ಸದ್ದಾಂ ಹುಸೇನ್, ಗಡಾಫಿ ಸಹ ಚುನಾವಣೆ ಗೆಲ್ಲುತ್ತಿದ್ದರು: ಬಿಜೆಪಿ ವಿರುದ್ಧ ರಾಹುಲ್‌ ವಾಗ್ದಾಳಿ

ನವ ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇರಾಕ್​ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಮತ್ತು ಲಿಬಿಯಾದ ಮುಅಮ್ಮರ್ ಗಡಾಫಿ ಕೂಡಾ ಚುನಾವಣೆ ಗೆಲ್ಲುತ್ತಿದ್ದರು ಎಂದು ಹೇಳಿದ್ದಾರೆ.
ಮಂಗಳವಾರ ಅಮೆರಿಕದ ಬ್ರೌನ್ ಯುನಿವರ್ಸಿಟಿಯ ಪ್ರೊಫೆಸರ್ ಅಶುತೋಷ್ ವಾರ್ಷ್ಣೆ ಅವರೊಂದಿಗೆ ಆನ್​ಲೈನ್ ಸಂವಾದ ನಡೆಸಿದ ರಾಹುಲ್, 21ನೇ ಶತಮಾನದಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಸಂಸ್ಥೆಗಳನ್ನು ನಿಯಂತ್ರಿಸಿದರೆ ಚುನಾವಣಾ ಪ್ರಜಾಪ್ರಭುತ್ವ ನಾಶ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸದ್ದಾಮ್ ಹುಸೇನ್, ಗಡಾಫಿ ಕೂಡಾ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಮತದಾನದ ಮೂಲಕ ಅಲ್ಲ, ಮತಗಳನ್ನು ರಕ್ಷಿಸಲು ಅಲ್ಲಿ ಯಾವುದೇ ಸಾಂಸ್ಥಿಕ ಚೌಕಟ್ಟು ಇರಲಿಲ್ಲ, ಹೀಗಾಗಿ ಅವರು ಗೆಲ್ಲುತ್ತಿದ್ದರು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಬೇರೆ ನಾಯಕರಿಗೆ ನೇತೃತ್ವ ನೀಡಲು ನೀವು ದಾರಿ ಮಾಡಿಕೊಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ವಿಚಾರಧಾರೆಗಳ ವಿರುದ್ಧ ಹೋರಾಡುತ್ತಿದ್ದು, ಇದನ್ನು ಮುಂದುವರಿಸುತ್ತೇನೆ. ನನ್ನ ಹೆಸರು ಏನು ಅಥವಾ ನನ್ನ ತಾತ ಯಾರು ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಯಾರು ಒಪ್ಪಲಿ ಬಿಡಲಿ, ನಾನು ನನ್ನ ನಿರ್ದಿಷ್ಟ ಯೋಚನೆಗಳಲ್ಲಿ ಅಚಲನಾಗಿರುತ್ತೇನೆ ಎಂದು ಅವರು ಹೇಳಿದ್ದಾರೆ.
1989ರಿಂದ ನನ್ನ ಕುಟುಂಬದಿಂದ ಯಾರೊಬ್ಬರೂ ಪ್ರಧಾನಿ ಆಗಲಿಲ್ಲ. ನನಗೆ ಕಾಂಗ್ರೆಸ್​ನಲ್ಲಿ ಜವಾಬ್ದಾರಿಗಳಿವೆ. ಕಾಂಗ್ರೆಸ್​ನ ನಿರ್ದಿಷ್ಟ ವಿಚಾರಧಾರೆಯನ್ನು ನಾನು ಸಮರ್ಥಿಸುತ್ತೇನೆ. ಕಾಂಗ್ರೆಸ್​ನಲ್ಲಿ ಹೀಗಿತ್ತು, ಇಂಥವರ ಮಗನಾಗಿರುವ ಕಾರಣ ನಾನು ಹೀಗೆ ಹೇಳಬಾರದು ಎಂಬುದು ಏನಾದರೂ ಇದೆಯೇ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತಿದೆ ಎಂದು ವಿದೇಶಿ ಸಂಸ್ಥೆಗಳು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಇಲ್ಲಿನ ಪರಿಸ್ಥಿತಿ ನಮ್ಮ ಊಹೆಯನ್ನೂ ಮೀರಿದೆ. ನಾನು ಕಾಂಗ್ರೆಸ್ ಪಕ್ಷದ ವಿಚಾರಧಾರೆಯನ್ನು ಕಾಪಾಡುತ್ತಿದ್ದು, ಆರ್​ಎಸ್​ಎಸ್ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ಕಾಂಗ್ರೆಸ್ ಒಳಗೆ ಪ್ರಜಾಪ್ರಭುತ್ವ ವ್ಯವಸ್ಥೆ ಪಾಲಿಸುತ್ತಿದ್ದೇವೆ. ಹಲವಾರು ನಾಯಕರನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತಿದೆ ಎಂದು ಸ್ವೀಡನ್​ನ ವಿ-ಡೆಮ್ ಇನ್ಸಿಟ್ಯೂಟ್ ವರದಿ ಮಾಡಿತ್ತು. ಅದೇ ವೇಳೆ ಅಮೆರಿಕ ಸರ್ಕಾರದ ಎನ್​ಜಿಒ ಫ್ರೀಡಂ ಹೌಸ್, ಭಾರತದಲ್ಲಿ ಮುಕ್ತ ವಾತಾವರಣ ಎಂಬುದು ಭಾಗಶಃ ಮುಕ್ತ ವಾತಾವರಣ ಆಗಿದೆ ಎಂದು ವರದಿ ಮಾಡಿತ್ತು. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಈ ವಿದೇಶಿ ಸಂಸ್ಥೆಗಳಿಗೆ ಅವರದ್ದೇ ಆದ ನಿಲುವು ಇದೆ. ಅವರಿಂದ (ವಿದೇಶಿ ಸಂಸ್ಥೆ) ನಮಗೆ ಪ್ರಮಾಣಪತ್ರಬೇಡ. ಆದರೆ ಅವರು ಊಹಿಸಿದ್ದಕ್ಕಿಂತಲೂ ಇಲ್ಲಿನ ಪರಿಸ್ಥಿತಿ ಹದಗೆಟ್ಟಿದೆ ಎಂದು ರಾಹುಲ್‌ ಹೇಳಿದ್ದಾರೆ.
ಚುನಾವಣೆ ಎಂದರೆ ಮತಯಂತ್ರದಲ್ಲಿ ಬಟನ್ ಒತ್ತಿ ಬರುವುದು ಮಾತ್ರವಲ್ಲ. ಚುನಾವಣೆ ಎಂಬುದು ದೇಶದಲ್ಲಿರುವ ಸಂಸ್ಥೆಗಳು ಸರಿಯಾಗಿ ಕಾರ್ಯವೆಸಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸುವುದಾಗಿದೆ. ನ್ಯಾಯಾಂಗ ಸರಿಯಾಗಿದೆ ಎಂಬುದನ್ನು ಹೇಳುವುದಾಗಿದೆ. ಚುನಾವಣೆ ಎಂದರೆ ಸಂಸತ್ತಿನಲ್ಲಿ ನಡೆಯುವ ಚರ್ಚೆಯಾಗಿದೆ ಎಂದು ಅವರು ಹೇಳಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಉತ್ತರ ಪ್ರದೇಶದ ಗೊಂಡಾದ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ನಿವಾಸದಲ್ಲಿ ದೆಹಲಿ ಪೊಲೀಸರು:12 ಜನರ ಹೇಳಿಕೆ ದಾಖಲು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.7 / 5. ಒಟ್ಟು ವೋಟುಗಳು 3

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement