ಜಯಲಲಿತಾ ಸಾವಿಗೆ ಡಿಎಂಕೆ ಮುಖಂಡರೇ ಕಾರಣ: ಸಿಎಂ ಪಳನಿಸ್ವಾಮಿ ನೇರ ಆರೋಪ

ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಡಿಎಂಕೆ ಮುಖಂಡರಾದ ಎಂ. ಕರುಣಾನಿಧಿ ಹಾಗೂ ಸ್ಟಾಲಿನ್‌ ಕಾರಣಕರ್ತರು ಎಂದು ಆರೋಪಿಸಿದ ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ, ಡಿಎಂಕೆ ಮುಖಂಡರಿಗೆ ಜಯಲಲಿತಾ ಅವರ ಆತ್ಮ ತಕ್ಕ ಶಿಕ್ಷೆ ನೀಡುತ್ತದೆ ಎಂದು ಹೇಳಿದ್ದಾರೆ.
ಜಯಲಲಿತಾ ೨೦೧೫ರಲ್ಲಿ ಎಲ್ಲ ಆರೋಪಗಳಿಂದ ಮುಕ್ತರಾಗಿದ್ದರೂ ಡಿಎಂಕೆ ಮುಖಂಡರು ಮೇಲ್ಮನವಿ ಸಲ್ಲಿಸಿದ್ದರಿಂದ ಜಯಲಲಿತಾ ಖಿನ್ನತೆಗೊಳಗಾದರು. ಜಯಲಲಿತಾ ಸಾವಿಗೆ ಕಾರಣರಾದ ಅವರನ್ನು ದೇವರು  ಶಿಕ್ಷಿಸಲಿದ್ದಾನೆ. ಅಮ್ಮನ ಆತ್ಮ ಅವರನ್ನು   ಶಿಕ್ಷಿಸುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆಯನ್ನು ತ್ವರಿತಗೊಳಿಸುವುದಾಗಿ ಡಿಎಂಕೆ ಮುಖ್ಯಸ್ಥ    ಸ್ಟಾಲಿನ್ ನೀಡಿದ ಭರವಸೆಯ ಬಗ್ಗೆ ಪ್ರಶ್ನಿಸಿದಾಗ, ಮಾಜಿ ಮುಖ್ಯಮಂತ್ರಿಯವರ ಸಾವಿಗೆ ಡಿಎಂಕೆ ಮುಖಂಡರೇ ಕಾರಣ ಎಂದು ಹೇಳಿದ್ದಾರೆ.
ಜಯಲಲಿತಾ ಅವರ ಮೇಲೆ ಖೊಟ್ಟಿ ಆರೋಪ ಹೊರಿಸಲಾಗಿತ್ತು. ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದರೂ ಡಿಎಂಕೆ ಮುಖಂಡರು ಮೇಲ್ಮನವಿ ಸಲ್ಲಿಸಿದರು. ಇದರಿಂದ ಅಮ್ಮ ಜಯಲಲಿತಾಗೆ ಖಿನ್ನತೆ ಹೆಚ್ಚಾಯಿತು. ಸೂಕ್ತ ಚಿಕಿತ್ಸೆ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ನಿಧನರಾದರು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ದ್ವೇಷ ಭಾಷಣ : ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ ; ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

5 / 5. 2

ಶೇರ್ ಮಾಡಿ :

  1. Geek

    ಎಲೆಕ್ಷನ್ ಬಂದಾಗ ಸಾವಿನ ಸುದ್ದಿ ಎತ್ತಿ ವೋಟು ಪಡೆಯುವ ಬುದ್ಧಿ ಜೋರಾಗುತ್ತದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement