ್ಚು ಹಾನಿಗೊಳಗಾದ ಭಾರತೀಯ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮಂಚೂಣಿಯಲ್ಲಿದೆ.ಇನೇನು ಮಹಾರಾಷ್ಟ್ರದಲ್ಲಿ ಕೊವಿಡ್‌ ಪ್ರಕರಣಗಳು ಕಡಿಮೆಯಾಗಿದೆ ಎಂದು ಅನಿಸುತ್ತಿರುವಾಗಲೇ ಮತ್ತೆ ದಿನನಿತ್ಯದ ಪ್ರಕರಣಗಳಲ್ಲಿ ದಿಢೀರ್‌ ಉಲ್ಬಣ ಕಂಡಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಭಾನುವಾರ ದೇಶದಲ್ಲಿ ದಿನವೊಂದರಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ ಅದರಲ್ಲಿ16 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ಅಂದರೆ ಸರಿಸುಮಾರಿ ಶೇ.65ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲಿಯೇ ದಾಖಲಾಗಿವೆ.
ದೇಶದ ಬಾಧಿತ ಅಗ್ರ 10 ಜಿಲ್ಲೆಗಳಲ್ಲಿ ಎಂಟು ಮಾಹಾರಾಷ್ಟ್ರದಲ್ಲಿಯೇ ಇದೆ. ಕಳೆದ ಒಂದು ತಿಂಗಳಲ್ಲಿ, ಅಂದರೆ ಫೆಬ್ರವರಿ 11 ರಂದು 36,917 ಇದ್ದಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಮಾರ್ಚ್ 11 ಕ್ಕೆ 1,00,240 ಕ್ಕೆ ಸಕ್ರಿಯ ಪ್ರಕರಣಗಳಿಗೆ ತಲುಪಿತ್ತು. ಇದನ್ನು ನೋಡಿ ಮಹಾರಾಷ್ಟ್ರದಲ್ಲಿ ಎರಡನೆಯ ಅಲೆ ಹೇಗೆ ಕೊವಿಡ್‌ ಪ್ರಕರಣಗಳು ಹೆಚ್ಚುವಂತೆ ಮಾಡಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು.
ಅದರೆ ಮಹಾರಾಷ್ಟ್ರದಲ್ಲಿ ವ್ಯಾಕ್ಸಿನೇಶನ್‌ (ಚುಚ್ಚುಮದ್ದು) ತೆಗೆದುಕೊಳ್ಳುವ ಪ್ರಮಾಣ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ.ಅಂದರೆ ಕಳೆದ ಕೆಲವು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಪ್ರಕರಣಗಳ ಸಂಖ್ಯೆಯ ಶೇ.50ಕ್ಕಿಂತ ಹೆಚ್ಚಿದ್ದರೂ ಮಹಾರಾಷ್ಟ್ರದಲ್ಲಿ ವ್ಯಾಕ್ಸಿನೇಶನ್‌ ಪ್ರಮಾಣ ದೇಶದ ಒಟ್ಟಾರೆ ಪ್ರಮಾಣದ ಶೇ.10ಕ್ಕಿಂತ ಕಡಿಮೆಯಿದೆ. ಇದು ಕಳವಳಕಾರಿ ಸಂಗತಿ ಎಂಬುದು ತಜ್ಞರ ಅಭಿಪ್ರಾಯ.
bimba pratibimbaಕಳೆದ ಶುಕ್ರವಾರ ಮತ್ತು ಶನಿವಾರ ದೇಶದಲ್ಲಿ ನೀಡಲಾದ 35,73,489 ಲಸಿಕೆ ಪ್ರಮಾಣಗಳಲ್ಲಿ ಕೇವಲ 3,84,922 ಲಸಿಕೆಗಳನ್ನು ಮಾತ್ರ ಮಹಾರಾಷ್ಟ್ರದಲ್ಲಿ ನೀಡಲಾಗಿದೆ. ಹೀಗಾಗಿ ತಜ್ಞರು ಮಹಾರಾಷ್ಟ್ರದ ಸರ್ಕಾರವು ವ್ಯಾಕ್ಸಿನೇಶನ್‌ ಪ್ರಮಾಣ ಹೆಚ್ಚಿಸಬೇಕು ಹಾಗೂ ಕೊವಿಡ್‌ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳುತ್ತಾರೆ.
ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ದಿನವೊಂದಕ್ಕೆ ಒಂದು ಲಕ್ಷದ ಆಸುಪಾಸಿನಲ್ಲಿ ಕೊವಿಡ್‌ ಮಾದರಿ ಪರೀಕ್ಷೆಗಳನ್ನು ಮಾಲಾಡಗುತ್ತಿದೆ. ದೇಶದ ಶೇ.೫೦ಕ್ಕಿಂತ ಹೆಚ್ಚು ಕೊವಿಡ್‌ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯದಲ್ಲಿ ದಿನವೊಂದಕ್ಕೆ ಕೊವಿಡ್‌ ಪರೀಕ್ಷೆಯ ರಾಷ್ಟ್ರೀಯ ಸರಾಸರಿ 1,63,160ಕ್ಕಿಂತ ಕಡಿಮೆಯಿದೆ. ಸಾವಿನ ಪ್ರಮಾಣ ಕೂಡ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ.
ಕಳೆದ ಗುರುವಾರ ಸಾಪ್ತಾಹಿಕ ಕೋವಿಡ್ ಮಾಹಿತಿ ನೀಡುವಾಗ ಮಹಾರಾಷ್ಟ್ರದ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಎನ್‌ಐಟಿಐ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ. ಪಾಲ್, ನಾವು ಮಹಾರಾಷ್ಟ್ರದ ಬಗ್ಗೆ ತುಂಬಾ ಚಿಂತಿತರಾಗಿದ್ದೇವೆ. ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ಇದೆ.ಈ ಲಾಕ್‌ಡೌನ್‌ ಅನ್ನು ಮರಳಿ ತರುವ ಪರಿಸ್ಥಿತಿಯನ್ನು ನಾವು ತಲುಪುತ್ತಿದ್ದೇವೆ. ಇದು ತುಂಬಾ ಗಂಭೀರವಾದ ವಿಷಯ ಎಂದು ಹೇಳಿದ್ದಾರೆ.
“ನಾವು ಕೊವಿಡ್‌ನಿಂದ ಮುಕ್ತವಾಗಿ ಉಳಿಯಬೇಕಾದರೆ, ನಮ್ಮ ಶಸ್ತ್ರಾಸ್ತ್ರಗಳಾದ ಕೋವಿಡ್-ಮಾರ್ಗಸೂಚಿ, ಆರೋಗ್ಯ ವ್ಯವಸ್ಥೆಯ ಸಿದ್ಧತೆ ಇತ್ಯಾದಿಗಳು ಬಹಳ ಮುಖ್ಯ. ವೈರಸ್ ಹೆಚ್ಚುತ್ತಿರುವ ಎಲ್ಲ ರಾಜ್ಯಗಳಿಗೆ ನಮ್ಮ ಸಲಹೆಯೆಂದರೆ ಅರ್ಹ ವ್ಯಕ್ತಿಗಳಿಗೆ ವ್ಯಾಕ್ಸಿನೇಷನ್‌ಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ.
ಆದರೆ ದೇಶದಲ್ಲಿ ನೀಡಲಾದ ಒಟ್ಟು 2,97,38,409 ಲಸಿಕೆ ಪ್ರಮಾಣಗಳಲ್ಲಿ ಕೇವಲ 27,83,323 – ಶೇಕಡಾ 9.3 ರಷ್ಟು ಮಾತ್ರ ಮಹಾರಾಷ್ಟ್ರದಲ್ಲಿ ನೀಡಲಾಗಿದೆ.
ಸಾರ್ಸ್‌-ಸಿಒವಿ-೨ ಹೊಸ ರೂಪಾಂತರಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಬಾರದು ಎಂದು ಕೇಂದ್ರ ಸರ್ಕಾರ ಹೇಳುತ್ತದೆ.
ಹೀಗಾಗಿ ವ್ಯಾಕ್ಸಿನೇಶನ್‌ ಅನ್ನು ಪರಿಣಾಮಕಾರಿಯಾಗಿ ಮಾಡಲು ಹೆಚ್ಚಿನ ಕೊವಿಡ್‌ ಬಾಧಿತ ಜಿಲ್ಲೆಗಳಿಗೆ ಆದ್ಯತೆ ನೀಡಬೇಕಾಗಿದೆ. ದೇಶದ ಅಗ್ರ 50 ಜಿಲ್ಲೆಗಳಲ್ಲಿ ಪ್ರಸ್ತುತ ಶೇಕಡಾ 50 ಪ್ರಕರಣಗಳಿವೆ. ಇಡೀ ದೇಶಕ್ಕಿಂತ ಹೆಚ್ಚಾಗಿ ಈ ಜಿಲ್ಲೆಗಳ ಮೇಲೆ ಕೇಂದ್ರೀಕರಿಸಿ ನಾವು ಸಾಮಾನ್ಯ ಜನರಿಗೆ ಲಸಿಕೆ ನೀಡಲು ಪ್ರಾರಂಭಿಸಿದರೆ, ನಾವು ಇದರಲ್ಲಿ ಪರಿಣಾಮಕಾರಿ ವೇಗವಾಗಿ ಸಾಧಿಸಲು ಸಾಧ್ಯವಾಗುತ್ತದೆ. ಮಹಾರಾಷ್ಟ್ರದಲ್ಲಿ ಹೊಸ ಲಾಕ್‌ಡೌನ್‌ಗಳು ವ್ಯಾಕ್ಸಿನೇಷನ್ ವೇಗಕ್ಕೆ ಅಡ್ಡಿಯಾಗಬಹುದು ಎಂಬ ಆತಂಕವೂ ತಜ್ಞರಿಗಿದೆ. ಮಹಾರಾಷ್ರದಲ್ಲಿ ಪ್ರಕರಣದಲ್ಲಿ ಹೆಚ್ಚಳವಾದರೆ ಪರಿಣಾಮ ಪಕ್ಕದ ರಾಜ್ಯಗಲ ಮೇಲೆಯೂ ಆಗುತ್ತದೆ. ಹೀಗಾಗಿ ಈ ಬಗ್ಗೆ ಗಡಿ ರಾಜ್ಯಗಳೂ ಎಚ್ಚರ ವಹಿಸಬೇಕಿದೆ.ಗಡಿ ಜಿಲ್ಲೆಗಳಲ್ಲಿ ವ್ಯಾಕ್ಸಿನೇಶನ್‌ಗೆ ಆದ್ಯತೆ ನೀಡಬೇಕಿದೆ.

4.4 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement